ವಿಶೇಷ ಚೇತನರ ಸೌಲಭ್ಯಕ್ಕೆ ಧ್ವನಿಯಾಗುವೆ: ಶಾಸಕ ಭೀಮಾನಾಯ್ಕ್
ಹಗರಿಬೊಮ್ಮನಹಳ್ಳಿ 23: ವಿಶೇಷ ಚೇತನರಿಗೆ ಪ್ರಸ್ತುತ ಶೇಕಡ 5ರಷ್ಟು ಮೀಸಲನ್ನು ಶೇಕಡಾ 7ಕ್ಕೆ ಹೆಚ್ಚಿಸಬೇಕು ಹಾಗೂ ಸಮರ್ಕ ಸೌಲಭ್ಯಕ್ಕೆ ಅಧಿವೇಶನದಲ್ಲಿ ಧ್ವನಿಯಾಗುವೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ವಿವಿಧೋದ್ದೇಶ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟಗಳ ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಗಳ ರಚನೆ ಸಭೆ ಹಾಗೂ ಬಲವರ್ಧನೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ದಿವ್ಯ ದೃಷ್ಟಿ ಹೊಂದಿದವರಾಗಿದ್ದಾರೆ, ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ತ್ರಿಚಕ್ರ ವಾಹನಗಳನ್ನು ಡಿಎಂಎಫ್ನಲ್ಲಿ ವಿತರಿಸಲಾಗಿದೆ, ಮುಂದಿನ ಜನವರಿ 26ಕ್ಕೆ 110ರಿಂದ 120 ತ್ರಿಚಕ್ರ ವಾಹನಗಳನ್ನು ನೀಡಲಾಗುವುದು, ವಿಶೇಷ ಚೇತನರಿಗೆ ಮನೆ ನಿರ್ಮಿಸಿಕೊಳ್ಳುವ ಸಮಸ್ಯೆ ಇದ್ದರೆ ಕೂಡಲೇ ಭೇಟಿಯಾಗುವಂತೆ ತಿಳಿಸಿದರು. ಸರ್ಕಾರ ಯಾವುದೇ ಇರಲಿ ಇವರ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೇ ಸವಲತ್ತುಗಳನ್ನು ನೀಡಬೇಕು ಮುಂದಿನ ಅಧಿವೇಶನದಲ್ಲಿ ಇವರ 5ಅ ಮೀಸಲನ್ನು ಇನ್ನು 1ಅಥವಾ2ರಷ್ಟು ಹೆಚ್ಚಿಸುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಇವರ ಪರವಾಗಿ ನಿಲ್ಲುವ ಭರವಸೆ ನೀಡಿದರು.
ಹೊಸಪೇಟೆ ತಾಲೂಕು ಎಂಆರ್ಡಬ್ಲ್ಯು ರವಿಕುಮಾರ ಮಾತನಾಡಿ ಅಂಗವಿಕಲರು ಮಾಡುತ್ತಿರುವ ನೌಕರಿ ಖಾಯಂ ಆಗಬೇಕು, ಕಾರ್ಯ ನಿರ್ವಹಿಸುತ್ತರುವ ನೌಕರರಿಗೆ ಗ್ರಾಮ ಪಂಚಾಯತಿಯಡಿ ಟೇಬಲ್, ಛೇರ್, ಗಣಕಯಂತ್ರ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.ಕಂಪ್ಯೂಟರ್ ಕಾರ್ಯದಲ್ಲಿ ಸ್ವಂತ ಕಂಪ್ಯೂಟರ್ ಇಲ್ಲದ ಕಾರಣ ಹಲವಾರು ಕೆಲಸಗಳಿಗೆ ಖಾಸಗೀ ಕಂಪ್ಯೂಟರ್ಗಳ ಮೊರೆ ಹೋಗುತ್ತಿದ್ದು ಅನವಶ್ಯಕ ವೆಚ್ಚವಾಗುತ್ತಿದ್ದು ಇದನ್ನು ಕೂಡಲೆ ಸರಿಪಡಿಸುವಂತೆ ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಅಧ್ಯಕ್ಷ ಸಿ. ಕರಿಬಸಜ್ಜ ಮಾತನಾಡಿ ವಿಶೇಷ ಚೇತನರು ಗೌರವಧನ ಆಧಾರದ ಮೇಲೆ ಜೀವನ ನಡೆಸುತ್ತಿದ್ದಾರೆ ಶೀಘ್ರವೇ ಅವರನ್ನು ಕಾಯಂಗೊಳಿಸಬೇಕು, ಜನಪ್ರತಿನಿಧಿಗಳು ಇವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು ಅರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವಲ್ಲಿ ನಮ್ಮ ಸಮಿತಿ ಪದಾಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ನಿರ್ದೇಶಕ ಧನರಾಜ್, ಖಜಾಂಚಿ ರುದ್ರೆಗೌಡ, ಜೆ.ರವಿ ಕುಮಾರ ನಾಯ್ಕ್ ಡಿಶ್ ಬಾಳಪ್ಪ, ಡಿಶ್ ಮಂಜುನಾಥ್, ಅಕ್ಕಿ ತೋಟೇಶ್,ರೋಗಾಣಿ ಹುಲುಗಪ್ಪ,ಹೆಗ್ಡಾಳ್ ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.