ಹೂವಿನ ಹಡಗಲಿ

ಮುಖ್ಯ ಶಿಕ್ಷಕ ಪಿ. ಗಂಗೇಶ್ ಸೇವಾ ನಿವೃತ್ತಿ : ಹೃದಯಸ್ಪರ್ಶಿ ಬೀಳ್ಕೊಡುಗೆ

ಮುಖ್ಯ ಶಿಕ್ಷಕ ಪಿ. ಗಂಗೇಶ್ ಸೇವಾ ನಿವೃತ್ತಿ : ಹೃದಯಸ್ಪರ್ಶಿ ಬೀಳ್ಕೊಡುಗೆ

ಲೋಕದರ್ಶನ ವರದಿ 

ಹೂವಿನಹಡಗಲಿ  18: ತಾಲ್ಲೂಕಿನ ಸೋಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಪಿ.ಗಂಗೇಶ್ ಅವರನ್ನು ಶಾಲೆಯ ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಬುಧವಾರ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉತ್ತಂಗಿ ಆನಂದ ಮಾತನಾಡಿ, ‘ಶಿಸ್ತು, ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡಿದ್ದ ಗಂಗೇಶ್ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ನಿವೃತ್ತಿಯ ಬದುಕು ಸಂತೋಷದಿಂದ ಕೂಡಿರಲಿ ಎಂದು ಆಶಿಸಿದರು. ಸನ್ಮಾನ ಸ್ವೀಕರಿಸಿದ ಪಿ. ಗಂಗೇಶ್ ಮಾತನಾಡಿ, ಗ್ರಾಮೀಣ ಭಾಗದ ಅಪಾರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿರುವ ಈ ಶಾಲೆ ನೂರು ವಸಂತಗಳನ್ನು ಪೂರೈಸಿದೆ. ಗ್ರಾಮಸ್ಥರು, ಶಿಕ್ಷಣಪ್ರೇಮಿಗಳು ಶಾಲಾ ಶತಮಾನೋತ್ಸವ ಆಚರಿಸಬೇಕು ಎಂದು ತಿಳಿಸಿದರು. ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮಲ್ಲಪ್ಪ, ಉಪಾಧ್ಯಕ್ಷೆ ದೀಪಾ, ಮುಖ್ಯ ಶಿಕ್ಷಕಿ ಶಾಂತಮ್ಮ, ವರ್ತಕ ಎಂ.ಎಸ್‌.ಮಲ್ಲಿನಾಥ, ಯೋಧ ಮಂಜುನಾಥ, ಶಿಕ್ಷಕರಾದ ಬಸವರಾಜ ಹಡಗಲಿ, ಚಿಂತಿ ವಿಶ್ವನಾಥ, ಗುರುಪಾದಪ್ಪ ಇತರರು ಇದ್ದರು. ಮಕ್ಕಳಿಗೆ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. 


ಸುದ್ದಿ ಓದಿ