ಸಹಕಾರಿ ಸಂಘದ ಬೆಳೇವಣಿಗೆಗೆ ಪ್ರಾಮಾಣಿ ಸೇವೆ ಅಗತ್ಯ: ದೇಸಾಯಿ
ತಾಳಿಕೋಟೆ: ಸಹಕಾರ ರಂಗದಲ್ಲಿಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳು ಅಭಿವೃದ್ದಿ ಹೊಂದಬೇಕಾದರೆ ಅಲ್ಲಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಿಷ್ಠಾವಂತ ಪ್ರಾಮಾಣಿಕತೆ ಮುಖ್ಯವಾಗಿದೆ. ಸತತ ಆರು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿರುವ ಬ್ಯಾಂಕಿನ ಪ್ರಗತಿಗೆ ಸಿಬ್ಬಂದಿ ಪರಿಶ್ರಮ ಹಾಗೂ ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಮಾಜಿ ಶಾಸಕ ಶಿವಪುತ್ರ್ಪ ದೇಸಾಯಿ ಹೇಳಿದರು.
ಅವರು ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ನಡೆದ ಶಿವರಶಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘ ನಿಯಮಿತದ ಆರನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಬ್ಯಾಂಕ್ ಹೆಚ್ಚಿನ ಲಾಭ ಗಳಿಸಲು ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿಸಬೇಕು. ಆಗಲೇ ಅಭಿವೃದ್ಧಿ ಸಾಧ್ಯ ಎಂದರು. ಬ್ಯಾಂಕಿನಲ್ಲಿ 6.75 ಲಕ್ಷ ಠೇವಣಿ ಸಂಗ್ರಹವಾಗಿರುವುದು ಷೇರುದಾರರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದ್ಯೋತಕವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಪ್ರಭುಗೌಡ ಬಿ.ಎಲ್, ಸಮಾಜ ಮುಖಿ ಕೆಲಗಳೇ ಸಮಾಜದಲ್ಲಿ ಗೌರವ ಸ್ಥಾನ ಸಿಗಲು ಕಾರಣವಾಗಿವೆ. ನನ್ನ ಸಾಮರ್ಥ್ಯ ಗುರುತಿಸಿ ಬಿ.ಎಲ್.ಡಿಇಏ ಸಂಸ್ಥೆಯವರು ನನಗೆ ನೇತ್ರ ವೈದ್ಯನಾಗಿ ಸೇವೆಸಲ್ಲಿಸಲು ಅವಕಾಶ ನೀಡಿದ್ದನ್ನು ಮರೆಯಲಾರೆ. ನಾನು ಸಮಾಜಕ್ಕೆ ನೀಡಿದ್ದಕ್ಕಿಂತ ಹೆಚ್ಚು ನನಗೆ ಸಮಾಜ ನಿಡಿದೆ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಹಿರೂರ ಹಿರೇಮಠದ ಪಟ್ಟದ್ದೇವರು ಗುರುಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಸ್. ಪಾಟೀಲ (ಯಾಳಗಿ), ಎಪಿಎಂಸಿ ನಿವೃತ್ತ ಹೆಚ್ಚುವರಿ ನಿರ್ದೇಶಕ ಸಿ.ಎಸ್.ಕರಡ್ಡಿ, ಸಹಕಾರಿ ಸಂಘಗಳ ನಿವೃತ್ತ ಉಪನಿಬಂಧಕ ಪಿ.ಬಿ.ಕಾಳಗಿ, ಅಧ್ಯಕ್ಷತೆ ವಹಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಹಕಾರಿ ಸಂಘ ನಿ. ಅಧ್ಯಕ್ಷ ಬಿ.ಎನ್. ಹಿಪ್ಪರಗಿ ಮಾತನಾಡಿದರು.
ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್. ಎಸ್. ಪಾಟೀಲ, ವೇದಿಕೆಯಲ್ಲಿದ್ದರು. ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು. ಶರಣಯ್ಯ ರಾಮಗಿರಿಮಠ ವರದಿ ವಾಚಿಸಿದರು. ಪ್ರಾಸ್ತಾವಿಕವಾಗಿ ವ್ಯವಸ್ಥಾಪಕ ಸಿ.ಎನ್.ಮಾಲಿಪಾಟೀಲ ಮಾತನಾಡಿದರು. ಅಪ್ಪಾಹಾಹೇಬಗೌಡ ಮಾಲಿಪಾಟೀಲ ನಿರ್ವಹಿಸಿದರು. ಸಂಗಮೇಶ ದೇಸಾಯಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ, ನಿರ್ದೇಶಕರು ಹಾಗೂ ಸಮಾಜದ ಹಿರಿಯರು, ಸಿಬ್ಬಂದಿ ವರ್ಗ, ಷೇರುದಾರರು ಭಾಗವಹಿಸಿದ್ದರು.