ಹೊಟೇಲ್ ಉದ್ಯೋಗಕ್ಕೆ ಕೊರೋನಾ ಗ್ರಹಣ
ಹೊಟೇಲ್ಗಳು ಬಂದ್, ಪಾರ್ಸಲ್ಗೆ ಮಾತ್ರ ಅವಕಾಶ: ಬಾಡಿಗೆ ಕಟ್ಟೋಕು ಕಷ್ಟ
ಹುನಗುಂದ; ಕೊವೀಡ್ 19 ಎರಡನೆಯ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೊಟೇಲ್, ದಾಬಾ ಮತ್ತು ಬಾರ್ಗಳೊಳಗೆ ಗುಂಪು ಗುಂಪಾಗಿ ಕುಳಿತುಕೊಳ್ಳೊದನ್ನು ಸಂಪೂರ್ಣ ನಿಷೇಧಸಿದ್ದರಿಂದ ಹೊಟೇಲ್ಗಳನ್ನು ಬಂದ್ ಮಾಡಿ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಿದೆ.
ಹೌದು ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆಯು ವಿರಾಟ ರೂಪವನ್ನು ತೋರುತ್ತಿದ್ದು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೊರೊನಾ ಸೊಂಕು ದೃಢಪಟ್ಟ ಬೆನ್ನಲ್ಲೆಯೇ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಕಟ್ಟುನಿಟ್ಟನ ಕ್ರಮಗಳನ್ನು ಜಾರಿ ಮಾಡಿದೆ. ಅದು ಅಲ್ಲದೇ ಬುಧವಾರ ರಾತ್ರಿಯಿಂದಲೇ ಕರ್್ಯೂಯನ್ನು ಜಾರಿಗೊಳಿಸಿದ್ದರಿಂದ ಅಂಗಡಿ ಮುಂಗಟ್ಟು ಹಾಗೂ ಹೊಟೇಲ್ಗಳಿಗೂ ಕೊರೊನಾದ ಕರೆನೆರಳು ಆವರಿಸಿದೆ.
ಹೊಟೇಲ್ ಒಳ ಪ್ರವೇಶ ಬಂದ್ ಕೇವಲ್ ಪಾರ್ಸಲ್ಗೆ ಅವಕಾಶ; ಕೊರೊನಾ ಮೊದಲ ಅಲೆಗಿಂತ ಎರಡನೆಯ ಅಲೆಯು ಅತ್ಯಂತ ವೇಗವಾಗಿ ಹರಡುತ್ತಿದೆ. ಕಳೆದ ಏಳೆಂಟು ತಿಂಗಳಿಂದ ಕೊರೊನಾ ಅಟ್ಟಹಾಸ ಕಡಿಮೆಯಾಗಿ ತುಸು ನೆಮ್ಮದಿಯಿಂದ ವ್ಯಾಪಾರ ಮಾಡುತ್ತಿದ್ದ ಹೊಟೇಲ್ ಉದ್ಯಮಿಗಳಿಗೆ ಮತ್ತೇ ಕೊರೊನಾ ಕರಾಳ ಛಾಯೆ ಮರಕಳಿಸಿ ಉದ್ಯಮಕ್ಕೆ ಬಾರಿ ಪ್ರಮಾಣದ ಹೊಡೆತ ಬಿದ್ದಿದೆ. ಈ ಬಾರಿಯು ಕೂಡಾ ಕೊವೀಡ್ ಹೆಚ್ಚಳದಿಂದ ಸರ್ಕಾರ ರೋಗ ನಿಯಂತ್ರಣಕ್ಕಾಗಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದರಿಂದ ಹೊಟೇಲ್ಗಳನ್ನು ಬಂದ್ ಮಾಡಿ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಿದ್ದು ಇದರಿಂದ ಹೊಟೇಲ್ ಮಾಲಿಕರಿಗೆ ಬಹಳಷ್ಟು ನಷ್ಟವುಂಟಾಗಲಿದೆ.
ಹೊಟೇಲ್ ಬಾಡಿಗೆ ಕಟ್ಟಲು ಹರಸಾಹಸ ಪಡುವ ಸ್ಥಿತಿ-ಕಳೆದ ಒಂದು ವರ್ಷದ ಹಿಂದೆ ಸೃಷ್ಠಿಯಾದ ಈ ಕೊರೋನಾ ಸಾಂಕ್ರಾಮಿಕ ರೋಗದಿಂದ ಸಂಪೂರ್ಣ ಹೊಟೇಲ್ ಉದ್ದಮಗಳು ನಲೆಕಚ್ಚಿ ಹೋಗಿ ಉದ್ದಮಿಗಳು ಸಾಲ ಶೂಲ ಮಾಡುವಂತಾಗಿತ್ತು. ಅದನ್ನು ಮರೆತು ಏಳೆಂಟು ತಿಂಗಳಿಂದ ಮತ್ತೇ ಹೊಟೇಲ್ ಉದ್ದೆಮವನ್ನು ಪುನಃ ಆರಂಭಿಸಿ ಸ್ವಲ್ಪ ಜೀವಕಳೆ ತುಂಬುವಷ್ಟರಲ್ಲಿಯೇ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಂತೆ ಮತ್ತೇ ಕರೊನಾ ಒಕ್ಕರಿಸಿ ನಮ್ಮ ಜೀವವನ್ನೇ ಹಿಂಡುತ್ತಿದೆ. ಅಧಿಕಾರಿಗಳು ಕೇವಲ ಪಾರ್ಸಲ್ ಮಾತ್ರ ಕೊಡಬೇಕು ಅಂತಾ ಹೇಳುತ್ತಿದ್ದು ಇದರಿಂದ ಪ್ರತಿ ತಿಂಗಳು 65 ಸಾವಿರ ಬಾಡಿಗೆ ಇದ್ದು, ಕೇವಲ ಪಾರ್ಸಲ್ ಕೊಡೋದರಿಂದ ಬಾಡಿಗೆ ಸಹಿತ ಬರದಂತ ಪರಿಸ್ಥಿತಿ ಬಂದಿದೆ ಎಂದು ಹೊಟೇಲ್ ಮಾಲಿಕರು ತಮ್ಮ ಅಳಲನ್ನು ತೋಡಿಕೊಳ್ಳುವಂತಾಗಿದೆ.
ಕಾರ್ಮಿಕರ ಸ್ಥಿತಿ ಅಯೋಮಯ-ಹೊಟೇಲ್ ಉದ್ದೆಮವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದ ಅದೆಷ್ಟೋ ಹೊಟೇಲ್ ಕಾರ್ಮಿಕರು ಮತ್ತೇ ಹೊಟೇಲ್ ಬಂದ್ ಮಾಡಿದ್ದರಿಂದ ಕೆಲಸವಿಲ್ಲದೇ ಬೇರೆ ಉದ್ಯೋಗ ಸಿಗದೇ ಕಂಗಾಲಾಗಿದ್ದು.ಇದೇ ರೀತಿ ಮುಂದುವರೆದರೇ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಒಟ್ಟಾರೆಯಾಗಿ ಕೊರೊನಾ ಎನ್ನುವ ಪೆಡಂಭೂತ ಬೆಂಬಿಡದೇ ಮನುಕುಲವನ್ನು ಕಾಡುವುದರ ಜೊತೆಗೆ ಸಧ್ಯ ಕೆಲವು ಉದ್ದೆಮಗಳಿಗೂ ಕಂಟಕವನ್ನು ತಂದೊಡ್ಡಿದೆ. ಇದರಿಂದ ಹೊಟೇಲ್ ದಾಬಾಗಳು ಸಂಪೂರ್ಣ ಬಂದ್ ಆಗಿ ಉದ್ಯಮಿಗಳಿಗೆ ಬಾರಿ ನಷ್ಟವನ್ನು ಉಂಟು ಮಾಡಿದ್ದಂತು ಸತ್ಯ.
ಕಳೆದ ಒಂದು ವರ್ಷದ ಹಿಂದೆ ಬಾರಿ ನಷ್ಟವನ್ನು ತಂದೊಡ್ಡಿದ್ದ ಕೊರೊನಾ ರೋಗ ಏಳೆಂಟು ತಿಂಗಳಿಂದ ಅದರ ಅಲೆ ಕಡಿಮೆಯಾಗಿತ್ತು. ಇನ್ನಾದರೂ ನೆಮ್ಮದಿಯಿಂದ ಉದ್ದಮವನ್ನು ಆರಂಭಿಸಿ ಕಳೆದ ವರ್ಷದ ನಷ್ಟವನ್ನು ಮರಳಿ ಪಡೆಯಬೇಕು ಅಂತಾ ಉತ್ಸಾಹದಲ್ಲಿದ್ದ ನಮಗೆ ಸಾರಿಗೆ ನೌಕರರ ಮುಷ್ಕರದಿಂದ ವ್ಯಾಪಾರವಿಲ್ಲದಂತಾಗಿತ್ತು. ಎರಡು ದಿನಗಳಿಂದ ಬಸ್ ಆರಂಭವಾಗಿದ್ದು ಇನ್ನಾದರೂ ವ್ಯಾಪಾರ ಶೂರವಾಗುತ್ತೇ ಎನ್ನುವಷ್ಟರಲ್ಲಿಯೇ ಕೊರೊನಾ ಮತ್ತೊಂದು ಅಲೆ ಪ್ರಾರಂಭವಾಗಿ ಮತ್ತೇ ಹೊಟೇಲ್ ಬಂದ್ ಮಾಡುವಂತಾಗಿದೆ. ಹೊಟೇಲ್ ಉದ್ಯಮಿಗಳು.