ಯುವ ಪೀಳಿಗೆಗೆ ಸನಾತನ ಹಿಂದೂ ಧರ್ಮದ ಜಾಗೃತಿ ಮೂಡಿಸುವುದು ಅವಶ್ಯ: ಬಾಕಳೆ
ಲೋಕದರ್ಶನ ವರದಿ
ಗದಗ 26: ಗದಗ ನಗರದ ಗಂಗಾಪುರ ಪೇಟ್ ವ ಖಾನತೋಟ ಓಣಿಯ ಶ್ರೀ ಬಾಲ ಮಾರುತಿ ದೇವಸ್ಥಾನದಲ್ಲಿ ಪ್ರತಿ ಶನಿವಾರ ಸಾಯಂಕಾಲ ಯುವಪೀಳಿಗೆ ಯುವಕರಿಗೆ ಸನಾತನ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಶ್ರೀರಾಮಚಂದ್ರನ ಇತಿಹಾಸವನ್ನು ಚರಿತ್ರೆಯನ್ನು ತಿಳಿಸುವ ಉದ್ದೇಶದಿಂದ ಶ್ರೀ ರಾಮ ನಾಮ ಜಪ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ ನಮ್ಮ ಸನಾತನ ಹಿಂದೂ ಸಂಸ್ಕೃತಿಯನ್ನು ಹಾಗೂ ಅಯೋದ್ಯ ಪತಿ ಶ್ರೀರಾಮಚಂದ್ರ ದೇವರ ಜೀವನ ಚರಿತ್ರೆಯ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಏಕೆಂದರೆ ಈಗಿನ ಕೆಲವು ಯುವಪೀಳಿಗೆಗಳು ದೇವರ ಬಗ್ಗೆ ಭಯ-ಭಕ್ತಿ ತಿಳಿಸಿ ಕೊಡಬೇಕಾಗಿದೆ ಕೆಲ ಯುವಕರು ಕೇವಲ ಮೊಬೈಲಲ್ಲಿ ಪಬ್ಜಿ ಗೇಮ್ ಗೇಮ್ ಇನ್ನು ಅನೇಕ ಗೇಮ್ ಆಡೋದು ಹವ್ಯಾಸ ಮಾಡಿಕೊಂಡಿದ್ದಾರೆ ಇಂತಹ ಹವ್ಯಾಸವನ್ನು ದೂರ ಮಾಡಬೇಕಾಗಿದೆ ಮಕ್ಕಳಿಗೆ ಧರ್ಮದ ಬಗ್ಗೆ ದೇಶದ ಬಗ್ಗೆ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದರಿಂದ ಯಾವತ್ತೂ ಯಾವುದೇ ಮಕ್ಕಳು ದುಶ್ಚಟಕ್ಕೆ ಬಲಿಯಾಗದೆ ಬಹಳ ಒಳ್ಳೆಯ ರೀತಿ ತಮ್ಮ ಅಭ್ಯಾಸದ ಕಡೆ ಗಮನ ಹರಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ತಮ್ಮ ಮನಸ್ಸಿನಲ್ಲಿ ಒಳ್ಳೆ ಒಳ್ಳೆ ವಿಚಾರಗಳನ್ನು ಮಾಡುತ್ತಾ ಬೆಳೆಯುತ್ತಾರೆ ಮತ್ತು ಹಿರಿಯರಿಗೆ ತಂದೆ ತಾಯಿಗೆ ಗೌರವ ನೀಡುವುದನ್ನು ಕಲಿಯುತ್ತಾರೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗೌರವ ಕಾರ್ಯದರ್ಶಿ ಪ್ರವೀಣ್ ಹಬೀಬ್ ಅಬ್ದುಲ್ ಮುನಾಫ್ ಮುಲ್ಲಾ ಸುದರ್ಶನ್ ಗಂಜಿ ಗೀರೀಶ್ ಕರಣೆ ನವೀನ್ ತಾತುಸ್ಕರ್ ನವೀನ್ ಕೋಟೆಕಲ್ ರಾಜು ಬಾಕಳೆ ಕಿಶನ್ ಪ್ರಜ್ವಲ್ ರಂಗ ವಿಶಾಲ್ ಸಚಿನ್ ಯಶ್ ಇನ್ನೂ ಅನೇಕ ಯುವಕರು ಮಹಿಳೆಯರು ಹಿರಿಯರು ಉಪಸ್ಥಿತರಿದ್ದರು.