ಕಂಪ್ಲಿ

ನಕಲಿ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ : ನಕಲಿ ಆಸ್ಪತ್ರೆಗೆ ಬೀಗ

ನಕಲಿ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ : ನಕಲಿ ಆಸ್ಪತ್ರೆಗೆ ಬೀಗ


ಕಂಪ್ಲಿ 04:  ಪಟ್ಟಣದ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಸ್ಥಳೀಯ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರದ ಮೋಹನ್ ಕ್ಲಿನಿಕ್ (ಖಾಸಗಿ ಆಸ್ಪತ್ರೆ) ಮೇಲೆ ಆರೋಗ್ಯಾಧಿಕಾರಿಗಳ ತಂಡ ದಿಢೀರನೆ ದಾಳಿ ನಡೆಸಿ ನಕಲಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ದಾಳಿ ಬಳಿಕ ಜಿಲ್ಲಾ ಆಸಂಕ್ರಾಮಿಕ ರೋಗ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ) ನಿಯಮದ ಪ್ರಕಾರ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಯಾವುದೇ ವಿದ್ಯಾರ್ಹತೆ ಇರದ ಕಾರಣ ಆಸ್ಪತ್ರೆ ಸೀಜ್ ಮಾಡಲಾಗಿದೆ ಎಂದು ತಿಳಿಸಿದರು. ಈ ಖಾಸಗಿ ಆಸ್ಪತ್ರೆಯವರಿಗೆ ಈಗಾಗಲೇ ಸೂಕ್ತ ಎಚ್ಚರಿಕೆ ನೀಡಲಾಗಿತ್ತು. ಆದರೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಅರುಣ್, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವಿರೂಪಾಕ್ಷಿ,ತಾಲ್ಲುಕು ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಪಿ.ಬಸವರಾಜ, ಕೆಪಿಎಂಇ ಸಂಯೋಜಕ ಗೋಪಾಲ ದಾಳಿಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ