ಧಾರಾಕಾರ ಮಳೆಗೆ ಕುಸಿದ ಮನೆಗಳು
ಮುಂಡಗೋಡ 07: ತಾಲೂಕಿನಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಅಲ್ಲಲ್ಲಿ ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಸಂಬವಿಸಿದೆ.
ಪಟ್ಟಣದ ಕಿಲ್ಲೆ ಓಣಿಯ ರಜೀಯಾಬೇಗಂ ಹುಸೇನಸಾಬ ಹುನಗುಂದ ಹಾಗೂ ತಾಲೂಕಿನ ಚವಡಳ್ಳಿ ಗ್ರಾ.ಪಂ ವ್ಯಾಪ್ತಿಯ ಲಕ್ಕೊಳ್ಳಿ ರುಕ್ಮವ್ವ ಪವಾರ ಎಂಬುವರಿಗೆ ಸೇರಿದ ಮೆನೆಗಳು ಕುಸಿದು ತೀವ್ರ ಹಾನಿ ಸಂಬವಿಸಿದೆ. ತಮ್ಯಾನಕೊಪ್ಪ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ರುಕ್ಮಿಣಿ ರಾಥೋಡ ಎಂಬುವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟಿದೆ. ಅದೃಷ್ಟವಷಾತ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.