ಬಳ್ಳಾರಿ

ಉಗ್ರಪ್ಪ ಅಮಾನತು ಹಿಂಪಡೆಯಲು ಹಿರೇಮಠ್ ಮನವಿ

ಉಗ್ರಪ್ಪ ಅಮಾನತು ಹಿಂಪಡೆಯಲು ಹಿರೇಮಠ್ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 16: ಇತ್ತೀಚೆಗೆ ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮೇಲುಧ್ವನಿಯಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಉಗ್ರ​‍್ಪ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದಾರೆ. 


ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಮಾಜಿ ಸಂಸದ ಉಗ್ರ​‍್ಪ ಡಿಕೆಶಿಯವರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಎಲ್ಲೂ ಮಾತನಾಡಿಲ್ಲ. ಆದರೆ ದೃಶ್ಯಮಾಧ್ಯಮಗಳು ಇದನ್ನು ತಪ್ಪುತಪ್ಪಾಗಿ ಬಿಂಬಿಸಿ ಉಗ್ರ​‍್ಪನವರ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ ಎಂದು ಪತ್ರೇಶ್ ಆರೋಪಿಸಿದ್ದಾರೆ 

ಮಾಜಿ ಸಂಸದ ಉಗ್ರ​‍್ಪನವರು ಕಾಂಗ್ರೆಸ್ ಸೇರಿದಾಗಿನಿಂದ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವ ಜೊತೆಗೆ ಜೀವನದುದ್ದಕ್ಕೂ ಸಂಸ್ಕಾರಯುತ ಮೌಲ್ಯಗಳ ಜೊತೇ ಶಿಸ್ತನ್ನು ಅಳವಡಿಸಿಕೊಂಡು ಬದುಕುತ್ತಿದ್ದು ಅವರನ್ನು ಅಮಾನತು ಮಾಡಿರುವುದು ಅವಸರದ ನಿರ್ಧಾರವಾಗಿದೆ ಎಂದಿದ್ದಾರೆ 

ಕರ್ನಾಟಕದ ಅನುಭವಿ ಮತ್ತು ಮೇಧಾವಿ ರಾಜಕಾರಿಣಿ ಹಾಗೂ ಬಹುಸಂಖ್ಯಾತ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಉಗ್ರ​‍್ಪ ಅವರನ್ನು ಅಮಾನತುಗೊಳಿಸಿ ನೋಟೀಸ್ ನೀಡಿರುವುದು ಮುಜುಗರದ ಸಂಗತಿಯಾಗಿದ್ದು ತಕ್ಷಣವೇ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಅಮಾನತು ಮತ್ತು ಶಿಸ್ತು ಸಮಿತಿ ನೀಡಿದ ನೋಟೀಸ್ ಹಿಂಪಡೆದು ಅವರ ಸಂಸದೀಯ ಜಾಣ್ಮೆ ಮತ್ತು ಅನುಭವವನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಪತ್ರೇಶ್ ಮನವಿ ಮಾಡಿದ್ದಾರೆ 


ಸುದ್ದಿ ಓದಿ