ಮೋಳೆ ಗ್ರಾ ಪಂ ನಲ್ಲಿ ಭಾರಿ ಗೋಲಮಾಲ್..! ಕಾಗದಲ್ಲಿಯೇ ಅಭಿವೃದ್ಧಿಗೊಂಡ ರಸ್ತೆಗಳು..ಮುಖಂಡರಿಂದ ಗಂಭೀರ ಆರೋಪ..
Huge scam in Mole Gram Panchayat..
ಕಾಗವಾಡ 27: ತಾಲೂಕಿನ ಮೋಳಅೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯಲ್ಲಿ ಭಾರಿ ಗೋಲಮಾಲ್ ನಡೆದಿದೆ ಎಂದು ಗ್ರಾಮದ ಮುಖಂಡ ಪಿಂಟು ಮುಂಜೆ ಆರೋಪಿಸಿದ್ದಾರೆ. ಅವರು ಶನಿವಾರ ದಿ. 26 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮೋಳೆ-ಮಂಗಸೂಳಿ ರಸ್ತೆಯ ಲಾಂಡಗೆ ತೋಟದ ರಸ್ತೆ ಮುರಮೀಕರಣ ಕಾಮಗಾರಿ ಮಾಡದೇ ಅನುದಾನ ಬಿಡುಗಡೆಗೊಳಿಸಿ, ಅವ್ಯವಹಾರ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದು, ಈ ಅವಧಿಯಲ್ಲಿ ಮುರಮೀಕರಣ ಮಾಡದೇ ಹಣ ಬಿಡುಗಡೆಯಾಗಿದ್ದು, ರಸ್ತೆ ಕೇವಲ ಕಾಗದದಲ್ಲಿ ಮಾತ್ರ ಅಭಿವೃದ್ಧಿಗೊಂಡಿದೆ. ಈಗ ನಾನು ಅದೇ ರಸ್ತೆ ಮೇಲೆ ನಿಂತು ರಸ್ತೆಯ ದುರ್ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಈ ಅವ್ಯವಹಾರದಲ್ಲಿ ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ತನಿಖಾಧಿಕಾರಿಗಳ ಮುಖಾಂತರ ಸಣ್ಣ-ಪುಟ್ಟ ತಪ್ಪುಗಳನ್ನು ಹಿಡಿದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ, ಶೋಕಿ ನೀಡುತ್ತಿರುವುದು ಒಂದೆಡೆಯಾದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಲಕ್ಷಾಂತರ ರೂಪಾಯಿಗಳ ದೊಡ್ಡ-ದೊಡ್ಡ ಅವ್ಯವಹಾರಗಳಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದರೂ, ಸಣ್ಣ-ಸಣ್ಣ ಅವ್ಯವಹಾರಗಳಲ್ಲಿ ತೋರುವ ಕರ್ತವ್ಯ ನಿಷ್ಠೆಯನ್ನು ತನಿಖಾಧಿಕಾರಿಗಳು ದೊಡ್ಡ ಗಾತ್ರದ ಅವ್ಯವಹಾರಗಳಲ್ಲಿ ತೋರಿಸಲಿ ಎಂಬುದೇ ಸಾರ್ವಜನಿಕರ ಆಗ್ರಹವಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 