ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ:ಸಚಿವ ಆನಂದಸಿಂಗ್
*ಕೋವಿಡ್ ಪ್ರಗತಿ ಪರಿಶೀಲನಾ ಸಭೆ *ಕೋವಿಡ್ ನಿಯಂತ್ರಣಕ್ಕೆ ಡಿಎಂಎಫ್ ಹಣ ಬಳಕೆ
ಬಳ್ಳಾರಿ,ಮೇ10: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರಕಾರದ ಬಳಿ ಕೈಚಾಚುವ ಪ್ರಶ್ನೆಯೇ ಇಲ್ಲ;ನಮ್ಮಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಅಪಾರ ಪ್ರಮಾಣದ ಹಣವಿದ್ದು,ಅದನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಮತ್ತು ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ನೀಡುವ ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಅವುಗಳ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಪ್ರತಿ ತಾಲೂಕುಗಳಲ್ಲಿ ಕೋವಿಡ್ ಸಂಬಂಧಿಸಿದಂತೆ ಸಭೆ ನಡೆಸಿ ಕೋವಿಡ್ ಸೊಂಕಿತರಿಗೆ ಅಗತ್ಯ ಚಿಕಿತ್ಸೆ ಮತ್ತು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು.
ಸೊಂಕಿನ ಪ್ರಕರಣಗಳು ವರದಿಯಾದ ಕಡೆ ಈ ಮುಂಚೆ ಮಾಡಿದಂತೆ ಅತ್ಯಂತ ಆ್ಯಕ್ಟಿವ್ ಆಗಿ ಸ್ಯಾನಿಟೈಸೇಶನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
3ನೇ ಅಲೆ ಬರದಂತೆ ತಡೆಗಟ್ಟುವ ಹಾಗೂ ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 10ವೆಂಟಿಲೇಟರ್ ವ್ಯವಸ್ಥೆ ಹಾಗೂ 10ಬ್ಯೂರೋ ಸಿಲಿಂಡರ್ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ರಾಜ್ಯ ಸರಕಾರದಿಂದ 40 ವೆಂಟಿಲೇಟರ್ ಗಳು ಬಳ್ಳಾರಿಗೆ ಬಂದಿವೆ ಎಂದರು.
*ಹೆಚ್ಚಿನ ಚಿಕಿತ್ಸೆ; ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕೆ ಕ್ರಮ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಮ್ಸ್, ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ಗಳನ್ನು ಹೆಚ್ಚಿಸಿ ಹೆಚ್ಚಿನ ಸಂಖ್ಯೆಯ ಕೋಏಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿರುವ ತಜ್ಞ ವೈದ್ಯರು, ವೈದ್ಯರ, ಹಾಗೂ ಇತರೆ ಆರೋಗ್ಯ ಸಿಬ್ಬಂದಿಯವರನ್ನು ತಾತ್ಕಾಲಿಕವಾಗಿ ಡಿಎಂಎಫ್ ಅನುದಾನದಡಿ ನೇಮಕಕ್ಕೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ತಿಳಿಸಿದರು.
ಹೆಚ್ಚುವರಿಯಾಗಿ 50 ವೆಂಟಿಲೇಟರ್ಗಳನ್ನು ಪೂರೈಸಲು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು,40ವೆಂಟಿಲೇಟರ್ಗಳನ್ನು ಸರಕಾರದಿಂದ ಜಿಲ್ಲೆಗೆ ಹಂಚಿಕೆ ಮಾಡಿ ಪೂರೈಕೆ ಮಾಡಲು ಅನುಮತಿ ದೊರೆತಿದೆ. ಜಿಲ್ಲೆಯ ವಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳ ಆರೈಕೆಗಾಗಿ ಐಸಿಯು ಬೆಡ್ಗಳನ್ನು ಹೆಚ್ಚಿಸಲಾಗಿದೆ ಎಂದರು.
*ಜಿಂದಾಲ್ ಎದುರುಗಡೆ 1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ: ಜೆಎಸ್ಡಬ್ಲ್ಯೂ ಸಹಯೋಗದೊಂದಿಗೆ ತೋರಣಗಲ್ಲುವಿನಲ್ಲಿ 40 ಐಸಿಯು ಸೇರಿದಂತೆ ಒಟ್ಟು 1ಸಾವಿರ ಆಮ್ಲಜನಕಯುಕ್ತ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ತಜ್ಞ ವೈದ್ಯರ ಹಾಗೂ ಸಿಬ್ಬಂದಿಯವರ ನೇಮಕಾತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅಲ್ಲದೆ ಸಿದ್ಧತೆಯ ಭರದಿಂದ ಸಾಗಿದ್ದು, ಶಿಘ್ರದಲ್ಲಿ ಸಂಪೂರ್ಣವಾಗಿ ಸಿದ್ಧವಾಗಿ ಕಾಯರ್ಾರಂಭವಾಗಲಿದೆ ಎಂದು ಸಚಿವ ಆನಂದಸಿಂಗ್ ಅವರು ತಿಳಿಸಿದರು.
ಜಿಲ್ಲೆಯಲ್ಲಿ 109 ಅಂಬ್ಯುಲೆನ್ಸ್ಗಳಿದ್ದು ಇನ್ನೂ ಹೆಚ್ಚುವರಿಯಾಗಿ ಅಂಬುಲೆನ್ಸ್ಗಳನ್ನು ಖರೀದಿಸಲಾಗುತ್ತಿದೆ ಎಂದರು.
*ಹಡಗಲಿ,ಹೊಸಪೇಟೆಯಲ್ಲಿ ವಿಆಡರ್ಿಎಲ್ ಲ್ಯಾಬ್ ಪರೀಕ್ಷಾ ಕೇಂದ್ರ:ಹೊಸದಾಗಿ ವಿಆರ್ಡಿಎಲ್ ಲ್ಯಾಬ್ ಪರೀಕ್ಷಾ ಕೇಂದ್ರಗಳನ್ನು ಹೊಸಪೇಟೆ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದರು.
ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಸೋಂಕಿತರು ಚಿಕಿತ್ಸೆಯ ವೇಳೆ ಮರಣ ಹೊಂದಿದಲ್ಲಿ ಗೌರವಯುತವಾಗಿ ಶವ ಸಾಗಿಸಲು (ಶವ ಸಂಸ್ಕಾರಕ್ಕಾಗಿ) ಡಿಸಿಹೆಚ್/ಡಿಸಿಹೆಚ್ಸಿಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲು ತೀಮರ್ಾನಿಸಲಾಗಿದೆ ಎಂದರು.
*ಟೆಸ್ಟಿಂಗ್ ರಿಸಲ್ಟ್ ಶೀಘ್ರ:ಜಿಲ್ಲೆಯಲ್ಲಿ ಈ ಮುಂಚೆ ವೈಯಕ್ತಿಕ 1600 ಟೆಸ್ಟಿಂಗ್ ಮಾಡಲಾಗುತ್ತಿತ್ತು; ಈಗ ಮೂರು ಆಟರ್ಿಪಿಸಿಆರ್ ಮಶೀನ್ ಅಳವಡಿಸುವುದರ ಮೂಲಕ ಅದರ ಪ್ರಮಾಣವನ್ನು 3400ಕ್ಕೇರಿಸಲಾಗಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಯಲ್ಲಿ ಟೆಸ್ಟಿಂಗ್ ರಿಸಲ್ಟ್ ಒಂದೇ ದಿನದಲ್ಲಿ ಲಭ್ಯವಾಗುತ್ತಿದೆ. ಯಾವುದೇ ರೀತಿಯಲ್ಲಿ ತಡವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಟೆಸ್ಟಿಂಗ್ ಫಲಿತಾಂಶ ಬಂದ ನಂತರ ಯಾರು ಐಸೋಲೇಶನ್ ಇರಬೇಕು ಅಥವಾ ಯಾರು ಆಸ್ಪತ್ರೆಯಲ್ಲಿರಬೇಕು ಎಂಬುದನ್ನು ಆರ್ಆರ್ಟಿ ತಂಡಗಳು ಸೋಂಕಿತರ ಮನೆಗೆ ತೆರಳಿ ಅವರ ಆರೋಗ್ಯ ತಪಾಸಣೆ ಮಾಡಿ ನಿರ್ಧರಿಸಲಿವೆ. ಕೋವಿಡ್ ಸಹಾಯವಾಣಿ ಕೇಂದ್ರದಿಂದಲೂ ಸೊಂಕಿತರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಲಾಗುತ್ತಿದೆ.
ಹೋಂ ಐಸೋಲೇಶನ್ನಲ್ಲಿರುವ ಸೊಂಕಿತರ ಮನೆಗೆ ಪ್ರತಿನಿತ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾಗಳು ತೆರಳಿ ಆರೋಗ್ಯ ತಪಾಸಣೆ ಮಾಡಿ ಸ್ಥಿತಿಗತಿ ಅರಿತು ಚಿಕಿತ್ಸೆಗೆ ಕ್ರಮವಹಿಸಲಿದ್ದಾರೆ ಎಂದರು. ಸೊಂಕಿತರಿಗೆ ಔಷಧೀಯ ಕಿಟ್ ಗಳನ್ನು ಒದಗಿಸಲಾಗುತ್ತಿದೆ ಎಂದರು.
*ತುಂಬಾ ತಡವಾಗಿ ಆಸ್ಪತ್ರೆಗೆ ಬರುತ್ತಿರುವುದೇ ಸಾವು ಹೆಚ್ಚಳಕ್ಕೆ ಕಾರಣ: ಜಿಲ್ಲೆಯಲ್ಲಿ ಸಾವುಗಳ ಪ್ರಮಾಣ ಹೆಚ್ಚಾಗುತ್ತಿವೆ. ಐಎಲ್ಐ ಮತ್ತು ತೀವ್ರ ಉಸಿರಾಟದ ಸಮಸ್ಯೆ ಇರುವವರು ತುಂಬಾ ತಡವಾಗಿ ಆಸ್ಪತ್ರೆಗೆ ಬರುತ್ತಿರುವುದೇ ಸಾವುಗಳ ಹೆಚ್ಚಳವಾಗುವುದಕ್ಕೆ ಕಾರಣವಾಗುತ್ತಿವೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ವಿವರಿಸಿದರು.
ಈ ಮುಂಚೆಯ ಕೋವಿಡ್ ಅಲೆ ಇಷ್ಟು ತೀವ್ರವಾಗಿರಲಿಲ್ಲ.ಈಗಿರುವ ಸೊಂಕು ನಾಲ್ಕು ದಿನಗಳಲ್ಲಿಯೇ ರೋಗಿಯನ್ನು ಗಂಭೀರವಾಗಿಸ್ತಿದೆ ಎಂದು ಹೇಳಿದ ಅವರು ಬಳ್ಳಾರಿ, ಹೊಸಪೇಟೆ, ಸಂಡೂರು ತಾಲೂಕುಗಳಲ್ಲಿ ಮನೆ-ಮನೆ ಸಮೀಕ್ಷೆ ಆರಂಭಿಸಿ ಐಎಲ್ಐ ಮತ್ತು ತೀವ್ರ ಉಸಿರಾಟದ ಸಮಸ್ಯೆ ಇರುವವರನ್ನು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಚಿಕಿತ್ಸೆಗೆ ಕ್ರಮವಹಿಸಲಾಗುತ್ತಿದೆ ಎಂದರು.
*ಸೊಂಕಿತರ ಆರೋಗ್ಯ ಕಾಳಜಿಗಾಗಿ 48ಆರ್ಆರ್ಟಿ ತಂಡಗಳ ನೇಮಕ: ಸೋಂಕಿತರನ್ನು ಹೋಮ್ ಐಶೋಲೇಷನ್ನಲ್ಲಿರುವಾಗ ನಿರಂತರ ಆರೋಗ್ಯ ಕಾಳಜಿಗಾಗಿ 48 ಆರ್ಆರ್ಟಿ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯರು, ಆರೋಗ್ಯ ಸಿಬ್ಬಂದಿ ವರ್ಗದವರು ಮನೆ ಭೇಟಿ ಮೂಲಕ ಸೋಂಕಿತರ ಆರೋಗ್ಯವನ್ನು ವಿಚಾರಿಸಿ ಸೂಕ್ತ ಸಲಹೆ ಮಾರ್ಗದರ್ಶನ ಹಾಗೂ ವ್ಯಾಪಕ ಜಾಗೃತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸಿಂಗ್ ವಿವರಿಸಿದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮವಹಿಸಲು ಹೆಚ್ಚುವರಿಯಾಗಿ 200 ಸಿಂಡರ್ಗಳನ್ನು ಖಲೀದಿಸಲಾಗಿದೆ ಎಂದರು.
ನ್ಯೂಡೆಂಟಲ್ ಕಾಲೇಜಿನಲ್ಲಿ 140 ಬೆಡ್ಗಳ ಸಾಮಥ್ರ್ಯವನ್ನು ಹೆಚ್ಚಿಸಲು,ಓಲ್ಡ್ ಡೈರಕ್ಟರ್ ಆಫೀಸ್ನಲ್ಲಿ 43 ಬೆಡ್ಗಳ ಸಾಮಥ್ರ್ಯವನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ. ವಿಮ್ಸ್ ಆಡಿಟೋರಿಯಂನಲ್ಲಿ 60 ಬೆಡ್ಗಳ ಜಿಲ್ಲಾ ಕೋವಿಡ್ ಆಸ್ಪತ್ರೆ ಆರಂಭಿಸಲು ಕ್ರಮವಹಿಸಲಾಗಿದೆ.ಟ್ರಾಮಾಕೇರ್ನಲ್ಲಿ 18 ಐಸಿಯುಗಳನ್ನು ಆರಂಭಿಸಲಾಗುತ್ತಿದೆ.
ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 20 ಬೆಡ್ಗಳನ್ನು ಆರಂಭಿಸಲು ಕ್ರಮವಹಿಸಲಾಗಿದೆ.ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಾಸ್ಟೆಲ್ನಲ್ಲಿ 80 ಹಾಸಿಗೆಗಳ ಡಿಸಿಹೆಚ್ ಆರಂಭಿಸಲು ಕ್ರಮವಹಿಸಲಾಗಿದೆ ಎಂದು ಡಿಸಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.
*14359 ಸಕ್ರಿಯ ಪ್ರಕರಣಗಳು;908ಸಾವು: ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 14359 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಮೊದಲ ಅಲೆ ಸೇರಿದಂತೆ ಇದುವರೆಗೆ 908 ಜನರು ಈ ಸೊಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ಅವರು ಸಭೆಗೆ ತಿಳಿಸಿದರು.
1374 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 151 ಜನರು ಕೋವಿಡ್ ಕೇರ್ ಸೆಂಟರ್ಗಳಲಿದ್ದರೇ, 12834 ಜನರು ಹೋಂ ಐಸೋಲೇಶನ್ನಲ್ಲಿದ್ದಾರೆ ಎಂದು ವಿವರಿಸಿದ ಅವರು ಬಳ್ಳಾರಿ ತಾಲೂಕಿನಲ್ಲಿ ಅತಿಹೆಚ್ಚು ಜನರು ಈ ಸೊಂಕಿಗೆ ತುತ್ತಾಗಿದ್ದಾರೆ.ನಂತರದ ಸ್ಥಾನ ಹೊಸಪೇಟೆಯದ್ದಾಗಿದೆ ಎಂದರು.
ಕೋವಿಡ್ ಮೊದಲ ಅಲೆಯಲ್ಲಿ 597 ಜನರು ಈ ಸೊಂಕಿಗೆ ಬಲಿಯಾಗಿದ್ದರೆ, ಕೋವಿಡ್ 2ನೇ ಅಲೆಯಲ್ಲಿ 311 ಜನರು ಬಲಿಯಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ 45ರಿಂದ 59 ವರ್ಷದೊಳಗಿನ 601191 ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು; ಇದುವರೆಗೆ 322879 ಜನರು ಮೊದಲ ಡೋಸ್ ಪಡೆದರೇ 2ನೇ ಡೋಸ್ ಅನ್ನು 31573 ಜನರು ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ 174345 ಜನರಲ್ಲಿ 137546 ಜನರು ಮೊದಲ ಡೋಸ್ ಪಡೆದುಕೊಂಡರೇ 33733 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದರು.
ಬಳ್ಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ನನ್ನ ಕ್ಷೇತ್ರದಲ್ಲಿ ಅತಿಹೆಚ್ಚು ಸೊಂಕಿನ ಪ್ರಮಾಣಗಳು ವರದಿಯಾಗುತ್ತಿವೆ.ಕೊಳಗಲ್ ಗ್ರಾಮದಲ್ಲಿ ಅತಿಹೆಚ್ಚು ಕೋವಿಡ್ ದೃಢಪಟ್ಟಿದ್ದು, ಆ ಗ್ರಾಮದ ಹತ್ತಿರವಿರುವ ಮೊರಾಜರ್ಿ ದೇಸಾಯಿ ವಸತಿಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವತರ್ಿಸಿ ಅನುಕೂಲ ಮಾಡಿಕೊಡಬೇಕು. ಜಿಲ್ಲಾ ಖನಿಜ ನಿಧಿಯ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸದೇ ಆರೋಗ್ಯಕ್ಷೇತ್ರಕ್ಕೆ ಎಲ್ಲ ಹಣ ಬಳಸಿ:ರೋಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.
ಆಂಧ್ರಪ್ರದೇಶದಿಂದ ಬರುವ ಜನರನ್ನು ತಡೆಹಿಡಿಯಬೇಕು. ಗ್ರಾಮಗಳಲ್ಲಿ ಸ್ಯಾನಿಟೇಜೇಶನ್ ಮಾಡಬೇಕು ಎಂದರು.
ಹೂವಿನಡಗಲಿ ಶಾಸಕ ಪಿ.ಟಿ.ಪರಮೇಶ್ವರ ಮಾಯಕ್ ಅವರು ಮಾತನಾಡಿ, ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ವ್ಯಕ್ತಪಡಿಸುವ ಅಭಿಪ್ರಾಯಕ್ಕೂ,ವಾಸ್ತವಕ್ಕೂ ತುಂಬಾ ವ್ಯತ್ಯಾಸವಿದೆ ಎಂದರು. ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದಕ್ಕೆ ಕ್ರಮವಹಿಸಬೇಕು.ಕೊರೊನಾ ನಿಯಂತ್ರಣ ನೆಪದಲ್ಲಿ ಡಿಎಂಎಫ್ ಹಣ ದುರ್ಬಳಕೆಯಾಗದಂತೆ ನೋಡಿಕೊಳ್ಳಿ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ,ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಸೆಂಟರ್ಗಳ ಸ್ಥಾಪಿಸಬೇಕು,ತಪಾಸಣಾ ಪ್ರಮಾಣ ಹೆಚ್ಚಿಸಬೇಕು ಹಾಗೂ ಸಮುದಾಯಕ್ಕೆ ಹರಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದರು.
ಸಂಸದ ಕರಡಿ ಸಂಗಣ್ಣ ಅವರು ಪ್ರತಿ ತಾಲೂಕುಗಳಲ್ಲಿ ಸಿಟಿ ಸ್ಕ್ಯಾನ್ ಸೆಂಟರ್ ಗಳನ್ನು ಆರಂಭಿಸಬೇಕು. ಈ ಪ್ರಮಾಣದಲ್ಲಿ ಕೋವಿಡ್ ಹರಡುವುದಕ್ಕೆ ಹೋಂ ಐಸೋಲೇಶನ್ ಕೂಡ ಕಾರಣ ಎನ್ನುವುದು ನನ್ನ ನಂಬಿಕೆಯಾಗಿದ್ದು,ಐಸೋಲೇಶನ್ ನಲ್ಲಿದ್ದಾಗ ಮನೆಯವರಿಗೆಲ್ಲ ಹರಡುತ್ತಿದ್ದು, ಸೊಂಕು ಬಂದ ತಕ್ಷಣ ಅವರನ್ನು ಕೋವಿಡ್ ಕೇರ್ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದರು.
ಸಂಸದ ಸೈಯದ್ ನಾಸೀರ್ ಹುಸೇನ್ ಅವರು ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸಬೇಕು. ಈಗ ಜಿಲ್ಲೆಯಲ್ಲಿ ಕೋವಿಡ್ನಿಂದ ಸಾವನ್ನಪ್ಪಿದವರ ಪಟ್ಟಿಯಲ್ಲಿ ಎಷ್ಟು ಜನ ಮನೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದರ ವಿವರ ಬಹಿರಂಗಪಡಿಸಿ ಎಂದು ಒತ್ತಾಯಿಸಿದರು. ರೆಮಡಿಸಿವಿರ್ ಲಸಿಕೆ ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂ ಎಲ್ಲ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸಂಸದರಾದ ವೈ.ದೇವೇಂದ್ರಪ್ಲ, ಕರುಣಾಕರರೆಡ್ಡಿ,ಸೋಮಶೇಖರ್ ರೆಡ್ಡಿ,ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಲ, ಗಣೇಶ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಮ,ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ಕೆ.ಆರ್.ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಡಿಎಚ್ಒ ಡಾ.ಜನಾರ್ಧನ್, ವಿಮ್ಸ್ ನಿದರ್ೇಶಕ ಡಾ.ಗಂಗಾಧರಗೌಡ ಮತ್ತಿತರರು ಇದ್ದರು.