ಸಿಡಿಲು, ಗುಡುಗು ಸಹಿತ ಭಾರಿ ಮಳೆ: ಜನಜೀವನ ಅಸ್ತವ್ಯಸ್ಥ
ಮುಂಡಗೋಡ 9: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಸಿಡಿಲು, ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲ ಕಾಲ ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಪಟ್ಟಣದ ಬಹುತೇಕ ಭಾಗದಲ್ಲಿ ರಸ್ತೆ ಮಧ್ಯೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕೆಲವೆಡೆ ಗಿಡ ಮರಗಳು ರಸ್ತೆಗುರುಳಿದವು.
ಸಿಡಿಲು ಬಡಿದು ಕಲ್ಪವೃಕ್ಷ ಧಗ ಧಗ: ತಾಲೂಕಿನ ಇಂದೂರ ಕೊಪ್ಪ ಗ್ರಾಮದ ಬಸವರಾಜ ಮಲ್ಲಾಡದ ಎಂಬುವರ ಮನೆಯ ಆವರಣದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಆವರಿಸಿ ಧಗ ಧಗನೆ ಉರಿಯಿತು. ಇದನ್ನು ವೀಕ್ಷಿಸಲು ಗ್ರಾಮಸ್ಥರೆಲ್ಲ ಸೇರಿದ್ದರು.