ನೆಟ್ಫ್ಲಿಕ್ಸ್ 'ಎ ಮರ್ಡರ್ಡ್ ಮದರ್' ಸರಣಿ ಪ್ರಸಾರಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಅ 4: ನೈಜಜೀವನದ ಕಥೆ ಆಧರಿಸಿ ಮಾಡಲಾಗಿದೆ ಎನ್ನಲಾದ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ 'ಎ ಮರ್ಡರ್ಡ್ ಮದರ್' ಸಾಕ್ಷ್ಯಚಿತ್ರದ ಮೊದಲ ಕಂತಿನ ಪ್ರಸಾರಕ್ಕೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಶ್ರೀಧರ್ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿರುವುದರಿಂದ ಅದರ ಕಥೆ ಹೊಂದಿರುವ ದೃಶ್ಯಗಳು ಆರೋಪಿಯ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಆಕ್ಷೇಪಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠಈ ಆದೇಶ ನೀಡಿದೆ.
'ಎ ಮರ್ಡರ್ಡ್ ಮದರ್' ಸಾಕ್ಷ್ಯಚಿತ್, ರಾಜ್ಯದ ಹಲವು ಅಪರಾಧ ಪ್ರಕರಣಗಳ ಕಥೆಗಳನ್ನು ಒಳಗೊಂಡ, "ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟೀವ್" ಸರಣಿಯ ಮೊದಲ ಕಂತಾಗಿದೆ.
ಮೊದಲ ಕಂತಿನ ಕಥೆಯಲ್ಲಿ, ಬೆಂಗಳೂರಿನ ನಡೆದ ಘಟನೆಯೊಂದನ್ನು ತೋರಿಸಲಾಗಿದೆ. ಇದರಲ್ಲಿ ಮಗಳ ಗೆಳೆಯನೊಂದಿಗೆ ಶಾಮೀಲಾಗಿ ತಾಯಿಯೇ ಮಗಳನ್ನು ಕೊಂದ ಕಥೆ ಇದೆ. ಚಿತ್ರದಲ್ಲಿ ತನಿಖೆಯ ಕೆಲ ಅಂಶಗಳನ್ನೂ ಸೇರಿಸಲಾಗಿದೆ. ಇದರಿಂದ ಆರೋಪಿಯ ನ್ಯಾಯಸಮ್ಮತ ವಿಚಾರಣೆಗೆ ಅಡ್ಡಿಯಾಗುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.