ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾನಿಗಳಿಂದ ಸಹಾಯ ಹಸ್ತ
ಶಾಸಕರಿಂದ 20ಜಂಬೂ ಸಿಲಿಂಡರ್,ಆಕ್ಸಿಜನ್ ಕೊಡುಗೆ
ಅಮ್ಮ ಸಂಸ್ಥೆಯಿಂದ ಮಾಸ್ಕ್,ವಿಟಮಿನ್ ಸಿ,ಹ್ಯಾಂಡ್ ಗ್ಲೌಸ್
ಹಗರಿಬೊಮ್ಮನಹಳ್ಳಿ21; ಮಾಹಾಮಾರಿ ಕೊರೊನಾ ವೈರಸ್ನ ಎರಡನೇ ಅಲೆಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ, ವಲಸಿಗರಿಂದ ಗ್ರಾಮೀಣ ಭಾಗದಲ್ಲಿ ರಣಕೇಕೆ ಹಾಕುತ್ತಿರುವ ಸೋಂಕಿತ ಗ್ರಾಮಗಳು ಸ್ವಯಂ ಲಾಕ್ಡೌನ್ ಆಗಿದ್ದು, ಗ್ರಾಮೀಣ ಭಾಗಗಳಲ್ಲಿ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಸಿಗದಿರವುದು ಒಂದೆಡೆಯಾದರೆ, ಸ್ವಯಂ ಪ್ರೇರಿತವಾಗಿ ಸೋಂಕಿತರಿಗೆ ಸಹಾಯ ಹಸ್ತ ಚಾಚುವಲ್ಲಿ ಶಾಸಕರು ಸೇರಿದಂತೆ ಸ್ಥಳೀಯ ಸಂಸ್ಥಗಳು, ವರ್ತಕರು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ಶಾಸಕರಿಂದ 20ಜಂಬೂ ಸಿಲಿಂಡರ್ ಮತ್ತು ಆಕ್ಸಿಜನ್ : ಸೊಂಕಿತರ ಆಕ್ಸಿಜನ್ ಬೆಡ್ಗಳ ಕೊರತೆ ನೀಗಿಸಲು ಶಾಸಕರು ಸ್ವಂತ ಖಚರ್ಿನಲ್ಲಿ 20ಸಿಲಿಂಡರ್ ವಿತ್ ಆಕ್ಸಿಜನ್ ನೀಡಿದ್ದು, ಆಸ್ಪತ್ರೆಯನ್ನು 50ಆಕ್ಸಿಜನ್ ಬೆಡ್ಗಳ ವ್ಯೆವಸ್ಥೆಯನ್ನು ಮಾಡಿ ಆಸ್ಪತ್ರೆಯನ್ನು ಮೇಲ್ದಜರ್ೆಗೇರಿಸಿದ್ದಾರೆ, ಹಾಗೂ ಮುಂದಿನ ದಿನಗಳಲ್ಲಿ ಜಂಬೂ ಸಿಲಿಂಡರ್ ಹಾಗೂ ಆಕ್ಸಿಜನ್ ನೀಡುವ ಭರವಸೆಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಗ್ರೀನ್ ಹೆಚ್ಬಿಹೆಚ್ ಟೀಂನಿಂದ ಪ್ಲೋ ಮೀಟರ್ : ಪಟ್ಟಣದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿರುವ ಗ್ರೀನ್ ಹೆಚ್ಬಿಹೆಚ್ ಟೀಂ ಸಾರ್ವಜನಿಕ ಆಸ್ಪತ್ರೆಗೆ ಪ್ರಮುಖ ಬೇಡಿಕೆಯಾಗಿದ್ದ ಫ್ಲೋ ಮೀಟರ್ಗಳ ಕೊರತೆಯಿದೆ ಎಂಬ ವಿಷಯ ಕೇಳಿದ ಕೂಡಲೇ 24ತಾಸಿನೊಳಗೆ ಬಾಂಬೆಯಿಂದ ಫ್ಲೋ ಮೀಟರ್ಗಳನ್ನು ತರಿಸಿ ಕೊಟ್ಟು ಹೆಗ್ಗಳಿಕೆ ಪಾತ್ರವಾಗಿದ್ದು,ಜೊತೆಯಾಗಿ 9ಆಕ್ಸಿಜನ್ ಸಿಲಿಂಡರ್ಗಳನ್ನು ನೀಡಿದ್ದಾರೆ.
100 ಸಿಲಿಂಡರ್ಗಳಿಗೆ ಆಕ್ಸಿಜನ್ ಪೋರೈಕೆ : ವಿವಿ ಸಂಘದ ನಿದರ್ೇಶಕ ಬಾದಾಮಿ ಕರಿಬಸವರಾಜ್ ಹಾಗೂ ಡಾ.ಗಜಾಪುರ ಜಗದೀಶ್ರವರು 100 ಜಂಬೂ ಸಿಲಿಂಡರ್ಗಳಿಗೆ ಆಕ್ಷಿಜನ್ ನೀಡಿರುವುದು ಸೊಂಕಿತರ ಆಕ್ಸಿಜನ್ ಹಾಹಾಕಾರಕ್ಕೆ ನರೆವಿನ ಹಸ್ತ ಚಾಚಿರುವುದು ಸಾರ್ವಜನಿಕ ಆಸ್ಪತ್ರೆಯು ಕೇವಲ ಸರಕಾರ ಸೌಲಭ್ಯಗಳನ್ನು ಕಾದು, ಸೋಂಕಿತರ ಪ್ರಾಣಕ್ಕೆ ಕುತ್ತು ಬರುವುದನ್ನು ತಪ್ಪಿಸಿದ್ದಾರೆ.
ಅಮ್ಮ ಸಂಸ್ಥೆಯಿಂದ ಸವರ್ೇ ಟೀಂಗಳಿಗೆ ಕಿಟ್ : ಗ್ರಾಮೀಣ ಭಾಗದಲ್ಲಿ ಮನೆ ಮನೆ ಸವರ್ೇ ಮಾಡುವ ಕಾರ್ಯಕ್ಕೆ ತಾಲೂಕಾಡಳಿತ ಮುಂದಾಗಿದೆ, ಇದರಿಂದ ಸೊಂಕಿತರನ್ನ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಹಾನಿ ತಡೆಯಬಹುದಾಗಿದೆ ಇದಕ್ಕೆ ಪಟ್ಟಣದ ಅಮ್ಮ ಸಂಸ್ಥೆಯು ಸವರ್ೇ ಟೀಂಗಳಿಗೆ ಗ್ಲೌಸ್, ಮಾಸ್ಕ್, ಆಕ್ಸಿ ಮೀಟರ್ ಸೆರಿದಂತೆ ಕೋವಿಡ್ ಕಿಟ್ ಜೊತೆ ವಿಟಮಿನ್ ಸೀ ಮಾತ್ರೆಗಳನ್ನು ನೀಡಲು ಮುಂದಾಗಿದೆ.
ಸೌಲಭ್ಯಗಳಿದ್ದರೂ ಕೊರತೆ ನೀಗಿಸಿದ ದಾನಿಗಳು : ಸರಕಾರದಿಂದ ಸೌಲಭ್ಯಗಳಿದ್ದರೂ ಕೆಲ ವೈದ್ಯಕೀಯ ಇಕ್ವಿಪ್ಮೆಂಟ್ಸ್ಗಳ ಕೊರತೆ ಕಾಣುತ್ತಿದ್ದವು ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಫ್ಲೋಮೀಟರ್ ಕೊರತೆ ಇದೆ ಎಂಬ ವಿಷಯ ತಿಳಿದ ಕೂಡಲೇೆ ಗ್ರೀನ್ ಹೆಚ್ಬಿಹೆಚ್ ಟೀಂ ಬಾಂಬೆಯಿಂದ ಫ್ಲೋ ಮೀಟರ್ಗಳನ್ನು ತರೆಸಿ ಕೊರತೆಯನ್ನು ನೀಗಿಸಿದ್ದಾರೆ, ಸ್ಥಳೀಯ ಶಾಸಕರು 20ಜಂಬೂ ಸಿಲಿಂಡರ್ ಹಾಗೂ ಆಕ್ಸಿಜನ್ ನೀಡಿದ್ದು ಸೋಂಕಿತರಿಗೆ ಸಹಾಯವಾಗಿದೆ, ವಿವಿ ಸಂಘದ ನಿದರ್ೇಶಕ ಬಾದಾಮಿ ಕರಿಬಸವರಾಜ್ ವಾಲೆಂಟೀಯರ್ ಆಗಿ 100ಸಿಲಿಂಡರ್ಗಳಿಗೆ ಆಕ್ಸಿಜನ್ ನೀಡಿದ್ದರೆ.ಅಮ್ಮ ಸಂಸ್ಥೆಯಿಂದ ಸವರ್ೆ ಟೀಂಗಳಿಗೆ ಸಹಾಯ ಮಾಡಿದ್ದು ವಿಟಮಿನ್ ಸಿ ಮಾತ್ರೆಗಳನ್ನು ನೀಡಲು ಮುಂದಾಗಿದ್ದಾರೆ,ಅಜೀಂ ಪ್ರೇಮ್ ಪೌಂಡೇಶ್ನಿಂದ ಫುಡ್ ಕಿಟ್ ನೀಡಲು ಮುಂದಾಗಿದ್ದಾರೆ, ಸೊಂಕಿತರಿಗೆ ಸೆರಿದಂತೆ ಆರೋಗ್ಯ ಇಲಾಖೆಗೆ ಸಂಭಂಧಿಸಿದಂತೆ ಬೇಕಿರುವ ಪಿಪಿಇ ಕಿಟ್ಗಳನ್ನು ದಾನಿಗಳು ನೀಡಿದ್ದಾರೆ ಒಟ್ಟಾರೆ ಪಟ್ಟಣದಲ್ಲಿ ವೈದ್ಯಕೀಯ ಸೌಲಭ್ಯ ಸೆರಿದಂತೆ ಸೋಂಕಿತರಿಗೆ ನಿರ್ಭಯ ವಾತಾವರಣ ಸೃಷ್ಟಿಸುವಲ್ಲಿ ಸಹೃದಯಿಗಳು ಮುಂದಾಗಿದ್ದಾರೆ.
ಮಾಜಿ ಶಾಸಕರಿಂದ ಆಕ್ಸಿಜನ್ ರಿಫಿಲ್ಲಿಂಗ್ : ಕ್ಷೇತ್ರದ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ತಾಲೂಕಾಸ್ಪತ್ರೆಯ ಕೋವಿಡ್ ಸೋಂಕಿತರ ನೆರವಿಗೆ ಆಥರ್ಿಕ ಸಹಾಯ ಮಾಡಿದ್ದು 67500ರೂಗಳ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಹೋಂ ಐಸೋಲೇಶನ್ ಸೊಂಕಿತರ ಶಿಫ್ಟ್ : ಉಪನಾಯಕನ ಹಳ್ಳಿ ವಸತಿ ಶಾಲೆ,ವರಲಹಳ್ಳಿ ವಸತಿ ಶಾಲೆ,ಬ್ಯಾಸಿಗದೇರಿ ಯಲ್ಲಿರುವ ಶಾಲೆಯಲ್ಲಿ ಹೊಂ ಐಸೂಲೇಶನ್ ನಲ್ಲಿರುವ ಸೊಂಕಿತರನ್ನು ಖಾಸಗಿ ಶಾಲಾ ವಾಹನಗಳನ್ನು ಬಳಸಿ ಶಿಫ್ಟ ಮಾಡಲಾಗುತ್ತದೆ ಇದರಿಂದ ಮನೆಯಲ್ಲಿರುವವರಿಗೆ ಸೊಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವ ಕಾರ್ಯಕ್ಕೆ ತಾಲೂಕಾಡಳಿತ ಮುಂದಾಗಿದೆ.
ಮನೆ ಮನೆ ಸವರ್ೇ : ಒಂದು ಸಿಬ್ಬಂದಿಗೆ 50 ಮನೆಗಳ ಹಂಚಿಕೆ ಮಾಡಿ ಅವರ ಆರೋಗ್ಯ ತಪಾಸಣೆ ನಡೆಸಿ ನೆಗಡಿ, ಕೆಮ್ಮ, ಜ್ವರದಂತಹ ಸಿಂಟೆಮ್ಸ್ ಕಂಡುಬಂದರೆ ಜನರಲ್ ಮೆಡಿಸನ್ ಕಿಟ್ ನೀಡಲಾಗುದು ಹಾಗೂ 7ದಿನಗಳ ನಂತರ ಮತ್ತೆ ತಪಾಸಣೆ ನಡೆಸಿ ಕಡಿಮೆಆಗದವರನ್ನು ಕೋವಿಡ್ ಟೆಸ್ಟ ಮಾಡಿಸಿ ಅವರನ್ನು ಗುಣಮುಖರನ್ನಾಗಿಸುವ ನಿಯೋಜನೆ ಮಾಡಲಾಗುವುದು,ಕಳೆದ ಕೆಲ ದಿನಗಳ ಹಿಂದೆ ಕೆಕೆ ತಾಂಡದಲ್ಲಿ 120ಜನರಿಗೆ ಜನರಲ್ ಕಿಟ್ ನೀಡಲಾಗಿತ್ತು ಅದರಲ್ಲಿ 7ದಿನಗಳ ನಂತರ 20ಜನರಲ್ಲಿ ಚೇತರಿಕೆ ಕಾಣದ ಕಾರಣ ಅವರಿಗೆ ಕೋವಿಡ್19ಟೆಸ್ಟ್ ಮಾಡಿಸಿದ್ದು ಅದರಲ್ಲಿ 3ಜನರಿಗೆ ಸೊಂಕು ದೃಢವಾಗಿದೆ, ಇದೆ ವ್ಯೆವಸ್ಥೆಯನ್ನು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಮುಂದುವರೆಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆಂದು ತಹಶೀಲ್ದಾರ್ ಶರಣಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಕೋಟ್ 01 : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿ 20ಆಕ್ಸಿಜನ್ ಬೆಡ್ಗಳ ವ್ಯೆವಸ್ಥೆ ಮಾಡಲಾಗಿದೆ,20 ಜಂಬೂ ಸಿಲಿಂಡರ್ ಹಾಗೂ ಆಕ್ಸಿಜನ್ ನೀಡಿದ್ದೇನೆ, ಸೊಂಕಿತರಿಗೆ ಅಕ್ಸಿಜನ್ ಸಮಸ್ಯೆಯಾಗದಂತೆ ಇನ್ನು ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ವ್ಯೆವಸ್ಥೆಯನ್ನು ಮಾಡುವ ಕಾರ್ಯ ಮುಂದುವರೆದಿದೆ.
ಎಸ್.ಭೀಮಾನಾಯ್ಕ್
ಶಾಸಕರು. ಹಗರಿಬೊಮ್ಮನಹಳ್ಳಿ
ಕೋಟ್ 02 : ಹಗರಿಬೊಮ್ಮನಹಳ್ಳಿ ಪಟ್ಟಣವು ದಾನಿಗಳ ತವರೂರಾಗಿದೆ ,ವೈದ್ಯಕೀಯ ಸೌಲಭ್ಯಗಳು ಸರಕಾರದಿಂದ ಬರುತ್ತಿವೆಯಾದರೂ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತಿದೆ, ಪಟ್ಟಣದ ಅನೇಕ ಸಂಘ ಸಂಸ್ಥೆ ಸೇರಿದಂತೆ ವಾಲಂಟೀಯರ್ಆಗಿ ಅನೇಕ ತೀರಿಯ ಉಪಕರಣಗಳನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ವೈದ್ಯರಿಗೂ ಇದು ಭರವಸೆಯ ಆಶಾಕಿರಣವಾಗಿದೆ.
ಶರಣಮ್ಮ
ತಹಶೀಲ್ದಾರರು. ಹಗರಿಬೊಮ್ಮನಹಳ್ಳಿ
ಕೋಟ್ 03 : ತಾಲೂಕಾಸ್ಪತ್ರೆಯಲ್ಲಿ ಮುಂಚೆ 30ಬೆಡ್ ಇದ್ದು,ಸದ್ಯ 50ಬೆಡ್ ಹಾಗೂ ದಾನಿಗಳ ಸಹಾಯದಿಂದ ಆಕ್ಸಿಜನ್, ಸಿಲಿಂಡರ್, ಫ್ಲೋಮೀಟರ್ಗಳ ಕೊರತೆ ನೀಗಿದೆ, ದಾನಿಗಳ ಈ ಸತ್ಕಾರ್ಯ ಆಸ್ಪತ್ರೆಗೆ ಅನುಕೂಲವಾಗಿದೆ.
ಶಂಕರ್ನಾಯ್ಕ್
ತಾಲೂಕು ಮುಖ್ಯವೈದ್ಯಾಧಿಕಾರಿ
ತಾಲೂಕು ಸಾರ್ವಜನಿಕ ಆಸ್ಪತ್ರೆ , ಹಗರಿಬೊಮ್ಮನಹಳ್ಳಿ