ಮನರಂಜನೆ

ನನ್ನನ್ನು ಬಲಿ ಪಶುಮಾಡಲಾಗಿದೆ; ರಾಜ್‌ ಕುಂದ್ರಾ

ನನ್ನನ್ನು  ಬಲಿ ಪಶುಮಾಡಲಾಗಿದೆ;  ರಾಜ್‌ ಕುಂದ್ರಾ

ಮುಂಬೈ, ಸೆ 18   ಅಶ್ಲೀಲ  ಚಿತ್ರಗಳ   ನಿರ್ಮಾಣ,   ಪ್ರಸಾರ    ಪ್ರಕರಣದಲ್ಲಿ  ಆರೋಪ   ಎದುರಿಸುತ್ತಿರುವ    ಉದ್ಯಮಿ,  ನಟಿ ಶಿಲ್ಪಾ ಶೆಟ್ಟಿ   ಪತಿ ರಾಜ್ ಕುಂದ್ರಾ ಅವರು  ಶನಿವಾರ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.    ಈ  ಪ್ರಕರಣದಲ್ಲಿ   ಸಲ್ಲಿಕೆಯಾಗಿರುವ    ಪೂರಕ   ಆರೋಪ ಪಟ್ಟಿಯಲ್ಲಿ ತಮ್ಮ ವಿರುದ್ದ   ಒಂದೇ  ಒಂದು  ಪುರಾವೆಯೂ ಇಲ್ಲ,    ಆದರೂ  ಈ  ಪ್ರಕರಣದಲ್ಲಿ   ತಮ್ಮನ್ನು  ಬಲಿಪಶುವಾಗಿಸಲಾಗಿದೆ ಎಂದು    ಆರ್ಜಿಯಲ್ಲಿ ಹೇಳಿದ್ದಾರೆ.  ಈ  ಪ್ರಕರಣದ  ತನಿಖೆ ನಡೆಸುತ್ತಿರುವ ಮುಂಬೈ ಕ್ರೈಂ ಬ್ರಾಂಚ್    ರಾಜ್ ಕುಂದ್ರಾ,  ಇತರ ಮೂವರ ವಿರುದ್ಧ  ಇತ್ತೀಚಿಗೆ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಸಿನಿಮಾ ಅವಕಾಶಗಳಿಗಾಗಿ  ಮುಂಬೈಗೆ ಬರುವ   ಯುವತಿಯರ    ವಂಚಿಸಿ   ರಾಜ್‌ ಕುಂದ್ರಾ  ಸಾಕಷ್ಟು   ಹಣ ಸಂಪಾದಿಸಿದ್ದಾರೆ   ಎಂದು  ಆರೋಪಿಸಲಾಗಿದ್ದು,  ಪ್ರಕರಣದ ವಿಚಾರಣೆ ಮುಗಿದಿರುವ    ಕಾರಣ   ತಮಗೆ  ಜಾಮೀನು ನೀಡುವಂತೆ  ಅವರು ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.    ಈ ಪ್ರಕರಣದಲ್ಲಿ  ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ.   ಎಫ್‌ ಐಆರ್‌ ನಲ್ಲಿ  ನನ್ನ   ಹೆಸರು  ಇಲ್ಲದಿದ್ದರೂ ಪೊಲೀಸರು ಎಳೆದುತಂದಿದ್ದಾರೆ  ಎಂದು ಅವರು ಆರೋಪಿಸಿದ್ದಾರೆ.

ಈವರೆಗೆ   ನಡೆದ  ತನಿಖೆಯಲ್ಲಿಯೂ  ತಾವು  ಯಾವುದೇ    ಅಪರಾಧ  ಮಾಡಿಲ್ಲ  ಎಂಬುದು  ಸ್ಪಷ್ಟವಾಗಿ ಕಂಡುಬಂದಿದೆ.  ಕಂಟೆಂಟ್‌  ಅಪ್‌ಲೋಡ್‌,   ಪ್ರಸಾರ ಪ್ರಕ್ರಿಯೆಗೂ  ನನಗೂ     ಯಾವುದೇ ಸಂಬಂಧವಿಲ್ಲ ಎಂಬುದನ್ನು  ಇದು ಸ್ಪಷ್ಟಪಡಿಸುತ್ತದೆ ಎಂದು ವಾದಿಸಿದ್ದಾರೆ.   ನ್ಯಾಯಾಲಯ  ಸೋಮವಾರ ಅರ್ಜಿಯ ವಿಚಾರಣೆ ನಡೆಸಲಿದೆ. ರಾಜ್ ಕುಂದ್ರಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.


ಸುದ್ದಿ ಓದಿ