ಮನರಂಜನೆ

ನಾನು ಹರಿದ ಜೀನ್ಸ್ ಧರಿಸುತ್ತೇನೆ; ಬಿಗ್‌ ಬಿ ಅಮಿತಾಬ್‌ ಮೊಮ್ಮಗಳು

ನಾನು ಹರಿದ ಜೀನ್ಸ್  ಧರಿಸುತ್ತೇನೆ; ಬಿಗ್‌ ಬಿ ಅಮಿತಾಬ್‌  ಮೊಮ್ಮಗಳು

ಮುಂಬೈ,  ಮಾ 18: ಮಹಿಳೆಯರ  ವಸ್ತ್ರಧಾರಣೆಯ  ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ತಿರಥ್‌  ಸಿಂಗ್ ರಾವತ್   ನಿನ್ನೆ  ವಿವಾದಾತ್ಮಕ ಹೇಳಿಕೆ   ನೀಡಿದ್ದರು. 

ಹರಿದ  ಜೀನ್ಸ್ ಧರಿಸಿ  ದೇಹ ಪ್ರದರ್ಶಿಸುವುದು, ಹರಿದ ಜೀನ್ಸ್‌   ಧರಿಸುವುದು  ಪ್ರತಿಷ್ಟೆಯ  ಸಂಕೇತವಾಗಿರುವುದು   ಅತ್ಯಂತ ದುರದೃಷ್ಟಕರ, ಇದು  ನಮ್ಮ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ   ಎಂದು ಹೇಳಿದ್ದರು.  ಯುವತಿಯರು, ಯುವಕರು   ಎಂಬ  ಬೇಧ ಭಾವವಿಲ್ಲದೆ  ಹರಿದ ಜೀನ್ಸ್‌ ಧರಿಸಿ    ದೇಹ  ಪ್ರದರ್ಶಿಸುತ್ತಾರೆ   ಎಂದು ತೀವ್ರವಾಗಿ  ಟೀಕಿಸಿದ್ದರು. 

ಈ   ಹೇಳಿಕೆಗೆ   ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ  ಆಕ್ರೋಶ  ವ್ಯಕ್ತವಾಗಿದೆ .. ಹುಡುಗಿಯರು  ಯಾವ ವಸ್ತ್ರ ಧರಿಸಬೇಕು ಎಂಬುದನ್ನು  ನೀವು ಹೇಳಬೇಕಾ?    ಎಂದು ನೇಟಿಜನ್‌ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ  ಬಿಗ್‌  ಬಿ    ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೆಲಿ ಕೂಡ    ಮುಖ್ಯಮಂತ್ರಿ  ಹೇಳಿಕೆಗೆ  ಕೆರಳಿದ್ದಾರೆ. . "ನಮ್ಮ ಉಡುಪನ್ನು ಬದಲಾಯಿಸುವ ಮೊದಲು ನೀವು ನಿಮ್ಮ  ಆಲೋಚನೆಗಳನ್ನು  ಬದಲಾಯಿಸಿಕೊಳ್ಳಿ  ಏಕೆಂದರೆ ನೀವು ಸಮುದಾಯಕ್ಕೆ ನೀಡುವ ಸಂದೇಶಗಳು ನಮ್ಮನ್ನು ಇನ್ನಷ್ಟು ಆಘಾತಕ್ಕೊಳಗಾಗುವಂತೆ ಮಾಡುತ್ತವೆ ಎಂದು  ಮುಖ್ಯಮಂತ್ರಿ  ತೀರಥ್‌ ಸಿಂಗ್‌  ರಾವತ್‌  ಹೇಳಿಕೆಗೆ   ಪ್ರತಿ ಹೇಳಿಕೆಯನ್ನು  ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ,  ತಾವು  ಸ್ವತಃ ಜೀನ್ಸ್ ಧರಿಸಿದ ಫೋಟೋ  ಹಂಚಿಕೊಂಡಿದ್ದಾರೆ.  "  ನಾನು  ಹೆಮ್ಮೆಯಿಂದ  ಈ ಜೀನ್ಸ್ ಧರಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.  

ಸುದ್ದಿ ಓದಿ