ಬಳ್ಳಾರಿ

26ರಂದು ಬೃಹತ್ ಪ್ರಮಾಣದ ಸಾಲ ಸಂಪರ್ಕ ಕಾರ್ಯಕ್ರಮ

26ರಂದು ಬೃಹತ್ ಪ್ರಮಾಣದ ಸಾಲ ಸಂಪರ್ಕ ಕಾರ್ಯಕ್ರಮ



ಬಳ್ಳಾರಿ 22: ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ಬ್ಯಾಂಕರ್ಸ್‌ ಸಮಿತಿ ಮತ್ತು ಲೀಡ್ ಬ್ಯಾಂಕ್ ಸಹಯೋಗದಲ್ಲಿ ಬೃಹತ್ ಸಾಲ ಸಂಪರ್ಕ ಕಾರ್ಯಕ್ರಮವು ಅ.26 ರಂದು ಬೆಳಗ್ಗೆ 10.30ಕ್ಕೆ ನಗರದ ಕಮ್ಮ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ನವೀನ್ ಕುಮಾರ್ ಅವರು ಹೇಳಿದರು. 


ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಎಲ್ಲಾ ಬ್ಯಾಂಕ್‌ಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದ್ದು, ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಬ್ಯಾಂಕ್‌ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಜನ ಜಾಗೃತಿ ಹಾಗೂ ಅರಿವು ಮೂಡಿಸಲಾಗುವುದು ಎಂದರು. 

ಸರ್ಕಾರಿ ಪ್ರಯೋಜಿತ (ಉಠಣ ಠಿಠಠಜಜ ಛಿಜಟ) ಯೋಜನೆಗಳನ್ನು ಗ್ರಾಹಕರಿಗೆ ತಿಳಿಸಲಾಗುವುದು. ಸಾಮಾಜಿಕ ಭದ್ರತೆಯ ಯೋಜನೆಗಳು ಹಾಗೂ ಅಟಲ್‌ಪೆನ್ಷನ್(ಪಿಂಚಣಿ) ವ್ಯವಸ್ಥೆಗೆ ಸೇರುವುದರ ಬಗ್ಗೆ ಉತ್ತೇಜನ ನೀಡಲಾಗುವುದು. ಆರ್ಥಿಕ ಸೇರೆ​‍್ಡ ಹಾಗೂ ಅಂತರ್ಜಾಲದ ಮೂಲಕ ಮಾಡುವ ಮೋಸದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು. 

ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಗ್ರಾಹಕರಿಗೆ ಅರಿವು, ಸೈಬರ್ ಕ್ರೈಮ್ ಕುರಿತು ಜಾಗೃತಿ, ಡಿಜಿಟಲ್ ಸೇವೆಯ ಸದುಪಯೋಗ ಸೇರಿ ಹತ್ತು ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಿಸಿ ಮೋಹನ್ ಕುಮಾರ್, ವಿಭಾಗೀಯ ವ್ಯವಸ್ಥಾಪಕ ಬಾಲಾಜಿ ಅವರು ಇದ್ದರು. 


ಸುದ್ದಿ ಓದಿ