ಭಾರಿ ಗಾಳಿ ಮಳೆ: ಅಪಾರ ಹಾನಿ
ಮುಂಡಗೋಡ 31: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಾನುವಾರ ಸಂಜೆ ಸುರಿದ ಸಿಡಿಲು, ಗುಡುಗು ಸಹಿತ ಭಾರಿ ಗಾಳಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಬವಿದೆ.
ಮೆನೆಗಳ ಮೇಲೆ ಗಿಡಗಳು ಬಿದ್ದು ಮನೆಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿ ಮಳೆಗೆ ಕೆಲವೆಡೆ ಗಿಡ ಮರಗಳು ರಸ್ತೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ತಾಲೂಕಿನ ಬಸನಾಳ ಗ್ರಾಮದ ಬಮ್ಮು ಎಡಗೆ ಎಂಬುವವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದು ತೀವ್ರ ಹಾನಿ ಸಂಬವಿಸಿದೆ. ಅಲ್ಲದೇ ಮೈನಳ್ಳಿ ಗ್ರಾಮದ ಅರ್ಜುನ ಸಿಂದೆ ಎಂಬುವವರ ಮೆನೆಗೆ ಸಿಡಿಲು ಬಡಿದು ಬಟ್ಟೆ ಸೇರಿದಂತೆ ಬಹುತೇಕ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.
ಮಾವಿನ ಬೆಳೆಗಾರರಿಗೆ ಸಂಕಷ್ಟ: ಕೆಲವೆಡೆ ಆಲಿಕಲ್ಲು ಮಳೆ ಸುರಿದಿದ್ದರಿಂದ ಮಾವಿನ ಫಸಲಿಗೆ ಕಂಟಕ ಎದುರಾದಂತಾಗಿದೆ. ಮಾವಿನ ಮರಗಳು ಕಾಯಿ ಬಿಟ್ಟಿದ್ದು, ಇನ್ನೇನು ಕಟಾವಿಗೆ ಬರುತ್ತಿರುವ ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿರುವುದರಿಂದ ಕೆಲವೆಡೆ ಮಾವಿನ ಕಾಯಿ ಉದುರಿದ್ದು ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಮೇಲಿಂದ ಮೇಲೆ ಗಾಳಿ ಮಳೆಯಾಗುತ್ತಿರುವುದರಿಂದ ಉತ್ತಮವಾಗಿ ಬೆಳೆದು ನಿಂತಿರುವ ಫಸಲು ಕೈತಪ್ಪುವ ಆತಂಕ ಎದುರಾಗಿದೆ. ಒಟ್ಟಾರೆ ಎಡವಟ್ಟು ಮಳೆಯಿಂದಾಗಿ ತಾಲೂಕಿನ ಜನರಿಗೆ ಒಂದಿಲ್ಲ ಒಂದು ರೀತಿ ಸಮಸ್ಯೆಯಾಗುತ್ತಿರುವುದಂತೂ ಸುಳ್ಳಲ್ಲ.