ಮುಂಡರಗಿ

ಹಿಟ್ಟಿನಳ್ಳಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಹಿಟ್ಟಿನಳ್ಳಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಿಜಯಪುರ 12: ಬೆಂಗಳೂರಿನ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ವಿಜಯಪುರ ಜಿಲ್ಲಾ ಘಟಕದಿಂದ ನೀಡಲಾಗುವ ಪ್ರತಿಷ್ಠಿತ “ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ” ರಾಜ್ಯ ಮಟ್ಟದ 2020-21 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬಸವನಾಡು ವಿಜಯಪುರ ಜಿಲ್ಲೆಯ ಶಿಕ್ಷಕರಾದ ಅಶೋಕ ಎಚ್, ಹಿಟ್ಟಿನಳ್ಳಿ ಅವರ ಶೈಕ್ಷಣಿಕ ರಂಗದ ಶ್ಲಾಘನೀಯ ಸೇವೆಗಾಗಿ ನೀಡಿ ಗೌರವಿಸಲಾಗಿದೆ.

ವಿ.ಭ. ದರಬಾರ ಪದವಿ ಪೂರ್ವ ಕಾಲೇಜಿನ ಪ್ರಾಥಮಿಕ ಶಿಕ್ಷಕರಾದ ಅಶೋಕ ಎಚ್, ಹಿಟ್ಟಿನಳ್ಳಿ ಅವರಿಗೆ ಜ.10 ರಂದು ಜಿಲ್ಲೆಯ ಚಡಚಣದ ಎಮ್.ಈ.ಎಸ್ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಈ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನಿಸಲಾಯಿತು.

ಸುದ್ದಿ ಓದಿ