ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಬಿ.ನಾಗೇಂದ್ರ
ಬಳ್ಳಾರಿ 12: ಬಳ್ಳಾರಿ ಗ್ರಾಮೀಣ ಪ್ರದೇಶದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕತೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ತಿಳಿಸಿದರು.
ಅವರು ಸ್ಥಳೀಯ ಕೌಲ್ಬಜಾರ್ ಪ್ರದೇಶ ವ್ಯಾಪ್ತಿಯ ಬಂಡಿಹಟ್ಟಿಯಲ್ಲಿ ದಾಸಶ್ರೇಷ್ಠ ಕನಕದಾಸರ 535ನೇ ಜಯಂತಿ ಸಮಾರಂಭದಲ್ಲಿ ಶ್ರೀ ಕನಕದಾಸ ಪುತ್ಥಳಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿ ಮಾತನಾಡುತ್ತ, ಬಂಡಿಹಟ್ಟಿ ಪ್ರದೇಶದಲ್ಲಿ ಯಾವುದೇ ಕೆಲಸ ಕಾರ್ಯಗಳಿದ್ದಲ್ಲಿ ಕೂಡಲೇ ಸ್ಪಂದಿಸುವುದಾಗಿ ತಿಳಿಸಿದರಲ್ಲದೆ ಕನಕದಾಸರ ಭವನ, ಉದ್ಯಾನವನ ನಿರ್ಮಾಣಕ್ಕೂ ಸಹ ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದು ನುಡಿದರು.
ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಪದ್ಮಾವತಿ, ಉಪಮೇಯರ್ ಮಾಲನ್ಬೀ, ಬಂಡಿಹಟ್ಟಿ ಪ್ರದೇಶದ ಪಾಲಿಕೆ ಸದಸ್ಯೆ ಮಂಜುಳ ಉಮಾಪತಿ, ಮಾಜಿ ಉಪಮೇಯರ್ ಬೆಣಕಲ್ಲು ಬಸವರಾಜಗೌಡ, ಮುಖಂಡರಾದ ಎನ್.ಕೆ.ಹೆಚ್.ಗುಜರಿಬಸವರಾಜ್, ಹೊನ್ನಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಎಸ್.ವೆಂಕೋಬಣ್ಣ, ರೇಡಿಯೋಪಾರ್ಕ್ ಸೋಮು, ನಾಗಲಕೆರೆ ಗೋವಿಂದ, ಭೋವಿ ಸಮಾಜದ ಮುಖಂಡರಾದ ವಿ.ಮಹೇಶ್, ಸೆಲೆಸ್ಟಿನ್, ಎ.ಡಿ.ರವಿ, ಶ್ರೀರಾಮಲಾದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಜಿಬಸವರಾಜ, ಗೋಡ್ಲಪ್ಪ, ಮೋಹನ್, ಬಿ.ಎಂ.ಬಸಪ್ಪ, ಹಾಗೂ ಸೇವಾ ಟ್ರಸ್ಟ್ ಸರ್ವ ಪದಾಧಿಕಾರಿಗಳು, ಹಿರಿಯರಾದ ಷಣ್ಮುಖಪ್ಪ, ದೊಡ್ಡಈರ್ಪ, ಚಿದಾನಂದ, ಕೆ.ಸಣ್ಣಭೀಮಣ್ಣ, ಬಂಡಿಹಟ್ಟಿಯ ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಹೆಚ್.ದುರುಗಣ್ಣ ಮುಂತಾದವರು ಹಾಜರಿದ್ದರು.
ಶಾಸಕ ನಾಗೇಂದ್ರ ಅವರಿಗೆ ಕುರುಬ ಸಮುದಾಯದವತಿಯಿಂದ ಕಂಬಳಿ ಹಾಕಿ, ಕುರಿಮರಿಯನ್ನು ನೀಡಿ ಸನ್ಮಾನಿಸಲಾಯಿತು.
ಮರವಣಿಗೆ: ಕಾರ್ಯಕ್ರಮದ ಆರಂಭದಲ್ಲಿ ಕನಕದಾಸರ ಪುತ್ಥಳಿಯಿಂದ ಹಿಡಿದು ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಶಾಸಕ ಬಿ.ನಾಗೇಂದ್ರ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಳಸ, ಡೊಳ್ಳು, ಕೋಲಾಟದಂತಹ ಜನಪದ ವಾದ್ಯಮೇಳಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಸಾವಿರಾರು ಜನರು ಭಾಗವಹಿಸಿದ್ದರು.