ಭಾರತ ಜೋಡೊ ಮುಕ್ತಾಯದ ಅಂಗವಾಗಿ ರಾಷ್ಟ್ರೀಯ ಧ್ವಜಾರೋಹಣ
ತಾಳಿಕೋಟಿ: ಕಾಂಗ್ರೆಸ್ ಪಕ್ಷದ ಸರ್ವೋಚ್ಛ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡ ಭಾರತ ಜೋಡೊ ಪಾದಯಾತ್ರೆಯ ಸಮಾರೋಪ ಸಮಾರಂಭದ ನಿಮಿತ್ಯ ಪಕ್ಷದ ಕಾರ್ಯಾಲಯದಲ್ಲಿ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಮಯದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ (ನಾವದಗಿ) ಅವರು ಮಾತನಾಡಿ ರಾಹುಲ್ ಗಾಂಧಿಯವರ ಈ ಯಾತ್ರೆಯು ದೇಶದ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 3970 ಕಿ.ಮೀ. ಸಂಚರಿಸಿ ಕೋಟಿಗಟ್ಟಲೆ ಜನರ ಮನಪರಿವರ್ತನೆ ಮಾಡುವದರೊಂದಿಗೆ ಇಡೀ ದೇಶವನ್ನು ಒಗ್ಗೂಡಿಸಿ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದರು.
ಪುರಸಭೆ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ ಮಾತನಾಡಿ ದೇಶದ ಏಕತೆ ಹಾಗೂ ಶಾಂತಿಗಾಗಿ ನಡೆಸಿದ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರ ಈ ಪಾದಯಾತ್ರೆ ಇತಿಹಾಸವನ್ನು ನಿರ್ಮಿಸಿದೆ. ಈ ಯಾತ್ರೆ ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆ ತಂದಿದೆ. ಹುತಾತ್ಮರ ದಿನವಾದ ಇಂದು ಅಹಿಂಸಾ ಮಾರ್ಗದ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಮಹಾತ್ಮ ಗಾಂಧೀಜಿಯವರ ಬದುಕಿನ ಆದರ್ಶಗಳನ್ನು ನಾವು ಬದುಕಿನುದ್ದಕ್ಕೂ ಅನುಸರಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಪಕ್ಷದ ಹಿರಿಯ ಸದಸ್ಯರಾದ ಜಿ.ಎಸ್. ಕಶೆಟ್ಟಿ, ಎಂ.ಜಿ. ಪಾಟೀಲ, ಚಾಂದಸಾಬ ಲಾಹೋರಿ, ಮಲ್ಲನಗೌಡ ಬಿರಾದಾರ, ಬಿ.ಎನ್. ಹಿಪ್ಪರಗಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸದಸ್ಯ ಪರಶುರಾಮ ತಂಗಡಗಿ, ಸಂಗನಗೌಡ ಅಸ್ಕಿ, ಹಣಮಗೌಡ ಬಿರಾದಾರ, ಮೋದಿನಸಾ ನಗಾರ್ಚಿ, ಮಹಿಬೂಬ ಕೆಂಭಾವಿ, ಫಯಾಜ ಯತ್ನಾಳ, ನಬಿ ಲಾಹೋರಿ, ಮತ್ತಿತರರು ಇದ್ದರು.