ಮುಂದಗೋಡ

ಮಾನವ ಹಕ್ಕು, ಕಾನೂನು ಅರಿವು, ಆರೋಗ್ಯ ಅರಿವು ಕಾರ್ಯಕ್ರಮ

ಮಾನವ ಹಕ್ಕು, ಕಾನೂನು ಅರಿವು, ಆರೋಗ್ಯ ಅರಿವು ಕಾರ್ಯಕ್ರಮ

ಮುಂಡಗೋಡ:ತಾಲೂಕಿನ ಮಳಗಿ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್(ರಿ.) ವತಿಯಿಂದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 75ನೇ ವರ್ಷದ ವಿಶ್ವ ಮಾನವ ಹಕ್ಕಗಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಶುಕ್ರವಾರ ಮಾನವ ಹಕ್ಕುಗಳು, ಕಾನೂನು ಅರಿವು ಮತ್ತು ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಪಿಎಸ್‌ಐ ಬಸವರಾಜ ಮಬನೂರ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಶಳ್ಳಿ ಸಂವಿಧಾನ ಬದ್ಧವಾಗಿ ಪಡೆಯವ ಮಾನವ ಹಕ್ಕುಗಳ ಕುರಿತು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಧನರಾಜ ಮಾತನಾಡಿ ಮನುಷ್ಯ ಆರೋಗ್ಯ ವಂತನಾಗಿರಲು ಪ್ರತಿದಿನ ಸರಿಯಾದ ಸಮಯಕ್ಕೆ ಊಟ, ನಿದ್ರೆ ಹಾಗೂ ಯೋಗ-ಧ್ಯಾನಕ್ಕೆ ಕೆಲಹೊತ್ತು ಮೀಸಲಿಡಬೇಕು. ತರಕಾರಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.  

ರಾಜ್ಯಾಧ್ಯಕ್ಷ ಗಣೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಎಸ್‌ಐ ಬಸವರಾಜ ಮಬನೂರ, ನೂತನ ಪಿಎಸ್‌ಐ ಯಲ್ಲಾಲಿಂಗ ಕುನ್ನೂರ, ಪ್ರಾಂಶುಪಾಲ ಜಿ.ಎನ್‌.ಹೆಗಡೆ, ವಕೀಲ ರಾಜು ಹಂಚಿನಮನಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಉಪಾಧ್ಯಕ್ಷ ಜುಜೆ ಡಿಸೋಜ, ಮಹಿಳಾ ಉಪಾಧ್ಯಕ್ಷೆ ದುರ್ಗಮ್ಮ,  ಜಿಲ್ಲಾಧ್ಯಕ್ಷ ಮಂಜುನಾಥ ಕೆ, ಉಪಾಧ್ಯಕ್ಷ ನಜೀರ್, ಜಿಲ್ಲಾ ಆಡಳಿತ ಸಮಿತಿಯ ಹುಲಿಯಪ್ಪ, ತಾಲೂಕು ಅಧ್ಯಕ್ಷ ಗಣೇಶ ಆರ್‌.ಬಿ. ಜಿಲ್ಲಾ, ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ