ತಾಳಿಕೋಟಿ

ಹೋಳಿ ಹಬ್ಬ ಹಿಂದು ಸಂಪ್ರದಾಯದ ಪ್ರತೀಕ : ರಾಘವೇಂದ್ರ

ಹೋಳಿ ಹಬ್ಬ ಹಿಂದು ಸಂಪ್ರದಾಯದ ಪ್ರತೀಕ : ರಾಘವೇಂದ್ರ

ಪಟ್ಟಣದಲ್ಲಿ ಬಣ್ಣದೋಕುಳಿ ಸಂಭ್ರಮ | ಡಿಜೆಗೆ ಕುಣಿದು ಕುಪ್ಪಳಿಸಿದ ಯುವಕರು

ತಾಳಿಕೋಟಿ: 2 ಸಾವಿರ ವರ್ಷಗಳಷ್ಟು ಪುರಾತನವಾದ ಭಾರತದ ಸನಾತನ ಹಿಂದು ಧರ್ಮದ ಆಚಾರ, ಸಂಸ್ಕೃತಿ ಹಾಗೂ ಸಂಪ್ರದಾಯಗಳು ಜಗತ್ತಿನಲ್ಲಿಯೇ ವೈಶಿಷ್ಟ್ಯಪೂರ್ಣವಾದದ್ದಾಗಿದೆ. ಆಧುನಿಕತೆಯ ಭರದಲ್ಲಿ ಇಂದು ನಾವು ನಮ್ಮ ಹಬ್ಬ ಹರಿದಿನಗಳಲ್ಲಿಯ ಈ ಸಂಪ್ರದಾಯಗಳನ್ನು ಮರೆಯುತ್ತಿದ್ದೇವೆ. ಅವುಗಳನ್ನು ರಕ್ಷಿಸುವ ಅಗತ್ಯ ಇದೆ ಎಂದು ಪುರಸಭೆ ನಾಮನಿದರ್ೇಶಿತ ಸದಸ್ಯ ರಾಘವೇಂದ್ರ ವಿಜಾಪೂರ ಹೇಳಿದರು.

ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದ ಶಿವಾಜಿ ವೃತ್ತದ ಹತ್ತಿರ ಆಯೋಜಿಸಿದ ಹೋಳಿ ಹಬ್ಬದ ವಿಶೇಷ ರಂಗಿನ ಆಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾದಿಂದಾಗಿ ಕಳೆದ 2 ವರ್ಷಗಳಿಂದ ಬಣ್ಣದ ಹಬ್ಬ ಕಳೆಗುಂದಿತ್ತು ಆದರೆ ಈ ಬಾರಿ ಹಿಂದಿಗಿಂತಲೂ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುವ ಅವಕಾಶ ಸಿಕ್ಕಿದೆ ಅದನ್ನು ಬಳಸಿಕೊಂಡು ಈ ಸಂತೋಷವನ್ನು ಸಂಭ್ರಮಿಸೋಣ ಎಂದರು.

ನಂತರ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಯುವಕರು ಬಣ್ಣದ ಆಟಕ್ಕಾಗಿಯೇ ವಿಶೇಷವಾಗಿ ವ್ಯವಸ್ಥೆ ಮಾಡಿದ ಶಾಮಿಯಾನ ಮೇಲಿನಿಂದ ಬೀಳುವ ತುಂತುರು ಹನಿ ನೀರು ಹಾಗೂ ವಿವಿಧ ಬಣ್ಣಗಳಲ್ಲಿ ಮಿಂದೆದ್ದರು. ಜೊತೆಗೆ ಬಣ್ಣದಾಟದೊಂದಿಗೆ ರಂಜಿಸಲು ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ನೂರಾರು ಯುವಕರು ಒಟ್ಟಾಗಿ ಹಾಡುಗಳಿಗೆ ಹೆಜ್ಜೆ ಹಾಕಿ ಅತ್ಯಂತ ಶಾಂತಯುತವಾಗಿ ಸಂಭ್ರಮಿಸುತ್ತಿರುವುದು ಕಂಡುಬಂದಿತು. ಬಣ್ಣಕ್ಕೆ ಯಾವುದೇ ಭೇದ ಇಲ್ಲ ಎನ್ನುವುದನ್ನು ಅವರ ಸಂಭ್ರಮವೇ ಸಾರಿ ಹೇಳುತ್ತಿತ್ತು.

ರಂಗೀನಾಟದ ನೇತೃತ್ವವನ್ನು ಮುಖಂಡರಾದ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಜಯಸಿಂಗ್ ಮೂಲಿಮನಿ, ತಮ್ಮಣ್ಣ ದೇಶಪಾಂಡೆ ವಹಿಸಿದ್ದರು.

ಉತ್ತಮ ಪೊಲೀಸ್ ಬಂದೋಬಸ್ತಿ: ಬಣ್ಣದಾಟದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಪಿಎಸ್ಐ ಸುರೇಶ ಮಂಟೂರ ತಮ್ಮ ಸಿಬ್ಬಂದಿಗಳೊಂದಿಗೆ ಬಂದೋಬಸ್ತ್ ಕೈಗೊಂಡಿದ್ದರು 

ಸುದ್ದಿ ಓದಿ