ಸಂಭ್ರಮದ ಹೋಳಿ ಆಚರಣೆ
ಮುಂಡಗೋಡ: ತಾಲೂಕಿನ ಸನವಳ್ಳಿ ಹಾಗೂ ನ್ಯಾಸರ್ಗಿ ಪ್ಲಾಟ್ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲಿ ರವಿವಾರ ಯುವಕರು ಹಾಗೂ ಮಕ್ಕಳು ಒಬ್ಬರಿಗೊಬ್ಬರು ಬಣ್ಣ ಎರಚುತ್ತ ಓಕುಳಿಯಾಡಿ ಸಂಭ್ರಮಿಸಿದರು.
ಯುವಕರು ಬೈಕ್ ಮೇಲೆ ಊರ ತುಂಬಾ ಸುತ್ತಾಡಿ ಕೇಕೆ ಹಾಕುತ್ತಾ ತಮ್ಮ ಸ್ನೇಹಿತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಮಕ್ಕಳು ತಾವೇನೂ ಕಡಿಮೆ ಇಲ್ಲ ಎಂಬಂತೆ ಬಣ್ಣ ಎರಚುತ್ತ ಖುಷಿ ಪಟ್ಟರು. ಯುವಕರ ತಂಡ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು. ಹಿರಿಯರು-ಕಿರಿಯರು ಎಂಬ ಭೇದ-ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬಣ್ಣ ಆಡಿದರು. ಸಿಪಿಐ ಎಸ್.ಎಸ್.ಸಿಮಾನಿ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರಿ್ಡಸಲಾಗಿತ್ತು.