ಹುಬ್ಬಳ್ಳಿ ಸಿದ್ದಾರೂಢ ಪುರಾಣ ಮಾಹಾಮಂಗಲ
Hubli Siddharudha Purana Mahamangala
ಇಂಡಿ 22: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಕಾಲ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಸಿದ್ಧಾರೂಢ ಪುರಾಣ ಮಹಾಮಂಗಲಗೊಳಿಸಲಾಯಿತು.
ಬೆಳಗ್ಗೆ ಶ್ರೀಮರಳುಸಿದ್ದೇಶ್ವರ ಕತೃ ಗದ್ದುಗಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹತ್ತಹಳ್ಳಿಯ ಶ್ರೀ ಗುರುಪಾದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ ಶ್ರಾವಣ ಮಾಸ ಪ್ರತಿಯೊಬ್ಬರಿಗೂ ಶ್ರೇಷ್ಠವಾಗಿದೆ. ಶಿವಶರಣರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು. ನಾನು ಸುಮಾರು ವರ್ಷಗಳಿಂದ ಹಿಂದೆ ಈ ಶ್ರೀ ಮರುಳಸಿದ್ದೇಶ್ವರ ದೇವಾಲಯದಲ್ಲಿ ತಿಂಗಳ ಕಾಲ ಪುರಾಣ ಹೇಳಿದ್ದನ್ನು ಈ ಸ್ಮರಿಸಿದರು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ ತಡವಲಗಾ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ ಪುರಾಣ ಕೇಳುವುದರಿಂದ ಜೀವನ ಶೈಲಿ ಬದಲಾವಣೆ ಆಗಲು ಸಾಧ್ಯ. ಮನುಷ್ಯ ಜೀವನದಲ್ಲಿ ದಾನ ಧರ್ಮ ದಂತ ಪುಣ್ಯದ ಕಾರ್ಯ ಮಾಡಬೇಕು ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಧಾರ್ಮಿಕ ಪರಂಪರೆಗಳಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಭಕ್ತಿ ಭಾವೈಕತೆಗೆ ಸಾಕ್ಷಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಹೀರೆಮಠ ಪುರಾಣಿಕರಾದ ವೇ.ಶರಣಬಸವಶಾಸ್ತ್ರಿಗಳು ಇಲಕಲ.ಸಂಗೀತ ಸೇವೆ ಮರಿಸ್ವಾಮಿ. ತಬಲಾವಾದ ವೀರೇಶ್ ಹೀರೆಮಠ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಅಶೋಕ ಮಿರ್ಜಿ ರಾಮನಗೌಡ ಪಾಟೀಲ ಶಿವಶಂಕರ ಹಿಳ್ಳಿ ರವಿ ಮಸಳಿ ಕಾಮಣ್ಣ ಮಿರ್ಜಿ ಮಲ್ಲೇಶಿ ಇಂಡಿ ನಿಂಗಪ್ಪ ಗಬ್ಬೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 