ವಿಜಯಪುರ

ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ದ್ರಾಕ್ಷಿ ಸೇರಿದಂತೆ ಅಪಾರ ನಷ್ಟ

ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ದ್ರಾಕ್ಷಿ ಸೇರಿದಂತೆ ಅಪಾರ ನಷ್ಟ

ಲೋಕದರ್ಶನ ವರದಿ 

ವಿಜಯಪುರ 25: ಡೋಣೂರ ಗ್ರಾಮದ ರೈತರಾದ ನಾಗನಗೌಡ ಬಿರಾದಾರ ಅವರು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೊಡಿಕೊಳ್ಳುತ್ತಾ ದಿ. 15-04-2026 ರಂದು ಸಂಜೆ ಜೋರಾಗಿ ಬೀಸಿರುವ ಗಾಳಿಯಿಂದಾಗಿ ವಿದ್ಯುತ್ ಶಾರ್ಟ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡು ನಮ್ಮ ಸಹೋದರರ ಜಮೀನಲ್ಲಿ ಬೆಂಕಿಯ ಜೊರಾಗಿ ಹಬ್ಬಿ, ಕಾಡ್ಗಿಚ್ಚನಂತೆ ಆವರಿಸಿಕೊಂಡಾಗ ಆರಿಸಲು ಪ್ರಯತ್ನಿಸಿದೆವು, ಜೊತೆಗೆ ಬಾಗೇವಾಡಿಯ ಪೈರ ಪೈಟರ್ ಬಂದು ಆರಿಸುವಷ್ಟರಲ್ಲಿ ಸಂಪೂರ್ಣಸುಟ್ಟು ಹೋಗಿದೆ ಕೂಡಲೇ ಸರಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.  

ಜಿಲ್ಲೆಯ ಡೋಣೂರ ಗ್ರಾಮದ ರೈತರಾದ ನಾಗನಗೌಡ ಬಿರಾದಾರ ಅವರ ಸವೇ ನಂಬರ 263/1 ರ 3 ಎಕರೆ ಜಮೀನಿನಲ್ಲಿ ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ 2200 ದ್ರಾಕ್ಷಿ ಗಿಡಗಳು, ಬೋರವೆಲ್ ಕೇಸಿಂಗ 30 ಪೂಟ್, 40 ಬಂಡಲ್ ಡ್ರಿಪ್ ಪೈಪ, 150 ಪೂಟ್ ಮೋಟರ ಕೇಬಲ್, 100 ಪೂಟ್  ಸರ್ವೀಸ್ ವಾಯರ್, ಬೋರವೆಲ್ ಪೈಪ್ ಸುಟ್ಟು , ಸಬ್ ಮರ್ಸಿಬಲ್ ಮೋಟರ್ ಒಳಗಡೆ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ವಿಜಯಪುರದ ಮನಗೂಳಿ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದೆ. 

ಅದೇರೀತಿ 263/2 ರಲ್ಲಿ ನನ್ನ ಸಹೋದರನಾದ ಮಲ್ಲನಗೌಡ ಗೋಲಪ್ಪ ಬಿರಾದರ ಅವರ 3 ಎಕರೆಯಲ್ಲಿ 2200 ದ್ರಾಕ್ಷಿ ಗಿಡಗಳು, ಬೋರವೆಲ್ ಕೇಸಿಂಗ 30 ಪೂಟ್, 40 ಬಂಡಲ್ ಡ್ರಿಪ್ ಪೈಪ್, ಮೋಟರ ಕೇಬಲ 150 ಪೂಟ್, ಸರ್ವೀಸ ವಾಯರ್ 100 ಪೂಟ್, , ಬೋರವೆಲ್ ಪೈಪ್ ಸುಟ್ಟು , ಸಬ್ ಮರ್ಸಿಬಲ್ ಮೋಟರ್ ಒಳಗಡೆ ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ  

ಅದೇರೀತಿ 263/3 ರಲ್ಲಿ ನನ್ನ ಸಹಽಓದರನದ ಬಸವರಾಜ ಬಿರಾದಾರ ಅವರ 2 ಎಕರೆಯಲ್ಲಿ 1600 ದ್ರಕ್ಷಿ ಗಿಡಗಳು, 10 ದರಾಕ್ಷಿ ಟ್ರೇ, ಟ್ರಿಪ್ ಪೈಪ 30 ಬಂಡಲ್, ಸ್ಪಿಂಕಲರ್ ಪೈಪಗಳು 70, 4 ಟೆಂಗಿನ ಮರ, 20 ಪಿ.ವಿ.ಸಿ  ಪೈಪಗಳು, 3 ಬಂಡಲ್ ಸರ್ವಿಸ್ ವಾಯರ್ ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ನಷ್ಟಗೊಂಡಿದೆ. ಈ ವೇಳೆ ಕೆ.ಇ.ಬಿ ಸೇರಿದಂತೆ ಸಂಬಂದಿಸಿದ ಎಲ್ಲ ಅದಿಕಾರಿಗಳು ಆಗಮಿಸಿ ವರದಿ ನೀಡಿದ್ದಾರೆ, ಕೂಡಲೇ ಸಂಭಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದರು. 


ಸುದ್ದಿ ಓದಿ