ಹಿಂದೂ ಹುಡುಗಿಯರೇ ಹುಷಾರ್ ಇದು ಲವ್ ಜಿಹಾದ್! ಮುಖಳೆಪ್ಪನಿಗೈತಿ ಮಾರಿ ಹಬ:್ಬ ಪ್ರಮೋದ್ ಮುತಾಲಿಕ್
ಮುಂಡಗೋಡ 26 : ಪಟ್ಟಣದಲ್ಲಿ ಮುಖಳೆಪ್ಪ ಕುಖ್ಯಾತಿಯ ಯುಟ್ಯೂಬರ್ ಖಾಜಾ ಬಂದೆ ನವಾಜ್ ನೊಂದಿಗೆ ಹಿಂದು ಯುವತಿಯನ್ನು ಕಾನೂನು ಬಾಹಿರವಾಗಿ ವಿವಾಹ ನೋಂದಣಿ ಮಾಡಿದ ಮುಂಡಗೋಡ ಉಪ ನೋಂದಣಾಧಿಕಾರಿ ಮತ್ತು ಸಿಬ್ಬಂದಿಗಳನ್ನು ತಕ್ಷಣ ಅಮಾನತು ಮಾಡಿ ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕೈಗೊಂಡು ಶಿಕ್ಷೆಗೊಳವಡಿಸಬೇಕಲ್ಲದೇ ಅಕ್ರಮವಾಗಿ ನಡೆದಿರುವ ವಿವಾಹ ನೋಂದಣಿ ರದ್ದು ಮಾಡಬೇಕೆಂದು ಪ್ರಮೋದ್ ಮುತಾಲಿಕ ನೇತೃತ್ವದಲ್ಲಿ ಗುರುವಾರ ತಾಲೂಕಿನ ಹಿಂದೂ ಸಂಘಟನೆಯ ಒಕ್ಕೂಟದವರು ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯೂ ಶಿವಾಜಿ ಸರ್ಕಲ್ರೆಗೆ ನಡೆಯಿತು. ಶಿವಾಜಿ ಸರ್ಕಲ್ ನಲ್ಲಿ ಬಳಿ ಪ್ರಮೋದ್ ಮುತಾಲಿಕ ಮಾತನಾಡಿ,ಲವ್ ಜಿಹಾದ್ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಮುಸ್ಲಿಮರು ಮದುವೆಯಾಗುತ್ತಿದ್ದಾರೆ. ಆದರೂ ಹಿಂದೂಗಳಿಗೆ ಬುದ್ದಿ ಬರುತ್ತಿಲ್ಲ. ಈ ಧರ್ಮ, ದೇಶ ಉಳಿಸಲು ನೋಡಿ ವ್ಯವಹಾರ ಮಾಡಬೇಕು.ಗಜಾನನ ವಿಸರ್ಜನೆ ವೇಳೆ ಕಲ್ಲುಎಸೆಯುತ್ತಾರೆ. ಹಿಂದೂಗಳ ಹಬ್ಬಗಳಿಗೆ ತೊಂದರೆ ನೀಡುತ್ತಾರೆ. ನಮ್ಮ ದೇಶದಲ್ಲಿ ಹುಟ್ಟಿ ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನಕ್ಕೆ ಹೊಗಳಿ ನಾಲಿಗೆ ಚಾಚಿದರೆ ಸುಮ್ಮನಿರುವುದಿಲ್ಲ ಹುಷಾರ್ ಎಂದು ಗುಡುಗಿದ ಅವರು, ಇನ್ನು ಮುಂದೆ ನಮಗೆ ತೊಂದರೆ ಕೊಟ್ಟರೆ ಪೊಲೀಸ್ ದೂರು ನೀಡುವುದಿಲ್ಲ, ಬದಲಾಗಿ ಮನೆಯೊಳಗೆ ಹೊಕ್ಕಿ ಹೊಡೆಯುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಈ ಸಂದರ್ಭದಲ್ಲಿ ಮಂಜುನಾಥ ಹರಿಜನ, ವಿಶ್ವನಾಥ ನಾಯರ್, ಪ್ರಕಾಶ ಬಡಿಗೇರ, ಮಂಜುನಾಥ ಹರಮಲಕರ್, ಶಂಕರ ಲಮಾಣಿ ಬಸವರಾಜ ತನಿಖೆದಾರ ಸುರೇಶ ಕಲ್ಲೋಳ್ಳಿ, ಮಂಜುನಾಥ ಶೇಟ್, ರವಿ ತಳವಾರ, ಮಲ್ಲಿಕಾರ್ಜುನ ಗೌಳಿ, ಹುಬ್ಬಳ್ಳಿಯ ಬಸವರಾಜ ಗೌಡ್ರು ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು.