ರಾಷ್ಟ್ರೀಯ

ಹೈದರಾಬಾದ್; ತನಿಖಾ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಚಿಂತನೆ

ಹೈದರಾಬಾದ್; ತನಿಖಾ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಚಿಂತನೆ

ನವದೆಹಲಿ, ಡಿ 11 :          ಹೈದರಾಬಾದ್ ನ ಪಶುವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಯೊಬ್ಬರನ್ನು ನೇಮಿಸುವ ಸೂಚನೆಯನ್ನು ಸುಪ್ರೀಂಕೋರ್ಟ್ ಬುಧವಾರ ನೀಡಿದೆ.  

ಎನ್ ಕೌಂಟರ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶರದ್ ಅವರಿಂದ್ ಬೋಬ್ಡೆ ನೇತೃತ್ವ ನ್ಯಾಯಪೀಠ, ಪ್ರಕರಣದ ತನಿಖೆಗೆ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯೊಬ್ಬರ ಹೆಸರು ಸೂಚಿಸುವಂತೆ ತಿಳಿಸಿತು.  ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಪಿ.ವಿ.ರೆಡ್ಡಿ ತನಿಖೆ ನಡೆಸಲು ನಿರಾಕರಿಸಿದ್ದರಿಂದ, ಬೇರೊಬ್ಬರ ಹೆಸರನ್ನು ಸೂಚಿಸುವಂತೆ ನ್ಯಾಯಪೀಠ ಸಲಹೆ ನೀಡಿತು. ಜೊತೆಗೆ, ಎನ್ ಕೌಂಟರ್ ನ ತನಿಖೆ ನಡೆಸುವ ನ್ಯಾಯಮೂರ್ತಿಗಳು ದೆಹಲಿಯಿಂದೇ ಕಾರ್ಯನಿರ್ವಹಿಸಬೇಕೇ ಹೊರತು ಹೈದರಾಬಾದ್ ನಿಂದಲ್ಲ ಎಂದು ಅಭಿಪ್ರಾಯಪಟ್ಟಿತು.

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಆರೋಪದ ನಾಲ್ವರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಸೈಬರಾಬಾದ್ ಪೊಲೀಸರ ಕ್ರಮ ಪ್ರಶ್ನಿಸಿ ವಕೀಲರಾದ ಮಣಿ ಮತ್ತೊಬ್ಬರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಸುದ್ದಿ ಓದಿ