ಕುರುಗೋಡು ಪಟ್ಟಣದ ಪೊಲೀಸ್ ಠಾಣೆಗೆ ಐಜಿಪಿ ಮನೀಶ್ ಖರ್ಬಿಕರ್ ಭೇಟಿ
ಲೋಕದರ್ಶನ ವರದಿ
ಬಳ್ಳಾರಿ 23: ಕುರುಗೋಡು ಪಟ್ಟಣದ ಪೊಲೀಸ್ ಠಾಣೆಗೆ ಬಳ್ಳಾರಿ ವಲಯದ ಐಜಿಪಿ ಮನೀಶ್ ಖರ್ಬಿಕರ್ ಭೇಟಿ ನೀಡಿದರು. ಬಳ್ಳಾರಿ ವಲಯದ ಐಜಿಪಿ ಮನೀಶ್ ಖರ್ಬಿಕರ್ ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ಭೇಟಿ ನೀಡಿ ಠಾಣಾ ಪರೀವೀಕ್ಷಣೆ ನಡೆಸಿದರು.
ಠಾಣಾ ವ್ಯಾಪ್ತಿಯಲ್ಲಿ ಇದುವರೆಗೂ ದಾಖಲಾಗಿರುವ ಪ್ರಕರಣಗಳ ಕಡತಗಳನ್ನು ಖುದ್ದಾಗಿ ಪರೀಶೀಲಿಸಿದರು. ಠಾಣೆಯ ಆವಣದಲ್ಲಿ ತಕ್ಕಂತೆ ಹಳ್ಳಿಗಳ ಬಗ್ಗೆ ಹಾಗೂ ಜನತೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚಿಸಿದರು. ನಂತರ ಠಾಣಾ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಹೆಚ್ಚಿನ ಅಪರಾಧಗಳು ಜರುಗದಂತೆ ಸೂಕ್ತ ಕ್ರಮವಹಿಸಿಕೊಳ್ಳಬೇಕು. ಜೊತೆಗೆ ಪೋಲಿಸರು ಎಂದರೆ ಭಯ ಪಡುವ ಸಾರ್ವಜನಿಕರಿಗೆ ಜನಸ್ನೇಹಿ ಠಾಣೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.ತೋರಣಗಲ್ಲು ಡಿವೈಎಸ್ಪಿ ಕಾಶಿಗೌಡ, ಸಿಪಿಐ ಚಂದನ್ ಗೋಪಾಲ್, ಪಿಎಸ್ಐ ಎನ್.ರಘು, ಕುಡತಿನಿ ಪಿಎಸ್ಐ ಅಮರೇಗೌಡ ಹಾಗೂ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.