ಮಾನವ ಜೀವನ ಅಮೂಲ್ಯವಾದುದು: ಡಾ.ಗುರುಪ್ರಸಾದ್
ಶಿಗ್ಗಾವಿ 18: ನಾವೆಲ್ಲರೂ ಒಂದು ಎಂಬ ಮನೋಭಾವ ಉಳ್ಳವರು ‘ಮಾನವಜೀವನ ಅಮೂಲ್ಯವಾದುದು’ ಎಂದು ನಿರೂಪಿಸಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಟಿ.ಗುರುಪ್ರಸಾದ್ ಹೇಳಿದರು.
ತಾಲೂಕಿನ ಗೊಟಗೋಡಿಯ ಉತ್ಸವ ರಾಕ್‌ಗಾರ್ಡನ್‌ನಲ್ಲಿ ಉತ್ಸವರಾಕ್ ಗಾರ್ಡನ್ ಸಮಿತಿಯಿಂದ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ.ತಿಪ್ಪಣ್ಣದಾಸನೂರ ಅವರ ದ್ವಿತೀಯ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಬದುಕು ಮಾದರಿ ಆಗಿರಬೇಕು ಎಂಬ ಸಂದೇಶ ನೀಡಿದ್ದ ತಿಪ್ಪಣ್ಣರವರು, ಗ್ರಾಮೀಣ ಮಕ್ಕಳು ಸುಶಿಕ್ಷಿತರಾಗಬೇಕೆಂಬ ಸಂಕಲ್ಪವನ್ನು ಗೊಟಗೋಡಿಯ ಕನ್ನಡ ಜಾನಪದ ಶಿಕ್ಷಣ ಸಂಸ್ಥೆಗೆ ಎರಡೂವರೆ ಎಕರೆ ಭೂಮಿಯನ್ನು ದಾನವಾಗಿ ನೀಡುವ ಮೂಲಕ ನನಸಾಗಿಸಿ ಕೊಂಡವರು ಎಂದರು.
ಆರೋಗ್ಯವೇ ಭಾಗ್ಯ ಎಂದು ನಂಬಿ ಕುಸ್ತಿ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಹಾಗೂ ಕಲೆ ಸಮಾಜದ ಅವಿಭಾಜ್ಯ ಅಂಗ ಎಂದು ಶೈಕ್ಷಣಿಕ-ಸಾಂಸ್ಕೃತಿಕ ಪ್ರವಾಸಿ ಕೇಂದ್ರಉತ್ಸವ ರಾಕ್‌ಗಾರ್ಡನ್ ಸ್ಥಾಪಿಸಿ ಸಮಾಜಕ್ಕೆ ಸಮರ್ಿಸಿದ ಧೀಮಂತ ವ್ಯಕ್ತಿತ್ವ ತಿಪ್ಪಣ್ಣದಾಸನೂರ ಅವರದ್ದು ಎಂದು ಡಾ. ಗುರುಪ್ರಸಾದ್ ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರ್ಪ ಸೊಬಟಿ,ವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿಉಪಾಧ್ಯಕ್ಷ ಹನುಮಂತಪ್ಪ ಗುಳೇದ್‌ಹಾಗೂ ಗಾರ್ಡನ್ ನಿರ್ದೇಶಕ ಬಸವರಾಜ ಮಡಿವಾಳರ ದಿವಂಗತರ ಕುರಿತು ಮಾತನಾಡಿದರು. ಮಾಜಿಗ್ರಾಪಂ ಸದಸ್ಯ ಸುರೇಶ ಮುಗಳಿಕಟ್ಟಿ, ಸುಭಾಸ್ ಸಕ್ರೆಣ್ಣವರ, ಕರಿಯಪ್ಪ ವಾಲಿಕಾರ್,ಸಮಿತಿ ನಿರ್ದೇಶಕಆನಂದಗೌಡ ಪಾಟೀಲ್, ಗ್ರಾಮಸ್ಥರು, ಕಲಾವಿದರು ಮತ್ತಿರರು ಭಾಗಹವಹಿಸಿದ್ದರು. ನಾಗರಾಜ ಪಾಟೀಲ್ ಸ್ವಾಗತಿಸಿದರು. ಸಿ.ಡಿ.ಪಾಟೀಲ್ ವಂದಿಸಿದರು.