ವಿವಿಧ ಪಕ್ಷಗಳನ್ನು ತ್ವರೆದು ಆಮ್ಆದ್ಮಿ ಪಕ್ಷಕ್ಕೆ ಸೇರ್ಪಣೆ
ಲೋಕದರ್ಶನ ವರದಿ
ತಾಳಿಕೋಟಿ: ಆಮ್ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ದಿಲ್ಲಿಯಲ್ಲಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಮಾಡಿರುವ ಉತ್ತಮ ಆಡಳಿತವನ್ನು ಮೆಚ್ಚಿ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷವನ್ನು ತ್ವರೆದು ಆಮ್ಆದ್ಮಿ ಪಕ್ಷಕ್ಕೆ ಸೇರೆ್ಡಯಾದರು.
ದೇವರ ಹಿಪ್ಪರಗಿ ಮತಕ್ಷೇತ್ರದ ತುಂಬಗಿ, ಹಂಚಲಿ, ಸಿಂದಗೇರಿ, ಗ್ರಾಮದ ವಿವಿಧ ಪಕ್ಷಗಳ ಸುಮಾರು 40 ಕಾರ್ಯಕರ್ತರು ಪಕ್ಷದ ಮುಖ್ಯಸ್ಥ ಹಾಗೂ ದೇ.ಹಿಪ್ಪರಗಿ ಟಿಕೆಟ್ ಆಕಾಂಕ್ಷಿ ಬಸಲಿಂಗಪ್ಪ ಇಂಗಳಗಿ ಇವರ ಸಮ್ಮುಖದಲ್ಲಿ ಆಮ್ಆದ್ಮಿ ಪಕ್ಷಕ್ಕೆ ಸೇರೆ್ಡಯಾದರು.
ಈ ಸಮಯದಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿ ಹಾಗೂ ಪಕ್ಷದ ಮುಖಂಡ ಬಸಲಿಂಗಪ್ಪ ಇಂಗಳಗಿ ಅವರು ನಮ್ಮ ಪಕ್ಷದ ವರಿಷ್ಠ ನಾಯಕರಾದ ಅರವಿಂದ ಕೇಜ್ರಿವಾಲ ಅವರ ಪಾರದರ್ಶಕ ಆಡಳಿತ ಹಾಗಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರೆ್ಡಯಾಗಿದ್ದಾರೆ. ನಾವೆಲ್ಲರೂ ಸೇರಿ ಪಕ್ಷವನ್ನು ಬಲಗೊಳಿಸುತ್ತೇವೆ. ಈ ಬಾರಿ ಪಕ್ಷದ ವತಿಯಿಂದ ನಾನು ಪ್ರಬಲ ಆಕಾಂಕ್ಷಿ ಆಗಿದ್ದೇನೆ. ಈ ಬಾರಿ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದರು.
ಈ ಸಮಯದಲ್ಲಿ ಮುಖಂಡರಾದ ಸಿದ್ರಾಮಪ್ಪಗೌಡ ಸಾಸನೂರ, ಗುರುಪಾದಯ್ಯ ಹಿರೇಮಠ, ನವೀನ ತಾಳಿಕೋಟಿ, ಸಿದ್ದು ನಾರಾಯಣಪುರ, ಸಂತು ಬಿರಾದಾರ, ಬಸವರಾಜ ಗಂಜ್ಯಾಳ, ಶರಣು ನಾಟೀಕಾರ, ಶರಣು ಯಾಳವಾರ, ಮಲ್ಲು ಚೌದ್ರೊ, ರಾಜು ಹರಿಜನ ಇದ್ದರು.