ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ಬೆಳೆ ಹಾನಿ : ಸ್ಥಳಕ್ಕೆ ಅಧಿಕಾರಿಗಳ ಭೇಟಿ

ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ಬೆಳೆ ಹಾನಿ : ಸ್ಥಳಕ್ಕೆ ಅಧಿಕಾರಿಗಳ ಭೇಟಿ

ವರದಿ: ರವಿಕುಮಾರ ತುಪ್ಪದ  

ಕೊಲ್ಹಾರ 13: ತಾಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ಫೆಬ್ರವರಿ 9 ರಂದು ಸನಂ 274 ರಲ್ಲಿ  ರಾತ್ರಿ 10:30 ರ ವೇಳೆಗೆ ದೊಡ್ಡ ಕೆನಾಲ್ ಒಡೆದು ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ಬೆಳೆ ಹಾನಿಯಾದ ಸ್ಥಳಕ್ಕೆ ಗುರುವಾರ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮೇಲ್ವಿಚಾರಣೆ ಅಧಿಕಾರಿ ಗೋವಿಂದ ರಾಠೋಡ ಹಾಗೂ ತಾಲೂಕು ದಂಡಾಧಿಕಾರಿ ಸಂತೋಷ ಮ್ಯಾಗೇರಿ  ಭೇಟಿ ನೀಡಿದರು.  ಜಿಲ್ಲಾಧಿಕಾರಿಗಳು, ವಿಜಯಪುರ ಇವರ ಮುಖಾಂತರ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಗೆ ರೈತ ಮುಖಂಡ ಸೋಮು ಬಿರಾದಾರ ನೇತೃತ್ವದಲ್ಲಿ ರೈತರು ಮನವಿ  ಸಲ್ಲಿಸಿದರು.

ಹಳ್ಳದ ಗೆಣ್ಣೂರ ಗ್ರಾಮದ ಸ.ನಂ 274/ ಕ್ಷೇತ್ರ 16-00 ಈ ಜಮೀನು ಗುರುಪಾದಪ್ಪ ಬಸನಗೌಡ ಪಾಟೀಲ ಜಮೀನದಲ್ಲಿ ಕೆನಾಲ್ ಕಾಲುವೆ ಉತ್ತರ ದಿಕ್ಕಿಗೆ ಸುಮಾರು 100ಅ ರಷ್ಟು ಕಾಲುವೆ ಹರಿದು ಭೂಮಿಯಲ್ಲಿನ ಮಣ್ಣು ಸುಮಾರು ಮೂರು ಪೂಟ ಗುಮ್ಮಿಗೆ ಹರಿದುಕೊಂಡು ಹೋಗಿರುತ್ತದೆ. ಕ್ಷೇತ್ರ 04-00 ಹಚ್ಚ ಕಬ್ಬು ಇದ್ದು ಪೂರ್ತಿಯಾಗಿ ಹರಿದುಕೊಂಡು ಹೋಗಿದ್ದು ಸ.ನಂ 269/ ಕ್ಷೇತ್ರ 04-09 ರ ಬಸವನಗೌಡ ನಿಂಗಪ್ಪ ಬಗಲಿ ಅಂತಾ ಇದ್ದು ಇದರಲ್ಲಿ ಪೂರ್ತಿ ಈರುಳ್ಳಿ ಬೆಳೆ ಇದ್ದು ಪೂರ್ತಿ ಹಾನಿಯಾಗಿ ಐದು ತಂಗಿನ ಮರಗಳು ಹರಿದುಕೊಂಡು ಹೋಗಿವೆ ಮೂರು ಪೂಟ ತೆಗ್ಗು ಬಿದ್ದು ಮಣ್ಣು ಹರಿದುಕೊಂಡು ಹೋಗಿ ರಸ್ತೆ ಪೂರ್ತಿ ಹಾನಿಯಾಗಿರುತ್ತದೆ. ಸ.ನಂ 271/ ಕ್ಷೇತ್ರ 8-15 ರೆಬಾಯಿ ಅಣ್ಣಪ್ಪಗೌಡ ಪಾಟೀಲ ಜಮೀನಿನಲ್ಲಿ ಬೆಳೆಗಳು ಹಾನಿಯಾಗಿದೆ

ಸ.ನಂ 35/ 4-32 ಈ ಜಮೀನವು ಬಸನಗೌಡ ನಿಂಗಪ್ಪ ಬಗಲಿ ಈ ಜಮೀನದಲ್ಲಿ 4-32 ಪೂರ್ತಿ ಕಬ್ಬು ಬೆಳೆ ಇದ್ದು ಮಣ್ಣ ಹರಿದು ಹೋಗಿ ಒಡ್ಡು ಒಡೆದುಹೋಗಿರುತ್ತದೆ ಹಾಗೂ 5 ಊಕ ಕರೆಂಟ ಮೊಟರ ಮತ್ತು ಬಾವಿ ಮುಚ್ಚಿ ಹೋಗಿರುತ್ತದೆ ಮನೆ ಕಟ್ಟಡಕ್ಕೆ ಹಾಕಿದ್ದ 1 ಡಂಪರ ಉಸುಕು ಪೂರ್ತಿ ಹರಿದು ಹೋಗಿರುತ್ತದೆ. 1 ಬೋರವೆಲ್ ಕುಸಿದು ಹೋಗಿದೆ ಮೂವತ್ತು ಬಾಳೆ ಗಿಡಗಳು ಹರಿದು ಹೋಗಿವೆ, ಡಿ.ಎ.ಪಿ ಗೊಬ್ಬರ ಹತ್ತು, ಪಾಕೀಟ ಪೋಟ್ಯಾಶ್ ಹತ್ತು ಪಾಕೀಟ, ಪೂರ್ಣಾ 19, 50 ಕೆಜಿ, 700 ಪೂಟ ಕೆಬಲ್ ಹಾನಿಯಾಗಿವೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಕೊಲ್ಹಾರ ಪಿಎಸ್‌ಐ ಅಶೋಕ ನಾಯಕ,  ರೈತ ಸಂಘದ ಅಧ್ಯಕ್ಷ ಸೋಮು ಬಿರಾದಾರ, ಸಂಗನಗೌಡ ಪಾಟೀಲ,

ಮಂಜುನಾಥ ಪಾಟೀಲ,ವಿಜಯಮಾಂತೇಶ ಗಿಡ್ಡಪ್ಪಗೋಳ ಇತರರಿದ್ದರು ಕಲರ್ ಬಾಕ್ಸ್‌ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ದೊಡ್ಡ ಕಾಲುವೆ ಒಡೆದು ಹಾನಿಯಾದ ರೈತರಿಗೆ ಒಂದು ವಾರದಲ್ಲಿ ಎಕರೆಗೆ 10 ಲಕ್ಷ ಪರಿಹಾರ ನೀಡಬೇಕು ಜಂಟಿ ಸಮೀಕ್ಷೆ ಹೆಸರಲ್ಲಿ ಅಧಿಕಾರಿಗಳು ತಡ ಮಾಡಿದ್ರೆ ದುರಸ್ತಿಗೆ ಮುಂದಾದ ಕಾಮಗಾರಿಯನ್ನು ಪುನಃ ಬಂದ್ ಮಾಡಿಸುತ್ತೇವೆ . ಸೋಮು ಬಿರಾದಾರ - ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೊಲ್ಹಾರ ಕಲರ್ ಬಾಕ್ಸ್‌ ಉನ್ನತ ಅಧಿಕಾರಿಗಳು ತಿಳಿಸಿದಂತೆ ಶೇ90 ಜಂಟಿ ಸಮೀಕ್ಷೆಯನ್ನು ಮಾಡಿದ್ದೇನೆ ಉಳಿದ ಸಮೀಕ್ಷೆ ಮಾಡಿ ಉನ್ನತ ಅಧಿಕಾರಿಗಳಿಗೆ ಇಂದು ವರದಿಯನ್ನು ಕಳುಹಿಸಿ ಕೊಟ್ಟಿರುತ್ತಾರೆ. ಗೋವಿಂದ ರಾಠೋಡ - ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ  ಮೇಲ್ವಿಚಾರಣಾ ಅಧಿಕಾರಿ 


ಸುದ್ದಿ ಓದಿ