ಬಳ್ಳಾರಿ

ಆದರ್ಶ ಶಿಕ್ಷಕ ತಿಳುವಳ್ಳಿ ವಿರುಪಾಕ್ಷಪ್ಪ: ಡಾ. ರುದ್ರಪ್ಪ

ಆದರ್ಶ ಶಿಕ್ಷಕ ತಿಳುವಳ್ಳಿ ವಿರುಪಾಕ್ಷಪ್ಪ: ಡಾ. ರುದ್ರಪ್ಪ
ಲೋಕದರ್ಶನ ವರದಿ ಹೂವಿನಹಡಗಲಿ 16: ಅಪಾರ ಜ್ಞಾನದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಇಂದಿನ ಶಿಕ್ಷಕರಿಗೆ ಆದರ್ಶವಾಗಿದ್ದಾರೆ ಎಂದು ಬಯಲಾಟ ಅಕಾಡೆಮಿ ಸದಸ್ಯ ಡಾ. ಕೆ.ರುದ್ರ​‍್ಪ ಹೇಳಿದರು. ಇಲ್ಲಿನ ಗವಿಸಿದ್ದೇಶ್ವರ ಮಠದಲ್ಲಿ ಈಚೆಗೆ ಆಯೋಜಿಸಿದ್ದ 159ನೇ ಮಾಸಿಕ ಶಿವಾನುಭವ ಹಾಗೂ ಮಲ್ಲಿಗೆ ನಾಡಿನ ಜ್ಞಾನ ದಾಸೋಹಿ ವಿರುಪಾಕ್ಷಪ್ಪ ತಿಳುವಳ್ಳಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಭಿನಂದನಾ ಗ್ರಂಥ ಮೂಲಕ ವಿರುಪಾಕ್ಷಪ್ಪನವರ ವ್ಯಕ್ತಿತ್ವವನ್ನು ಈಗಿನ ಯುವ ಪೀಳಿಗೆಗೂ ಪರಿಚಯಿಸುವ ಕಾರ‌್ಯ ಶ್ಲಾಘನೀಯ ಎಂದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅಪಾರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ವಿರುಪಾಕ್ಷಪ್ಪರಂತಹ ಸಾಹಿತ್ಯಿಕ ಅಭಿರುಚಿ ಶಿಕ್ಷಕರು ವಿರಳ, ಅಭಿನಂದನಾ ಗ್ರಂಥ ಮೂಲಕ ಅವರ ಬದುಕನ್ನು ತೆರೆದಿಡುವ ಪ್ರಯತ್ನ ಮಾಡಿರುವುದು ಸ್ವಾಗತಾರ್ಹ ಎಂದರು. ನೀಲಗುಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ ನೇತೃತ್ವ ವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಎಂ.ಎಂ.ಗುರುಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು.ಗ್ರಂಥ ಸಂಪಾದಕರಾದ ತೊ.ಮ.ಶಂಕ್ರಯ್ಯ,ಹೆಚ್‌.ಜಿ.ಪಾಟೀಲ, ಎಚ್‌.ಎಂ.ಪಟದಯ್ಯ, ಗುತ್ತಿಗೆದಾರ ಕೆ.ಎಂ.ಚಂದ್ರ​‍್ಪ, ಮುಖ್ಯ ಶಿಕ್ಷಕ ಟಿ.ಪಿ.ವೀರೇಂದ್ರ,ಐಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ, ಜಾತಪ್ಪ, ಈಟಿ.ನಿಂಗಪ್ಪ, ನಿರುಪಮಾ ಬಸವರಾಜ,ಎಲ್‌.ಖಾದರ್ ಭಾಷಾ,ವೀರೇಶ ತಿಳುವಳ್ಳಿ ಇದ್ದರು. ಶಿಕ್ಷಕ ದಿನಾಚರಣೆ ಪ್ರಯುಕ್ತ ತಿಳುವಳ್ಳಿ ವಿರುಪಾಕ್ಷಪ್ಪ ಅವರಿಗೆ ಅಭಿನಂದನೆ ಸಮರ​‍್ಿಸಲಾಯಿತು.ಗವಿಸಿದ್ದೇಶ್ವರ ಪ್ರಕಾಶನ ದತ್ತಿ ನಿಧೀಗೆ 50ಸಾವಿರ ದೇಣಿಗೆ ನೀಡಿದ ಟಿಎಂ.ಶೋಭಾ ಶಂಕ್ರಯ್ಯ, 25 ಸಾವಿರ ರೂ ನೀಡಿದ ಸುಮಿತ್ರಾ ಹಾಗೂ ಅನುರಾಧ ಡಾ.ಚಿದಾನಂದರೆಡ್ಡಿ, ಅವರಿಗೆ ಗುರುರಕ್ಷೆ ನೀಡಲಾಯಿತು. ಐಡಿಎಫ್‌ಸಿ ಬ್ಯಾಂಕ್ ಹಾಗೂ ಕೊಂಬಳಿ ಗಾಂಧೀಜಿ ಸೇವಾ ಸಂಸ್ಥೆ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು.

ಸುದ್ದಿ ಓದಿ