ಸಿಂಧಗಿ

ಸ್ವರ್ಗ ಮೇಲೂ ಇಲ್ಲ ಕೇಳಗೂ ಇಲ್ಲ ಅದು ಬ್ರಹಮ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿದೆ

ಸ್ವರ್ಗ ಮೇಲೂ ಇಲ್ಲ ಕೇಳಗೂ ಇಲ್ಲ ಅದು ಬ್ರಹಮ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿದೆ

ಸಿಂದಗಿ 02: ಸ್ವರ್ಗ ಮೇಲೂ ಇಲ್ಲ ಕೇಳಗೂ ಇಲ್ಲ ಅದು ಬ್ರಹಮ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿದೆ ಎಂದು  ನೂತನವಾಗಿ ಆಯ್ಕೆಯಾದ ಶಾಸಕ ಅಶೋಕ ಮನಗೂಳಿ ರವರು ಹೇಳಿದರು. 

ನಗರದ ಪ್ರಜಾಪಿತಾ ಬ್ರಹ್ಮಾಕುಮಾರಿಯ ವಿಶ್ವವಿದ್ಯಾಲಯದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಜಾತಿ ಪಂತಗಳ ಬೇಧವಿಲ್ಲದೆ ಎಲ್ಲರೂ ಸ್ನೇಹದಿಂದ ಕೂಡಿಬಾಳುವ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸ ನಡೆಯುತ್ತಿರುವ ಈ ಸುಂದರ ವಾತಾವರಣದಲ್ಲಿ ನಿಮ್ಮಿಂದ ನಾನು ಸನ್ಮಾನಿಸಿಕೊಳ್ಳುತ್ತಿರುವುದು ನನ್ನ ಸೌಭಾಗ್ಯ ಎಂದರು.  

ನಮ್ಮ ತಂದೆ ದಿ.ಎಮ್‌.ಸಿ.ಮನಗೂಳಿಯವರು ಆಧುನಿಕ ಭಗೀರತ ಎಂದು ತಾಲೂಕಿನ ಎಲ್ಲಾ  ಜನರು ಅತ್ಯಂತ ಪ್ರೀತಿ ವಿಶ್ವಾಸದಿಂದ ಅವರನ್ನು ಕರೆಯುತ್ತಿದ್ದರು. ಸಿಂದಗಿ  ತಾಲೂಕಿನ ಎಲ್ಲಾ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಜೀವನ ಪೂರ್ತಿ ಅವರು ಶ್ರಮಿಸಿದ್ದಾರೆ. ಅವರಂತೆಯೇ ನಾನು ಕೂಡ ನಮ್ಮ ತಂದಯ ಸನ್ಮಾರ್ಗದಲ್ಲಿ ಜಾತಿ ಪಂತ ಬೇಧ ಮರೆತು ಸಮಗ್ರ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಟೊಂಕಕಟ್ಟಿ  ನಿಲ್ಲುತ್ತೇನೆ ಎಂದರು. 

ಬಳಿಕ ಮಾತನಾಡಿದ ಪಾವನ ಸಾನಿಧ್ಯವನ್ನು ವಹಿಸಿದ ಪ್ರಜಾಪಿತ ವಿವಿಯ ಮುಖ್ಯ ಸಂಚಾಲಕಾರದ ಪವಿತ್ರಜಿ ಅಕ್ಕನವರು ನೂತನವಾಗಿ ಸಿಂದಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿಯವರು ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ಅವರ ತಂದೆಯ ಕನಸನ್ನು ನನಸು ಮಾಡಲಿ ಮತ್ತು ತಮ್ಮ ರಾಜಕೀಯ ಜೀವನದಲ್ಲಿ ಇನ್ನು ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು. 

ರಾಜಯೋಗಿ ಬಿ.ಜಿ.ಪಾಟೀಲ ಅಣ್ಣನವರು ನಿರೂಪಿಸಿ ವಂದಿಸಿದರು. 

ಈ ಕಾಯಕ್ರಮದಲ್ಲಿ ಅನೇಕರು ಪರಿವಾರದ ಬಿಕೆಗಳು ಪಾಲಗೊಂಡಿದ್ದರು. 


ಸುದ್ದಿ ಓದಿ