ರಾಷ್ಟ್ರೀಯ

ಹೈಕೋರ್ಟ್ ನಲ್ಲಿ ಅಮೆಜಾನ್ ಗೆ ಆದ ಹಿನ್ನಡೆಯನ್ನು ಸ್ಟಾಕ್ ಎಕ್ಸ್ ಚೇಂಜ್ ಗಮನಕ್ಕೆ ತಂದ ಕಿಶೋರ್ ಬಿಯಾನಿ ಕಂಪೆನಿ

ಹೈಕೋರ್ಟ್ ನಲ್ಲಿ ಅಮೆಜಾನ್ ಗೆ ಆದ ಹಿನ್ನಡೆಯನ್ನು ಸ್ಟಾಕ್ ಎಕ್ಸ್ ಚೇಂಜ್ ಗಮನಕ್ಕೆ ತಂದ ಕಿಶೋರ್ ಬಿಯಾನಿ ಕಂಪೆನಿ

ನವದೆಹಲಿ, ಡಿಸೆಂಬರ್ 24:  ಯುನೈಟೆಡ್ ಸ್ಟೇಟ್ಸ್ ಮೂಲದ ಇ- ಕಾಮರ್ಸ್ ದಿಗ್ಗಜ ಅಮೆಜಾನ್ ಕಂಪೆನಿಯು ಭಾರತದ ಲಿಸ್ಟ್ ಆಗದ ಘಟಕದೊಂದಿಗೆ ಒಪ್ಪಂದಗಳ ಮಿಶ್ರಣ ಮಾಡಿ, ಫ್ಯೂಚರ್ ರೀಟೇಲ್ ಮೇಲೆ ಹತೋಟಿ ಸಾಧಿಸುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಫೆಮಾ, ಎಫ್ ಡಿಐ ನಿಯಮಗಳ ಉಲ್ಲಂಘನೆ ಆಗುತ್ತದೆ ಎಂಬುದಾಗಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ ಎಂದು ಕಿಶೋರ್ ಬಿಯಾನಿ ನೇತೃತ್ವದ ಕಂಪೆನಿ ಬುಧವಾರ ತಿಳಿಸಿದೆ.

ಡಿಸೆಂಬರ್ 21ರಂದು ದೆಹಲಿ ಹೈಕೋರ್ಟ್ ನೀಡಿದ ಆದೇಶದ ವಿಶ್ಲೇಷಣೆಯನ್ನು ಮಾಡಲಾಗಿದೆ. ಫ್ಯೂಚರ್ ರೀಟೇಲ್ ಲಿಮಿಟೆಡ್ (ಎಫ್ ಆರ್ ಎಲ್) ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ಈ ಬಗ್ಗೆ ತಿಳಿಸಿದ್ದು, ಕಂಪೆನಿಯ ಆಡಳಿತ ಮಂಡಳಿಯು ರಿಲಯನ್ಸ್ ರೀಟೇಲ್ ಗೆ 24,713 ಕೋಟಿ ರುಪಾಯಿಗೆ ತನ್ನ ಆಸ್ತಿಯ ಮಾರಾಟ ವ್ಯವಹಾರ ಮಾಡುತ್ತಿರುವುದು "ಕಾನೂನಿನ ಪ್ರಕಾರ ಸಿಂಧುವಾಗಿದೆ" ಎಂದು ಕೋರ್ಟ್ ತಿಳಿಸಿದೆ.

ತುರ್ತಾಗಿ ಅಹವಾಲನ್ನು ಆಲಿಸಿ, 24,713 ಕೋಟಿ ರುಪಾಯಿಯ ವ್ಯವಹಾರವನ್ನು ನಿಲ್ಲಿಸಬೇಕು ಎಂದು ಅಮೆಜಾನ್ ಕೇಳಿಕೊಂಡಿರುವುದು ಕಾನೂನಿನ ಆಧಾರದಲ್ಲಿ ಮಾನ್ಯ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಫ್ಯೂಚರ್ ಗ್ರೂಪ್- ರೀಟೇಲ್ ಮಧ್ಯದ ವ್ಯವಹಾರದ ವಿರುದ್ಧವಾಗಿ ಕಾನೂನು ಪ್ರಾಧಿಕಾರಗಳ ಮೊರೆಹೋಗುವ ಅಮೆಜಾನ್ ಹಕ್ಕನ್ನು ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಇದರ ಜತೆಗೆ 2019ರಲ್ಲಿ ಅಮೆಜಾನ್ ನಿಂದ ಫ್ಯೂಚರ್ ರೀಟೇಲ್ ನ ಮಾತೃಸಂಸ್ಥೆಯಾದ ಫ್ಯೂಚರ್ ಕೂಪನ್ ನಲ್ಲಿ ಮಾಡಿದಂಥ ಹೂಡಿಕೆ ಬಗ್ಗೆಯೂ ಕೆಲವು ಮುಖ್ಯ ಅಂಶಗಳನ್ನು ಹೈಕೋರ್ಟ್ ಆದೇಶದಲ್ಲಿ ಗಮನಿಸಲಾಗಿದೆ.

ಆ ನಂತರ ತುಂಬ ಸ್ಪಷ್ಟವಾಗಿ ಹೇಳಿರುವುದೇನೆಂದರೆ, ಫ್ಯೂಚರ್ ರೀಟೇಲ್ ಲಿಮಿಟೆಡ್ ಮತ್ತು ಅಮೆಜಾನ್ ಮಧ್ಯೆ ಯಾವುದೇ ಒಪ್ಪಂದ ಇಲ್ಲ. ಒಪ್ಪಂದ ಆಗಿರುವುದು ಫ್ಯೂಚರ್ ರೀಟೇಲ್ ಲಿಮಿಟೆಡ್ ಅಂಗಸಂಸ್ಥೆಯಾದ ಅನ್ ಲಿಸ್ಟೆಡ್ ಫ್ಯೂಚರ್ ಕೂಪನ್ ಲಿಮಿಟೆಡ್ ಹಾಗೂ ಅಮೆಜಾನ್ ಮಧ್ಯೆ.

ಇನ್ನು ಫ್ಯೂಚರ್ ರೀಟೇಲ್ ಮೇಲೆ ಹತೋಟಿ ಸಾಧಿಸಬೇಕಾದಲ್ಲಿ ಅಮೆಜಾನ್ ಗೆ ಭಾರತ ಸರ್ಕಾರದ ಅನುಮತಿ ಬೇಕಾಗುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಅದು ಫೆಮಾ- ಎಫ್ ಡಿಐ ಕಾನೂನಿಗೆ ವಿರುದ್ಧ ಆಗುತ್ತದೆ. ಸರ್ಕಾರದ ಮೂಲಕ ಮಾತ್ರ ವಿದೇಶಿ ಬಂಡವಾಳ ಬಂದಲ್ಲಿ ಮಲ್ಟಿ ಬ್ರ್ಯಾಂಡ್ ರೀಟೇಲ್ ನಲ್ಲಿ ಶೇ. 51ರಷ್ಟು ಹೂಡಿಕೆ ಮಾಡುವುದಕ್ಕೆ ಎಫ್ ಡಿಐ ನಿಯಮಾವಳಿ ಇದೆ.

ಇನ್ನು ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್ ಮಧ್ಯದ ವ್ಯವಹಾರವನ್ನು ತುರ್ತು ಅಹವಾಲಿಗೆ ಅಮೆಜಾನ್ ಕೇಳಿತ್ತಲ್ಲಾ, ಅದಕ್ಕೂ ಪರಿಮಿತಿ ಎಂದು ಕೋರ್ಟ್ ತಿಳಿಸಿರುವುದನ್ನು ಫೈಲಿಂಗ್ ನಲ್ಲಿ ಪ್ರಸ್ತಾಪಿಸಲಾಗಿದೆ.

ಆದ್ದರಿಂದ ಆಗಸ್ಟ್ 29ನೇ ತಾರೀಕಿನಂದು ಫ್ಯೂಚರ್ ಆಡಳಿತ ಮಂಡಳಿಯು ಕಂಪೆನಿಯ ಆಸ್ತಿಯನ್ನು ರಿಲಯನ್ಸ್ ರೀಟೇಲ್ ಗೆ ಮಾರಬೇಕು ಎಂದು ತೆಗೆದುಕೊಂಡ ನಿರ್ಧಾರವು ಮೇಲ್ನೋಟಕ್ಕೇ ಅಸಿಂಧುವೂ ಅಲ್ಲ ಯಾವುದೇ ಕಾನೂನು ಉಲ್ಲಂಘನೆಯೂ ಅಲ್ಲ. ಕಂಪೆನಿಯ ಆಂತರಿಕ ಸಂವಿಧಾನಕ್ಕೂ ವಿರುದ್ಧವಾಗಿಲ್ಲ ಎಂದು ತಿಳಿಸಲಾಗಿದೆ.

ಎಫ್ ಸಿಪಿಎಲ್ ನಲ್ಲಿನ ಅಮೆಜಾನ್ ಹೂಡಿಕೆಯನ್ನು ಸಂಖ್ಯೆಗಳಲ್ಲಿ ಬದಲಿಸಿ ಹೇಳುವುದಾದರೆ ಫ್ಯೂಚರ್ ರೀಟೇಲ್ ಲಿಮಿಟೆಡ್ ನಲ್ಲಿನ 10 ಪರ್ಸೆಂಟ್ ಪಾಲಿಗೂ ಕಡಿಮೆ ಆಗುತ್ತದೆ.

ಇನ್ನು ಗೌರವಾನ್ವಿತ ಕೋರ್ಟ್ ಮೇಲ್ನೋಟಕ್ಕೆ ನೀಡಿದ ಅಭಿಪ್ರಾಯದಂತೆ ಮೂರು ಒಪ್ಪಂದಗಳು, ಅದು FRL SHA, FCPL SHA, ಮತ್ತು FCPL SSA ಫೆಮಾ, ಎಫ್ ಡಿಐ ನಿಯಮಾವಳಿಗಳನ್ನು ಉಲ್ಲಂಘಿಸುತ್ತವೆ ಎನ್ನಲಾಗಿದೆ. ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್ ರೀಟೇಲ್ ಮಧ್ಯದ ಮಾರಾಟ ವ್ಯವಹಾರವನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಇನ್ನು ಮುಂದೆ ನಿಯಂತ್ರಕ ಪ್ರಾಧಿಕಾರಗಳು ನಡೆಸಬೇಕೇ ವಿನಾ ತುರ್ತು ಮಧ್ಯಸ್ಥಿಕೆ ಆದೇಶಗಳ ಅನ್ವಯ ಅಲ್ಲ ಎಂದು ಸೇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಓದಿ