ಮುಂದಗೋಡ

ಮುಂಡಗೋಡ ಪೊಲೀಸ್ ಠಾಣೆಗೆ ಐಜಿಪಿ ಅಮಿತ ಸಿಂಗ್ ಭೇಟಿ

ಮುಂಡಗೋಡ ಪೊಲೀಸ್ ಠಾಣೆಗೆ ಐಜಿಪಿ ಅಮಿತ ಸಿಂಗ್ ಭೇಟಿ

ಮುಂಡಗೋಡ 23:  ದಕ್ಷಿಣ ಕನ್ನಡ ವಿಭಾಗ ಐ ಜಿ ಪಿ ಅಮಿತ ಸಿಂಗ್ ಅವರು ಮಂಗಳವಾರ ಮದ್ಯಾಹ್ನ ಮುಂಡಗೋಡ ಪೊಲೀಸ ಠಾಣೆಗೆ ಭೇಟಿ ನೀಡಿ ಪರೀಶೀಲನೆ ನಡಿಸಿದರು. ದಕ್ಷಿಣಕನ್ನಡ ವಿಭಾಗ ಐ ಜಿ ಪಿ ಅವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ  ಕೆಲವು ಮೊಬೈಲಗಳು ಕಳೆದು ಕೊಂಡವರಿಗೆ ಅವರ ಮೊಬೈಲಗಳನ್ನು ಹುಡುಕಿಸಿ ಮಂಗಳೂರು ವಿಭಾಗ ಐ ಜಿ ಪಿ ಅವರ ಕೈಯಿಂದಲೆ ಮೊಬೈಲಗಳನ್ನು  ವಿತರಣೆ ಮಾಡಲಾಯಿತು. 

ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅವರು ಮಾತನಾಡಿ ಪಟ್ಟಣದಲ್ಲಿ ಗಾಂಜಾ ಮಟ್ಕಾ  ಇಸ್ಪೀಟ್ ಮೀಟರ್ ಬಡ್ಡಿ ದಂದೆಗಳು ಇದ್ದದೆ ಆದರೆ  ಜನರು ಪೊಲೀಸ್ ಠಾಣೆಯಲ್ಲಿ ದೂರು ಯಾಕೆ  ನೀಡುತಿಲ್ಲ, ಎಂದು ಪ್ರಶ್ನಿಸಿ, ಅಥವಾ ನಮ್ಮಲ್ಲಿ ಬಂದು ತಿಳಸಿ ಎಂದು ಹೇಳಿದರು. ಶಿರಸಿ-ಹುಬ್ಬಳ್ಳಿ ರಸ್ತೆ ಹಾಗೂ ಯಲ್ಲಾಪುರ ರಸ್ತೆ ಸಂಪೂರ್ಣ ರಸ್ತೆ ಹಾಳಾಗಿದೆ. ಶಿರಸಿಯಿಂದ ಮುಂಡಗೋಡಗೆ ಬರುವ ರಸ್ತೆ ಸಂಪೂರ್ಣ ಹಾಳಾಗಿದೆ ಕಾರಣ ಶಿರಸಿಯಿಂದ ಮುಂಡಗೋಡಗೆ ಬರಲು ಕೇವಲ 50 ನಿಮಿಷ ಬೇಕು. ಆದರೆ  ಶಿರಸಿ ಯಿಂದ್  ಮುಂಡಗೋಡಗೆ ಬರಲು 2 ಗಂಟೆಗಳ ಕಾಲ  ತೆಗಿದುಕೊಳ್ಳುತ್ತದೆ  ಎಂದು ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹೇಳಿದರು.    

ಈ  ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್, ಶಿರಸಿ ಡಿವೈಎಸ್ಪಿ ಕೆ ಎಲ್ ಗಣೇಶ್, ಮುಂಡಗೋಡ ಸಿ ಪಿ ಐ  ರಂಗನಾಥ್  ನೀಲಮ್ಮನವರ, ಪಿ ಎಸ್ ಐ  ಪರಶುರಾಮ ಮಿರ್ಜಗಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ