ಮನೆ ಕಳ್ಳತನದ ಆರೋಪಿತಳ ಬಂಧನ : 9.27 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮನೆ ಕಳ್ಳತನದ ಆರೋಪಿತಳ ಬಂಧನ : 9.27 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಳಗಾವಿ : ಮನೆಯೊಂದರಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿತಳನ್ನು ಬಂಧಿಸಿರುವ ಮಾರ್ಕೆಟ್ ಪೊಲೀಸ ಠಾಣೆಯ ಪೊಲೀಸರು ಬಂಧಿತ ಆರೋಪಿತಳಿಂದ 9,27,990 ರೂ ಮೌಲ್ಯದ 68.74 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಸುರೇಖಾ ಬಸವರಾಜ ತಳವಾರ (40) ಸಾ: ಉಪ್ಪಾರ ಗಲ್ಲಿ, ಖಾಸಬಾಗ,ಬೆಳಗಾವಿ, ಇವಳು ಬಂಧಿತ ಆರೋಪಿಯಾಗಿದ್ದಾಳೆ. ಶಿವಾಜಿ ನಗರದ ಲಲೀತಾ ಪ್ರಕಾಶ ಮಮದಾಪೂರ ಅವರು 09/03/2026 ರಂದು ಮಾರ್ಕೆಟ್‌ ಠಾಣೆಗೆ ಬಂದು ತಮ್ಮ ಮನೆಯಲ್ಲಿನ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ದೂರು ಸಲ್ಲಿಸಿದ್ದು ಮಾರ್ಕೇಟ ಪಿಎಸ್ ಅಪರಾಧ ಸಂಖ್ಯೆ: 46/2026, ಕಲಂ: 305, 306 ಬಿ.ಎನ್.ಎಸ್-23 ನೇದ್ದರಡಿಯಲ್ಲಿ ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇತ್ತು.

   ಸದರಿ ಈ ಕಳ್ಳತನ ಪ್ರಕರಣದ ಆರೋಪಿತರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರುಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಕಾ&ಸು) ಮತ್ತು ಉಪ ಪೊಲೀಸ್ ಆಯುಕ್ತರು (ಅ&ಸ) ಹಾಗೂ ಎಸಿಪಿ ಸಂತೋಷ ಸತ್ಯನಾಯಿಕ ಇವರ ಮಾರ್ಗದರ್ಶನದಲ್ಲಿ ಮಾರ್ಕೇಟ ಪೊಲೀಸ್ ಠಾಣೆಯ ಪಿಐ ಜೆ. ಎಮ್. ಕಾಲಿಮಿರ್ಚಿ ರವರ ನೇತೃತ್ವದಲ್ಲಿ ವಿಠಲ ಹಾವನ್ನವರ ಪಿ ಎಸ್ ಐ ಕಾನೂನು ಸುವ್ಯವಸ್ಥೆ ಹಾಗೂ ಹುಸೇನ ಕೇರೂರ ಪಿಎಸ್‌ಐ (ಅಪರಾಧ) ಹಾಗೂ ಮಾರ್ಕೇಟ ಅಪರಾಧ ವಿಭಾಗದ ಸಿಬ್ಬಂದಿ ರವರ ತಂಡ ರಚನೆ ಮಾಡಿ ಸದರಿ ಪ್ರಕರಣದ ತನಿಖೆ ಕೈಕೊಂಡು ಪತ್ತೆ ಕಾರ್ಯ ನಿರ್ವಹಿಸುವ ಮೂಲಕ ಆರೋಪಿತಳಾದ- ಸುರೇಖಾ ಕೊಂ. ಬಸವರಾಜ ತಳವಾರ ಈ ಆರೋಪಿತಳಿಗೆ ವಿಚಾರಣೆ ಮಾಡಲು ಆರೋಪಿತಳು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಕಳ್ಳತನ ಪ್ರಕರಣದಲ್ಲಿ ಕಳ್ಳತನ ಮಾಡಿದ ಬಂಗಾರದ ಆಭರಣಗಳು ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಹೇಳಿಕೆ ನೀಡಿದ್ದಳು.

    ಆರೋಪಿತಳ ವಶದಿಂದ ಕಳ್ಳತನ ಮಾಡಿದ ಬಂಗಾರದ ಆಭರಣಗಳು ಒಟ್ಟು 68.74 ಗ್ರಾಂ  9,27,990 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.  ಸದರಿ ಕಾರ್ಯಾಚರಣೆಯಲ್ಲಿ ಮಾರ್ಕೇಟ ಠಾಣೆಯ ಪೊಲೀಸ್ ಅಧಿಕಾರಿಗಳಾದ ಜೆ.ಎಮ್ .ಕಾಲಿಮಿರ್ಚಿ, ಪಿಐ, ಹುಸೇನ ಕೆರೂರ ಪಿ.ಎಸ್.ಐ, ವಿಠಲ್ ಎಲ್, ಎಸ್ ಎಮ್ ಶಿಂಧೆ, ಎ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎಲ್.ಎಸ್. ಕಡೋಲ್ಕರ, ನವೀನಕುಮಾರ ಎ.ಬಿ, ವಿಶ್ವನಾಥ ಮಾಳಗಿ, ಆಶಿರಅಹ್ಮದ್ ಜಮಾದಾರ, ಶಂಕರ ಕುಗಟ್ಟೋಳ್ಳಿ, ಸುರೇಶ ಕಾಂಬಳೆ, ಕಾರ್ತಿಕ ಜಿ.ಎಮ್, ಕೆ.ಎಮ್,ಶಿಲೇದ್ದಾರ, ಎಮ್.ಬಿ.ಒಡೆಯರ, ಮಲ್ಲಿಕಾರ್ಜುನ ಗುದಿಗೊಪ್ಪ, ಎಮ್.ಕೆ.ಶಿಲೇದಾರ ಪ್ರತಿಭಾ ಗಿಡ್ನನವರ, ನೀತಾಲಿ ಕೋಳಿ, ಸಾವಿತ್ರಿ ಗೋಡಿ ಹಾಗೂ ಪೊಲೀಸ್ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ- ರಮೇಶ ಅಕ್ಕಿ, ಮಹಾದೇವ ಕಾಶೀದ, ದೀಪಕ ಇವರ ಕಾರ್ಯ ದಕ್ಷತೆಯನ್ನು ಪೊಲೀಸ್ ಆಯುಕ್ತರು ಇವರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.

ಸುದ್ದಿ ಓದಿ