ಬಳ್ಳಾರಿ

ಅನಕ್ಷರಸ್ಥರ ಸಂಖ್ಯೆ ಶೂನ್ಯಕ್ಕೆ ಇಳಿಸಲು ಪಣ: ಶಿಕ್ಷಣ ಸಚಿವ ನಾಗೇಶ್

ಅನಕ್ಷರಸ್ಥರ ಸಂಖ್ಯೆ ಶೂನ್ಯಕ್ಕೆ ಇಳಿಸಲು ಪಣ: ಶಿಕ್ಷಣ ಸಚಿವ ನಾಗೇಶ್
ಲೋಕದರ್ಶನ ವರದಿ ಸಿರಗುಪ್ಪ 16: ಲೋಕ ಶಿಕ್ಷಣ ನಿರ್ದೇಶನಾಲಯದ ಜೊತೆಗೆ ಶಿಕ್ಷಣ ಇಲಾಖೆ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ರಾಜ್ಯದಲ್ಲಿ ಅನಕ್ಷರಸ್ಥರ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಮಂಗಳವಾರ ಹಮ್ಮಿಕೊಂಡಿದ್ದ 55ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ಕ್ಕೆ ಚಾಲನೆ ನೀಡಿ ರಾಜ್ಯವನ್ನು ಸಾಕ್ಷರ ನಾಡನ್ನಾಗಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಸಾಕ್ಷರತಾ ಯೋಜನೆ ಜಾರಿಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಕೆಲಸ ಮಾಡಬೇಕು ರಾಜ್ಯದಲ್ಲಿ ಯಾರೊಬ್ಬರೂ ಅಕ್ಷರದಿಂದ ವಂಚಿತರಾಗಬಾರದು ಕೊರೊನಾ ವೈರಸ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತ ಗೊಂಡಿದ್ದ ವಯಸ್ಕರ ಶಿಕ್ಷಣ ಸಾಕ್ಷರತಾ ಯೋಜನೆಗಳನ್ನು ಪುನಃ ಆರಂಭಿಸಲಾಗಿದೆ. ಅನಕ್ಷರಸ್ಥರನ್ನು ಗುರುತಿಸಿ ಅವರಿರುವ ಕಡೆ ಕಲಿಕಾ ಕೇಂದ್ರಗಳನ್ನು ತೆರೆದು ಪಾಠ ಮಾಡಲಾಗುತ್ತದೆ 4ತಿಂಗಳಲ್ಲಿ ಒಟ್ಟು 120 ತಾಸುಗಳ ಅವಧಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ ರಾಯಚೂರು ಯಾದಗಿರಿ ಕಲಬುರ್ಗಿ ವಿಜಯಪುರ ಮತ್ತು ಚಾಮರಾಜ ನಗರ ಜಿಲ್ಲೆಗಳನ್ನು ಅಭಿಯಾನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.

ಸುದ್ದಿ ಓದಿ