ತಾಳಿಕೋಟಿ

ಆತ್ಮಹತ್ಯೆಗೆ ಶರಣಾದ ಯುವಕನ ಕುಟುಂಬಕ್ಕೆ ಸಹಾಯ

ಆತ್ಮಹತ್ಯೆಗೆ ಶರಣಾದ ಯುವಕನ ಕುಟುಂಬಕ್ಕೆ ಸಹಾಯ

ತಾಳಿಕೋಟಿ 29: ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾದ ದೇ.ಹಿಪ್ಪರಗಿ ಮತಕ್ಷೇತ್ರದ ಅಸ್ಕಿ ಗ್ರಾಮದ ಯುವಕ ಶರಣಬಸಪ್ಪ ಕಾಸಪ್ಪ ಮಾದರ ಇವರ ಮನೆಗೆ ಭೇಟಿ ನೀಡಿದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ವಯಕ್ತಿಕವಾಗಿ ರೂ. 25000 ಚೆಕ್‌ನ್ನು ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸೋಮನಗೌಡರು ಜೀವ ಅತ್ಯಮೂಲ್ಯವಾದದ್ದು ಯುವಕರು ಬದುಕಿನ-ಒತ್ತಡದಿಂದಾಗಿ ಇಂಥಹ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು ಆತ್ಮಹತ್ಯೆ ಸಮಸ್ಯೆಗೆ ಪರಿಹಾರ ಅಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮ ಯುವಕರಲ್ಲಿ ಬರಬೇಕಾಗಿದೆ ಎಂದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ರೈತಮೋರ್ಚಾ ಅಧ್ಯಕ್ಷ ಸಿದ್ದು ಬುಳ್ಳಾ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಗ್ರಾಮದ ಗಣ್ಯರಾದ ವಿಜಯಕುಮಾರ ಹಿರೇಮಠ, ಶಂಕರಗೌಡ ನಾಗರಡ್ಡಿ, ಎಚ್ ಎನ್ ಬಿರಾದಾರ, ಪರಶುರಾಮ ಬಡಿಗೇರ, ಮಡಿವಾಳಪ್ಪ ನಾಯ್ಕೋಡಿ, ರವಿ ಚಲವಾದಿ, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ