ಗಾಣಗಾಪೂರಕ್ಕೆ ತೆರಳುತ್ತಿರುವ ಮಹಾರಾಷ್ಟ್ರದ ಪಾದಯಾತ್ರಿಗಳು
Hikers from Maharashtra heading to Ganagapur
ಆಲಮೇಲ 30 : ದತ್ತ ಜಯಂತಿ ನಿಮಿತ್ಯ ಮಹಾರಾಷ್ಟ್ರದ ಭಕ್ತರು ದತ್ತಾತ್ರೆ ಮೂರ್ತಿಯ ಪಲ್ಲಕಿಯೊಂದಿಗೆ ಪಾದಯಾತ್ರೆ ಮೂಲಕ ಗಾಣಗಾಪೂರಕ್ಕೆ ತೆರಳುತ್ತಿರುವದು. ದತ್ತಾತೆಯ ಪಾದಯಾತ್ರಿಗಳು ಬಾನುವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳಿಯ ಭಕ್ತರು ಸ್ವಾಗತಿಸಿದರು. ನಂತರ ಅಫಜಲಪೂರ ರಸ್ತೆಯ ಮಹಾದೇವ ಗೋಪಾಳ ಬಂಡಗಾರ ಇವರ ತೊಟದ ಮನೆಯಲ್ಲಿ ವಾಸ್ತವ್ಯ ಮಾಡಿದರು ಬಂಡಗಾರ ಕುಟುಂಬ ಭಕ್ತಿಯಿಂದ ಸ್ವಾಗತಿಸಿ ವಿಶೇಷ ಪೂಜೆಗೈದು ಬಿಳಕೊಟ್ಟರು. ಬೆಳಗ್ಗೆ 11 ಗಂಟೆಗೆ ಬಂಡಗಾರ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಮದ್ಯಾಹ್ನ ಪ್ರಸಾದ ಸೇವಿಸಿ ಸಾಯಂಕಾಲ 4 ಗಂಟೆಗೆ ಮತ್ತೆ ಪಾದಯಾತ್ರೆ ಮೂಲಕ ದೇವಣಗಾಂವ ಮಾರ್ಗವಾಗಿ ಗಾಣಗಾಪೂರಕ್ಕೆ ತೆರಳಿದರು. ಪಾದಯಾತ್ರಿಕರು ಮಹಾರಾಷ್ಟ್ರದ ಸೊಲಾಪೂರ ಜಿಲ್ಲೆಯ ಮಾಳಸಿರಸ ನಗರದ ಗುರುದೇವ ದತ್ತ ಸೇವಾ ಮಂಡಳಿ ನೇತೃತ್ವದಲ್ಲಿ ಮೂರೆನೆ ವರ್ಷ ಹೊಸ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯ ಮೂಲಕ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರ ದತ್ತಾತ್ರಾಯ ದರ್ಶನಕ್ಕೆ ತೆರಳುತ್ತಿರುವದಾಗಿ ಗುರುದೇವ ದತ್ತ ಸೇವಾ ಮಂಡಳಿ ಪ್ರಮುಖ ಪೂಜಾರಿ ದಾದಾ ಮಹಾರಾಜ ತಿಳಿಸಿದರು. ಪಾದಯಾತ್ರೆಯಲ್ಲಿ ಪ್ರಮುಖರಾದ ಬಾರಮತಿಯ ದತ್ತಾತ್ರೆಯ ಗೋರೆ, ವಿಜಯ ಗೊರೆ ಮುಂತಾದವರು ಇದ್ದರು. ವಿಶೇಷವಾಗಿ ಗಾಣಗಾಪುರಕ್ಕೆ ತೆರಳುತ್ತಿರುವ ಪಾದಯಾತ್ರೆ ಫಲಕ್ಕಿ ರಥ ವನ್ನು ಸಾಗರ್ತಿಸಿ ಬೀಳ್ಕೊಟ್ಟ ಮಹಾದೇವ ಬಂಡಗಾರ ಕುಟುಂಬಸ್ಥರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 