ಯಲ್ಲಮ್ಮಾ ದೇವಿ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಪೂರ್ಣ
ಉಗರಗೋಳ 25: ಸಮಿಪದ ಯಲ್ಲಮ್ಮ ಗುಡ್ಡದ. ಯಲ್ಲಮ್ಮಾ ದೇವಿ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು. ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದು. ಒಟ್ಟು 1.96 ಕೋಟಿ ಕಾಣಿಕೆ ಸಂಗ್ರಹಗೊಂಡಿದೆ.
1.71 ಕೋಟಿ ನಗದು. 20.44 ಲಕ್ಷ ಮೌಲ್ಯದ ಚಿನ್ನಾಭರಣ, 4.44 ಲಕ್ಷ ಬೆಳ್ಳಿ ಆಭರಣ ಇದರಲ್ಲಿ ಸೇರಿವೆ.
ಸಪ್ತಗುಡ್ಡ ಹಾಗೂ ಸಪ್ತಕೋಳ್ಳಗಳ ಮಧ್ಯ ನೇಲೆ ನಿಂತ ಶ್ರೀ ರೇಣುಕಾ ಯಲ್ಲಮ್ಮನಗುಡ್ಡಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಯಲ್ಲಮ್ಮನ ಸನ್ನಿಧಿಗೆ ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಯ ದೇವಸ್ಥಾನದ ಹುಂಡಿಯಲ್ಲಿ ತಮ್ಮ ಆರ್ಥಿಕ ಶಕ್ತಿಗೆ ಅನುಸಾರವಾಗಿ ನಗದು, ಚಿನ್ನ, ಬೆಳ್ಳಿ ಆಭರಣ ಹಾಕುತ್ತಾರೆ.
ಪ್ರತಿ ವರ್ಷ ಈ ಅವದಿಯ ಎಣಿಕೆ ನಡೆದಾಗ 1.ಕೋಟಿಯಿಂದ 1.5 ಕೋಟಿ ಸಂಗ್ರಹವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾತಿಗೊಳಿಸಿದ್ದರಿಂದ ಗುಡ್ಡಕ್ಕೆ ಬರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗನನಿಯವಾಗಿ ಹೆಚ್ಚಿದೆ ಅವರು ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ನಿಡುತ್ತಿದ್ದು ಹಾಗಾಗಿ ಈ ಬಾರಿ ದಾಖಲೆ ಪ್ರಮಾಣವಾಗಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ತಿಳಿಸಿದ್ದಾರೆ.
ಶ್ರೀ ಯಲ್ಲಮ್ಮಾ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ವಾಯ್ ವಾಯ್ ಕಾಳಪ್ಪನವರ, ಕೋಳ್ಳಪ್ಪಗೌಡ ಗಂದಿಗವಾಡ, ಬಾಳೇಶ ಅಬ್ಬಾಯಿ, ಬೆಳಗಾವಿ ಧಾರ್ಮಿಧತ್ತಿ ಇಲಾಖೆ ಶೀಲಾ, ಎಮ್ ಎಸ್ ಯಲಿಗಾರ, ಎಮ್ ಪಿ ಧ್ಯಾಮನಗೌಡ್ರ, ಹವಾಲ್ದಾರ್ ಆನಂದ ಗೋರವನಕೋಳ್ಳ, ಡಿ ಡಿ ನಾಗನಗೌಡ್ರ ಹಾಗೂ ಹುಂಡಿ ಎಣಿಕೆಯಲ್ಲಿ ದೇವಸ್ಥಾನ ಸಿಬ್ಬಂದಿ, ಯಲ್ಲಮ್ಮನಗುಡ್ಡದ ಕೇನರಾ ಭ್ಯಾಂಕ್ ಮತ್ತು ದೇವಸ್ಥಾನದ ಹೋಂ ಗಾರ್ಡ್ಸ ಹಾಗೂ ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ಪಾಲ್ಗೂಂಡಿದ್ದರು.