ಮಾನವ ಕಂಪ್ಯೂಟರ್ ಬಸವರಾಜ ಉಮರಾಣಿ ವಿದ್ಯಾರ್ಥಿಗಳೊಂದಿಗೆ ಸಂವಾದ
ಬಳ್ಳಾರಿ 24: ಮಾನವ ಕಂಪ್ಯೂಟರ್ ಎಂದು ಖ್ಯಾತಿ ಪಡೆದಿರುವ ಬಸವರಾಜ ಶಂಕರ ಉಮರಾಣಿ ಇವರು ಎಸ್.ಜಿ.ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾ. 24ರಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಾಕಷ್ಟು ಅಂಕೆ ಸಂಖ್ಯೆಗಳನ್ನು ಗುಣಾಕಾರ, ಕೂಡಿಸುವುದು, ಕಳೆಯುವುದು, ಮುಂದಿನಿಂದ ಹಿಂದಕ್ಕೆ, ಹಿಂದಿನಿಂದ ಮುಂದಕ್ಕೆ ಯಾವುದೇ ಅಡೆತಡೆ ಇಲ್ಲದೆ ಹೇಳುವುದು ಬೇರೆ ಬೇರೆ ವಿಷಯಗಳ ಜ್ಞಾಪಕ ಶಕ್ತಿ ಬಗ್ಗೆ ಪ್ರದರ್ಶನವನ್ನು ನೀಡಿದರು. ಯಾವ ತಾರೀಕು ಯಾವ ವಾರವಾಗುತ್ತದೆ ಅದನ್ನು ಹೇಗೆ ಹೇಳಬೇಕು ಎಂಬುದರ ಜೊತೆಗೆ ಇವೆಲ್ಲ ಮಾಡುವ ಟೆಕ್ನಿಕ್ಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿ ಹೇಳಿದರು.
ಈ ಎಲ್ಲಾ ಸಾಧನೆಗಳು ಮತ್ತು ಏಕಾಗ್ರತೆ ಸಿದ್ಧಿಸಲು ಯೋಗ ಪ್ರಾಣಾಯಾಮ ಬೆಳಗಿನ ಜಾವ ಓದುವುದು ಮಾದರಿ ಗುರುವನ್ನು ಅನುಸರಿಸುವುದು ಹಾಗು ಗುರಿಯ ಕಡೆಗೆ ಪ್ರತಿ ಕ್ಷಣವು ಸಾಗುತ್ತಿರುವುದರಿಂದ ಸಿದ್ಧಿಯಾಗುತ್ತದೆ ಎಂದು ತಿಳಿಸಿದರು.
ಇವರು ಪ್ರದಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಅಂತರಾಷ್ರೀಯ ಮಟ್ಟದಲ್ಲಿಯು ಕೂಡ ಇವರ ಪ್ರತಿಭೆಗೆ ಪುರಸ್ಕಾರಗಳು ದೊರೆತಿವೆ. ಟಿ.ವಿ ಕಾರ್ಯಕ್ರಮಗಳಲ್ಲಿ ಪ್ರಸಾರಗಳು ದೊರೆತು ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಪ್ರಾಚಾರ್ಯ ಜಿ.ನಾಗರಾಜ್ ರವರು ತಿಳಿಸಿದರು. ಸಂಸ್ಥೆಯ ಅದ್ಯಕ್ಷ ಎಸ್.ಎನ್ ರುದ್ರಪ್ಪನವರು, ಪತ್ರಿಕೆಯ ನಾಗೇಂದ್ರರವರು, ಚನ್ನಬಸಪ್ಪನವರು, ಜಿ. ಮಂಜುಳಾರವರು ಶ್ರೀಯುತರಿಗೆ ಸನ್ಮಾನಿಸಿದರು. ಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.