ತಾಳಿಕೋಟಿ

ಬಡವರನ್ನು ನಾನು ದೇವರೆಂದು ಪೂಜಿಸುತ್ತೇನೆ: ನಡಹಳ್ಳಿ

ಬಡವರನ್ನು ನಾನು ದೇವರೆಂದು ಪೂಜಿಸುತ್ತೇನೆ:  ನಡಹಳ್ಳಿ

ತಾಳಿಕೋಟಿ: ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರದಿಂದ ಸಾವಿರಾರು ಕೋಟಿ ಅನುದಾನವನ್ನು ತರುವುದರ ಜೊತೆಗೆ ನನ್ನ ಕ್ಷೇತ್ರದಲ್ಲಿರುವ ಬಡವರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಕಣ್ಣೋರೆಸುವ ಕೆಲಸವನ್ನೂ ಮಾಡಿದ್ದೇನೆ. ಬಡವರು ನನ್ನ ಪಾಲಿಗೆ ನಿಜವಾದ ದೇವರು ಎಂದು ಶಾಸಕ, ಅಧ್ಯಕ್ಷ ಕರ್ನಾಟಕ ಆಹಾರ ನಿಗಮ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು. 

ಬುಧವಾರ ಮತಕ್ಷೇತ್ರದ ಗೋನಾಳ ಪಿ.ಎನ್‌. ಗ್ರಾಮದಲ್ಲಿ ಕೆಬಿಜೆಎನ್‌ಎಲ್ ಇಲಾಖೆಯಿಂದ ನಡೆಸಲಾಗುವ ರೂ. 669.02 ಲಕ್ಷ ಮೊತ್ತದ ಗೋನಾಳ ಪಿಎನ್ - ಬಸರಕೋಡ ರಸ್ತೆ ಹಾಗೂ ರೂ. 70-00 ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. 

ಗೋನಾಳ ಗ್ರಾಮ ಮುದ್ದೇಬಿಹಾಳ ನಗರಕ್ಕೆ ಅತಿ ಹತ್ತಿರ ಇರುವ ನನಗೆ ಅತಿ ಹೆಚ್ಚು ಪ್ರೀತಿಗೆ ಪಾತ್ರವಾದ ಗ್ರಾಮ. ಇಲ್ಲಿ ಇಲ್ಲಿವರೆಗೆ ಸುಸಜ್ಜಿತವಾದ ರಸ್ತೆಗಳು ಇರಲಿಲ್ಲ. ಬಹಳ ದಿನಗಳ ಹಿಂದೆಯೇ ಈ ಕಾಮಗಾರಿ ನಡಯಬೇಕಾಗಿತ್ತು ವಿರೋಧ ಪಕ್ಷದವರ ಕುತಂತ್ರದಿಂದಾಗಿ ಆಗಿರಲಿಲ್ಲ. ಈಗ ಸುಮಾರು 7.50 ಕೋಟಿ ಕೆಲಸದ ಅನುದಾನ ಕೊಟ್ಟಿದ್ದೇನೆ. 

ಇಲ್ಲಿ ಮಾತ್ರ ಅಲ್ಲ ಮತಕ್ಷೇತ್ರದ 130 ಗ್ರಾಮಗಳಿಗೆ ಮೂಲ ಸೌಕರ್ಯವಾಗಿ 288 ಕೋಟಿ ಅನುದಾನ ಕೊಟ್ಟಿದ್ದೇನೆ. ಇವತ್ತು ಕ್ಷೇತ್ರದ ಎಲ್ಲಾ ಗ್ರಾಮಗಲ್ಲ್ಲಿಯೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯ ಮಾಡಿದ್ದೇನೆ ಎಂದರು. ಕ್ಷೇತ್ರದ 10 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಹಾಕಿಕೊಂಡು ಇಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲಾಗುವುದು ಇದಕ್ಕಾಗಿ ಸರಕಾರದಿಂದ ರೂ. 500 ಕೋಟಿ  ಅನುಧಾನ ಮಂಜೂರಾಗಿದೆ  ನಮ್ಮ ಯುವಕರು ವಿದ್ಯೆ ಎಲ್ಲಾದರೂ ಪಡೆದುಕೊಳ್ಳಲಿ ಉದ್ಯೋಗ ಮಾತ್ರ ಇಲ್ಲಿಯೇ ಮಾಡಬೇಕೆಂಬುದು ನನ್ನ ಆಶಯ, ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ಮನೆಗೆ ಒಂದು ಹಸು ಕೊಡುವ ಯೋಜನೆ ಹಾಕಿಕೊಂಡಿದ್ದೇನೆ. 

ಕೇವಲ 5 ವರ್ಷಗಳಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದ್ದೇನೆ, ಇಲ್ಲಿ 25 ವರ್ಷದಿಂದ ಇದ್ದವರಿಗೆ ಏಕೆ ಸಾದ್ಯವಾಗಲಿಲ್ಲವೆಂಬುದು ತಾವು ಅವರಲ್ಲಿ ವಿಚಾರಿಸಬೇಕು ಎಂದು ಹೇಳಿದರು. ಈ ಸಮಯದಲ್ಲಿ ಗ್ರಾಮದ ಗಣ್ಯರು, ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ