ಮುಂದಗೋಡ

ಆರೋಗ್ಯ ಅರಿವು ಕಾರ್ಯಕ್ರಮ

ಆರೋಗ್ಯ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಕಲಕೇರಿ ಮತ್ತು ಚವಡಳ್ಳಿ ಗ್ರಾಮಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಸೋಮವಾರ ಕಲಕೇರಿ ಮತ್ತು ಮಂಗಳವಾರ ಚವಡಳ್ಳಿ ಗ್ರಾಮಗಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಜರುಗಿತು. ಮಳೆಗಾಲದಲ್ಲಿ ಉಂಟಾಗುವ ಕಾಯಿಲೆಗಳ ಕುರಿತು ಮಾಹಿತಿ ನೀಡಿದ 108 ಆರೋಗ್ಯ ಕವಚದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು ಮಳೆಗಾಲದ ಸಮಯದಲ್ಲಿ ಕಾಣಿಸಿಕೊಳ್ಳುವ ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ ಸಮಸ್ಯೆಗಳನ್ನು ತಡೆಗಟ್ಟುವಿಕೆ, ಮನೆಗಳಲ್ಲಿ ಶೇಖರಣೆ ಮಾಡಿದ ನೀರನ್ನು ಆಗಾಗ ಖಾಲಿ ಮಾಡಿ ಬೇರೆ ನೀರು ತುಂಬುವಂತೆ, ಒಬ್ಬರಿಂದ ಇನ್ನೊಬ್ಬರಿಗೆ ಬ್ಯಾಕ್ಟೀರಿಯಾ ಹರಡುವುದರ ಬಗ್ಗೆ, ವಿಷಕಾರಿ ಆಹಾರ ಸೇವನೆ ಮಾಡದಂತೆ, ಮನೆ ಸುತ್ತ-ಮುತ್ತ ಸ್ವಚ್ಛವಾಗಿಡುವಂತೆ, ಬಿಪಿ, ಶುಗರ್ ಮತ್ತು ಹೃದಯಾಘಾತದಿಂದ ಭಯಪಡದೆ ಸೂಕ್ತ ಸಮಯಕ್ಕೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ನೀಡಿದರು.  

ಜಮುನಾಬಾಯಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಚೈತ್ರಾ, ವಲಯ ಸೇವಾ ಪ್ರತಿನಿಧಿ ಕಿರಣ ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ