ವಿಜಯಪುರ

ಹ್ಯಾಂಡ್ಬಾಲ್ನಲ್ಲಿ ದರಬಾರ ಶಾಲಾ ತಂಡಗಳ ಸಾಧನೆ

ಹ್ಯಾಂಡ್ಬಾಲ್ನಲ್ಲಿ ದರಬಾರ ಶಾಲಾ ತಂಡಗಳ ಸಾಧನೆ
Hyāṇḍbālnalli darabāra śālā taṇḍagaḷa sādhane

ಲೋಕದರ್ಶನ ವರದಿ 

  

ಹ್ಯಾಂಡ್ಬಾಲ್ನಲ್ಲಿ ದರಬಾರ ಶಾಲಾ ತಂಡಗಳ ಸಾಧನೆ  

ವಿಜಯಪುರ 12: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ಎಸ್‌.ಪಿ. ವಾಣಿಜ್ಯ ಕಾಲೇಜು ಕ್ರೀಡಾಂಗಣದಲ್ಲಿ ಸೆ. 11ರಂದು ನಡೆದ 2026-27ನೇ ಸಾಲಿನ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದ 14 ವರ್ಷ ವಯೋಮಿತಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.  

ಕುಮಾರ ಆರ್ಯನ್ ಚವಾಣ್ ನೇತೃತ್ವದ ಬಾಲಕರ ತಂಡ ಹಾಗೂ ಕುಮಾರಿ ಖುಷಿ ಬಬಲೇಶ್ವರ ನೇತೃತ್ವದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿವೆ. ತಂಡಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರಾದ   ರಾಜೇಶ್ ಡಿ. ದರಬಾರ, ಗೌರವ ಕಾರ್ಯದರ್ಶಿ   ಪ್ರಕಾಶ ಎಸ್‌. ಉಡುಪಿಕರ, ಉಪಾಧ್ಯಕ್ಷರಾದ ಡಾ. ಆರಿ​‍್ಜ. ಮಂಗಲಗಿ ಹಾಗೂ   ಕೆ.ಜಿ. ದೇಶಪಾಂಡೆ, ಜಂಟಿ ಕಾರ್ಯದರ್ಶಿ   ಸೋಮನಗೌಡ ಬಿ. ಪಾಟೀಲ (ಸಾಸನೂರು) ಸೇರಿದಂತೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಸಮನ್ವಯಾಧಿಕಾರಿ ಡಾ. ವಿ.ಬಿ. ಗ್ರಾಮಪುರೋಹಿತ, ಉಪಪ್ರಾಂಶುಪಾಲರಾದ ಶ್ರೀ ವಿ.ಕೆ. ಗುಜರಿ, ದೈಹಿಕ ಶಿಕ್ಷಕರಾದ   ಗೋಪಾಲ ಲಮಾಣಿ ಹಾಗೂ   ಸುನೀಲ ರಾಠೋಡ ಮತ್ತು ಶಿಕ್ಷಕ ವೃಂದದವರು ಕ್ರೀಡಾಪಟುಗಳನ್ನು ಅಭಿನಂದಿಸಿ, ವಿಭಾಗ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು. 


ಸುದ್ದಿ ಓದಿ