ಬಳ್ಳಾರಿ

ಗೃಹರಕ್ಷಕ, ಪೌರರಕ್ಷಣಾ ದಿನಾಚರಣೆ

ಗೃಹರಕ್ಷಕ, ಪೌರರಕ್ಷಣಾ ದಿನಾಚರಣೆ

ಲೋಕದರ್ಶನ ವರದಿ 

 ಬಳ್ಳಾರಿ 07: ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ವತಿಯಿಂದ ದಿ. 07ರಂದು ಬೆಳಗ್ಗೆ 07:30 ಗಂಟೆಗೆ ಬಳ್ಳಾರಿ ಜಿಲ್ಲಾ ಗೃಹರಕ್ಷಕದಳದ ಕಛೇರಿ ಆವರಣದಲ್ಲಿ ಗೃಹರಕ್ಷಕ ಮತ್ತು ಪೌರರಕ್ಷಣಾ ದಿನಾಚರಣೆಯನ್ನು ಆಚರಿಸಲಾಯಿತು. 

      ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೆ.ತಿಮ್ಮಾರೆಡ್ಡಿ, ಮಾನ್ಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು, ಬಳ್ಳಾರಿ ಇವರು ಆಗಮಿಸಿದ್ದರು. ಇವರು ಮಾತನಾಡುತ್ತಾ ಗೃಹರಕ್ಷಕರು ಕಾನೂನು ಸುವ್ಯವಸ್ಥೆ ಬಂದೋಬಸ್ತ್‌, ಚುನಾವಣಾ ಕರ್ತವ್ಯ, ರಕ್ಷಣೆ ಕಾರ್ಯಚರಣೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಗೃಹರಕ್ಷಕರು ಉತ್ತಮ ಸೇವೆ ಸಲ್ಲಿಸುತಿರುವುದು ಪ್ರಶಂಸನಾರ್ಹ. ಇದೇ ರೀತಿ ಮುಂದುವರೆಕೊಂಡು ಹೋಗುವಂತೆ ಗೃಹರಕ್ಷಕರಿಗೆ ಕರೆ ನೀಡಿದರು. 

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎ.ಷಕೀಬ್, ಸಮಾದೇಷ್ಟರು, ಗೃಹರಕ್ಷಕದಳ, ಬಳ್ಳಾರಿ. ಇವರು ಮಾತನಾಡುತ್ತಾ ಗೃಹರಕ್ಷಕ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗುವುದರೊಂದಿಗೆ ಸಮಾಜಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವಂತೆ ಗೃಹರಕ್ಷಕರಿಗೆ ಕರೆ ನೀಡಿದರು. 

     ಗೃಹರಕ್ಷಕ ದಿನಾಚರಣೆ ಅಂಗವಾಗಿ ಬಳ್ಳಾರಿ ಘಟಕದ ಹಿರಿಯ ಗೃಹರಕ್ಷಕ .ಬಿ.ಈರಣ್ಣ ಮತ್ತು ಮಹಿಳಾ ಗೃಹರಕ್ಷಕಿ ಕುಮಾರಿ. ಇ. ಪಾರ್ವತಿ ರವರ ಅನನ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಎನ್‌.ಎಸ್‌.ಲಕ್ಷ್ಮೀನರಸಿಂಹ ನಿವೃತ್ತ ಸೆಕೆಂಡ್ ಇನ್ ಕಮಾಂಡ್ ಇವರು ಗೃಹರಕ್ಷಕ ಸಂಸ್ಥೆ ಮತ್ತು ನಿಷ್ಕಾಮ ಸೇವೆಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 

     ಸಮಾರಂಭದಲ್ಲಿ ಮೊದಲಿಗೆ ಹೆಚ್‌.ಲಕ್ಷ್ಮೀನಾರಾಯಣ ಘಟಕಾಧಿಕಾರಿಗಳು ಇವರು ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಕಂಪ್ಲಿಯ ಗೃಹರಕ್ಷಕ ವಾದ್ಯವೃಂದ ಸುಶ್ರಾವ್ಯವಾಗಿ ರಾಷ್ಟ್ರಗೀತೆ ನುಡಿಸುವ ಮೂಲಕ ಮುಖ್ಯ ಅತಿಥಿಗಳಿಂದ ಗೃಹರಕ್ಷಕ ಧ್ವಜಾರೋಹಣವನ್ನು ನೆರವೇರಿಸಲಾಯಿತು. ನಾಗವೇಣಿ ಮಹಿಳಾ ಗೃಹರಕ್ಷಕಿ ಪ್ರಾರ್ಥಿಸಿದರು. ಬಿ.ಎನ್‌.ಗೋಪಿನಾಥ ಪ್ರ.ದ.ಸ, ಸ್ವಾಗತಿಸಿದರು. ಜಡೆಪ್ಪ, ಗೃಹರಕ್ಷಕರು ವರದಿ ವಾಚನ ಮಾಡಿದರು. ಎಲ್‌.ವಾಲ್ಯಾನಾಯ್ಕ, ಘಟಕಾಧಿಕಾರಿಗಳು ಪ್ರಮಾಣ ವಚನ ಬೋಧಿಸಿದರು ಮತ್ತು ವಂದನಾರೆ​‍್ಣ ನಡೆಸಿಕೊಟ್ಟರು. ಎಸ್‌.ಎಂ.ಗಿರಿಶ್, ಘಟಕಾಧಿಕಾರಿಗಳು, ಹೊಸಪೇಟೆ. ಕಾರ್ಯಕ್ರಮ ನಿರೂಪಣೆ ಮಾಡಿದರು.  

     ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ಅಧಿಕಾರಿಗಳಾದ ಶ್ರೀಯುತ ಬಸವರಾಜ್, ಸುರೇಶ್ ಜೋಶಿ, ಬಿ.ಕೆ.ಬಸವಲಿಂಗ, ಲೋಕೇಶ್, ವೆಂಕಟೇಶ, ನರಿ ಮಲ್ಲಿಕಾರ್ಜುನ, ಹೊನ್ನೂರುವಲಿ, ಬಿ.ನಾಗರಾಜ, ನಿವೃತ್ತ ಸಹ ಬೋಧಕ ಪಿ.ಗೋವಿಂದರಾಜುಲು ಸೇರಿದಂತೆ ಬಳ್ಳಾರಿ ಜಿಲ್ಲೆಯ ಎಲ್ಲಾ ಪುರುಷ ಮತ್ತು ಮಹಿಳಾ ಗೃಹರಕ್ಷಕರು ಹಾಗೂ ಕಛೇರಿ ಸಿಬ್ಬಂದಿಯವರು ಭಾಗವಹಿಸಿದರು. 


ಸುದ್ದಿ ಓದಿ