ಮುಂದಿನ ಮೂರು ಅವಧಿಗೆ ನಾನೇ ಶಾಸಕ: ನಡಹಳ್ಳಿ
ತಾಳಿಕೋಟಿ 04: ಮುದ್ದೇಬಿಹಾಳ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದೇನೆ. ಈ ಕ್ಷೇತ್ರ ಉತ್ತರ ಕರ್ನಾಟಕದ ಒಂದು ಮಾದರಿ ಕ್ಷೇತ್ರವಾಗಬೇಕೆಂಬುದು ನನ್ನ ಗುರಿಯಾಗಿದೆ. ಇದು ಈಡೇರುವಂತಾಗಲು ನಿಮ್ಮೆಲ್ಲರ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ಅಧ್ಯಕ್ಷ ಕ.ರಾ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಮತಕ್ಷೇತ್ರದ ಮಡಿಕೇಶ್ವರ ಗ್ರಾಮದಲ್ಲಿ ಕೆಬಿಜೆಎನ್‌ಎಲ್ ಇಲಾಖೆಯಿಂದ ಹಮ್ಮಿಕೊಂಡ ಸುಮಾರು 2 ಕೋಟಿ ಮೊತ್ತದ ಸಿ.ಸಿ. ರಸ್ತೆ, ಚರಂಡಿ, ಸಮುದಾಯ ಭವನ ಹಾಗೂ ಆರೋಗ್ಯ ಕ್ಷೇಮ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ರೈತರ ಆರ್ಥಿಕ ಸ್ಥಿತಿ ನೀರಾವರಿಯಿಂದಲೇ ಸುಧಾರಿಸಲು ಸಾಧ್ಯ ಈ ಕಾರಣಕ್ಕಾಗಿಯೇ ನಾನು ಈ ಕ್ಷೇತ್ರಕ್ಕೆ ಆಧ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿರುವ 20 ಕೆರೆಗಳನ್ನು ತುಂಬಿದಿ ಅಂತರ್ಜಲ ಹೆಚ್ಚುವಂತೆ ಮಾಡಲಾಗಿದೆ.
ರೈತರಿಗೆ ಅತ್ಯಗತ್ಯವಾದ ವಿದ್ಯುತ್ ಸೌಲಭ್ಯಕ್ಕಾಗಿ ಎಂಟು 110 ಕೆ.ವಿ. ಸ್ಟೇಷನ್ ಘಟಕಗಳನ್ನು ಮಂಜೂರು ಮಾಡಿಸಿದ್ದೇನೆ. ಪ್ರತಿಯೊಂದು ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನವನ್ನು ಕೊಟ್ಟಿದೇನೆ. ಶುದ್ಧ ಕುಡಿಯುವ ನೀರಿಗಾಗಿ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ ಜೆಜೆಎಂ ಪ್ರಗತಿ ಹಂತದಲ್ಲಿ ಶಿಕ್ಷಣಕ್ಕಾಗಿ ಸರಕಾರದ ಅನುದಾನದ ಜೊತೆಗೆ ವೈಯಕ್ತಿಕವಾಗಿ ನಾನೂ ಸಹ ಆರ್ಥಿಕ ಸಹಾಯ ಮಾಡಿದ್ದೇನೆ. ಇದೆಲ್ಲವೂ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಮುಂದೆಯೂ ನನಗೆ ನಿಮ್ಮ ಆಶೀರ್ವಾದ ಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿ ನಡಹಳ್ಳಿಯವರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಈ ಕ್ಷೇತ್ರದ ಕುರಿತು ಅವರದೇ ಆದ ಒಂದು ಸ್ಪಷ್ಟ ಕಲ್ಪನೆ ಇದೆ ಇದು ಉಳಿದ ಶಾಸಕರಿಗೂ ಮಾದರಿ ಯೋಗ್ಯವಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಮಡಿಕೇಶ್ವರ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಪ. ಬಿರಾದಾರ, ಉಪಾಧ್ಯಕ್ಷ ಸಂಗಣ್ಣ ಮೇಟಿ, ಮುಖಡರಾದ ಜಿ.ಬಿ. ಬಿರಾದಾರ, ಬಿ.ಆರ್. ಪಾಟೀಲ, ಶಿವನಗೌಡ ಕೇಸಪ್ಪಗೌಡ, ಶ್ರದ್ಧಾನಂದ ತುಂಬಗಿ, ಎಂ.ಎಸ್. ಮುದ್ನೂರ, ಸಂಗಣ್ಣ ವಗ್ಗರ, ಎಂ.ಎಸ್. ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಹಳ್ಳಿ, ಸುಭಾಶಗೌಡ ಬಿರಾದಾರ, ಪರ್ಪ ವಗ್ಗರ, ಶಾಂತಪ್ಪ ನಾಯ್ಕೋಡಿ, ಎಇಇ ಎನ್.ಡಿ. ಮಸೂತಿ, ಇಇ ರಾಮನಗೌಡ ಹಳ್ಳೂರ, ಗುತ್ತಿಗೆದಾರ ಮಲ್ಲನಗೌಡ, ಬಿರಾದಾರ ಗ್ರಾಪಂ ಸದಸ್ಯರು ಇದ್ದರು.