ಲೇಖನಗಳು

ನಿಮಗೊಬ್ಬರು ಪ್ಯಾಮಿಲಿ ಡಾಕ್ಟರ್ ಇರಲಿ

ನಿಮಗೊಬ್ಬರು ಪ್ಯಾಮಿಲಿ ಡಾಕ್ಟರ್ ಇರಲಿ

ಪ್ಯಾಮಿಲಿ ಡಾಕ್ಟರ ಏಕೆ ಬೇಕು? 

ಸಣ್ಣ ಪುಟ್ಟ ಕಾಯಿಲೆಗಳಿಗೆ ನೀವು ತಜ್ಞ ವೈದ್ಯರನ್ನು ಹುಡಿಕಿಕೊಂಡು ಹೋಗುವುದು ಕಷ್ಟ; ಅವರ ಪ್ರವೇಶ ಫೀ ನಿಮಗೆ ದುಬಾರಿ ಅನಿಸಬಹುದು, ಮತ್ತು ಹೆಚ್ಚು ಕಡಿಮೆ ಒಂದು ದಿನ ನೀವು ಅವರ ಬೆಟ್ಟಿಗಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ನೀವು ಕಾಯಬೇಕಾದ ಅನಿವಾರ್ಯತತೆ. ಹಾಗಾಗಿ ನೀವು ಪ್ಯಾಮಿಲಿ ಡಾಕ್ಟರ ಹತ್ತಿರ ತೊರಿಸಿಕೊಳ್ಳುವುದು ಉತ್ತಮ. 

ಪ್ಯಾಮಿಲಿ ಡಾಕ್ಟರ ಅಂದರೆ ಯಾರು? 

ಪ್ಯಾಮಿಲಿ ಡಾಕ್ಟರ ನಿಮ್ಮ ಹತ್ತಿರ ನಿಮ್ಮ ಏರಿಯಾದಲ್ಲಿರುವ ಡಾಕ್ಟರ್‌. ನಿಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿರುವ ಡಾಕ್ಟರ್ ಅಥವಾ ನಿಮ್ಮ ಏರಿಯಾದಲ್ಲಿರುವ ಒಃಃಖ, ಃಂಒಖ, ಃಊಒಖ, ಓದಿ ಕ್ಲೀನಿಕ್ ನಡೆಸುತ್ತಿರುವ ವೈದ್ಯರನ್ನು ನೀವು ಪ್ಯಾಮಿಲಿ ಡಾಕ್ಟರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. 

ಯಾವ ಸಮಯದಲ್ಲಿ ಪ್ಯಾಮಿಲಿ ಡಾಕ್ಟರನ್ನು ಸಂರ​‍್ಕ ಮಾಡಬೇಕು. 

ನಿಮಗೆ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಕಂಡು ಬಂದರೆ ನೀವು ಪ್ಯಾಮಿಲಿ ಡಾಕ್ಟರನ್ನು ಕಾಣುವುದು ಉತ್ತಮ. ಜ್ವರ, ಮೈಕೈ ನೋವು, ಸೀತ, ವಾಂತಿ ಬೇದಿ, ತಲೆ ನೋವು, ಸಣ್ಣ ಪುಟ್ಟ ಗಾಯಗಳಿಗೆ ಡ್ರೆಸಿಂಗ್, ಇಂಜೆಕ್ಷನ್, ಸಾಂಕ್ರಾಮಿಕ ರೋಗಗಳಿಗೆ ನೀವು ತೋರಿಸಿಕೊಳ್ಳಬಹುದು. 

ಪ್ಯಾಮಿಲಿ ಡಾಕ್ಟರ್‌ರಿಂದ ಆಗುವ ಉಪಯೋಗ ಏನು? 

ನೀವು ಪದೆ-ಪದೆ, ಸಣ್ಣ-ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಪ್ಯಾಮಿಲಿ ಡಾಕ್ಟರ್ ಬಳಿ ಹೋಗುವುದರಿಂದ ನಿಮ್ಮ ಪ್ಯಾಮಿಲಿಯ ಎಲ್ಲ ಸದ್ಯಸರ ಪರಿಚಯ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಅವರಿಗಿರುತ್ತದೆ, ಜೊತೆಗೆ ಒಳ್ಳೆಯ ಬಾಂದವ್ಯ ಕೂಡ ಬೆಳೆದಿರುವುದರಿಂದ ಯಾವುದೇ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನಿಮಗೆ ಹಿಂಜರಿಕೆ ಇರುವುದಿಲ್ಲ. ಹಾಗೂ ಸಮಸ್ಯೆಗಳನ್ನು ಹಂಚಿಕೊಳ್ಳಲು ಒಂದು ಒಳ್ಳೆಯ ಅವಕಾಶ. ಹಾಗಾಗಿ ನೀವು ಹಣ ಮತ್ತು ಸಮಯವನ್ನು ಉಳಿಸಬಹುದು. 

ಉದಾಹರಣೆಗೆ ನಿಮ್ಮ ಮನೆಯಲ್ಲಿ ಒಬ್ಬರಿಗೆ ಕೆಮ್ಮು ನೆಗಡಿ ಬಂದಿದೆ ಎಂದುಕೊಳ್ಳಿ, ನಿಮ್ಮ ಪ್ಯಾಮಿಲಿ ಡಾಕ್ಟರ್ ಕೊಟ್ಟ ಜೌಷಧಿಯಿಂದ ಗುಣಮುಖರಾಗುತ್ತೀರಿ, ಕೆಲವು ದಿನಗಳ ನಂತರ ಮತ್ತೆ ಇನ್ನಾರಿಗೊ ಮನೆಯಲ್ಲಿ ಕೆಮ್ಮು, ನೆಗಡಿ ಬಂದಾಗ ಅದೇ ಜೌಷಧಿಯನ್ನು ನೀವು ನಿಮ್ಮ ಪ್ಯಾಮಿಲಿ ಡಾಕ್ಟರನ್ನು ಫೋನ್ ಮೂಲಕ ಸಲಹೆ ತಗೆದುಕೊಂಡು ಉಪಯೋಗ ಮಾಡಿಕೊಂಡಲ್ಲಿ ನಿಮಗೆ ಸಮಯ ಮತ್ತು ಹಣ ಉಳಿಯುತ್ತದೆ. 

ಪ್ಯಾಮಿಲಿ ಡಾಕ್ಟರ್ ನಿಮಗೆ ಆತ್ಮೀಯವಾಗಿರುವುದರಿಂದ ಆಸ್ಪತ್ರೆಗಳ ಮಾಹಿತಿ ಹೆಚ್ಚಿನ ಚಿಕಿತ್ಸೆಗಳ ಅರಿವು, ಜೌಷಧಿಗಳ ಮಾಹಿತಿ ಹಾಗೂ ಅಡ ಪರಿಣಾಮಗಳ ಬಗ್ಗೆ ತಿಳಿಸಿ ಹೇಳುವುದರ ಜೊತೆಗೆ ಕೆಲವು ಗಂಭೀರ ಕಾಯಿಲೆಗೆ ಚಿಕಿತ್ಸೆ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಬಲ್ಲರು 

ನಿಮ್ಮ ಕಾಯಿಲೆಗೆ ಮತ್ತೊಂದು ಅಭಿಪ್ರಾಯ (ಖಜಛಿಠಜ ಠಟಿಠ) ಪಡೆದುಕೊಳ್ಳಿರಿ 

ಕೆಲವು ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ಮತ್ತೊಬ್ಬರ ವೈದ್ಯರ ಅಭಿಪ್ರಾಯ ತಗೆದುಕೊಳ್ಳುವುದು ಸೂಕ್ತ. 

ಉದಾಹರಣೆಗೆ: ಒಬ್ಬ ವ್ಯಕ್ತಿ ಎದೆ ನೋವಿಗಾಗಿ ಆಸ್ಪತ್ರೆಗೆ ಹೊದಾಗ ನಿಮಗೆ ಹಾರ್ಟಲ್ಲಿ ಬ್ಲಾಕ್‌ಗಳಿವೆ ನಿಮಗೆ ಓಪನ್ ಹಾರ್ಟ ಸರ್ಜರಿ ಮಾಡಲೇಬೇಕು ಎಂದು ಹೇಳಿದರೆ ನೀವು ಒಮ್ಮೆಲೆ ಒಪ್ಪಿಕೊಳ್ಳವುದಕ್ಕಿಂತ ಚಿಕಿತ್ಸೆಗೆ ಇರುವ ಪರ್ಯಾಯ ಮಾರ್ಗಗಳ ಬಗ್ಗೆ  ವೈದ್ಯರೊಂದಿಗೆ ಚರ್ಚಿಸಿ. ನಿಮಗೆ ಆ ವೈದ್ಯರ ಸಲಹೆ ಸೂಕ್ತ ಅನಿಸಿದಿದ್ದಲ್ಲಿ ಮತ್ತೊಂದು ಅಭಿಪ್ರಾಯ (ಖಜಛಿಠಜ ಠಟಿಠ) ಅಂದರೆ, ನಿಮ್ಮ ಎಲ್ಲ ರಿಪೊರ್ಟ ತಗೆದುಕೊಂಡು ಮತ್ತೊಬ್ಬರ ವೈದ್ಯರ ಸಲಹೆ ಪಡೆದುಕೊಂಡು ನಿಮ್ಮ ಆರೋಗ್ಯದ ದೃಷ್ಠಿಯಿಂದ ಯಾವುದು ಸೂಕ್ತ ಅನಿಸುತ್ತದೆ ಅದನೇ ಮಾಡಿ. 

ನಿಮ್ಮ ಮೊಬೈನಲ್ಲಿ ಆರೋಗ್ಯ ಸಾಹಾಯವಾಣಿ ಬರೆದಿಟ್ಟುಕೊಳ್ಳಿ: 

ತುರ್ತು ಸಮಯದಲ್ಲಿ ಸಾಹಾಯವಾಗುವಂತಹ ನಿಮ್ಮ ಪ್ಯಾಮಿಲಿ ಡಾಕ್ಟರ್ ಫೋನ್ ನಂಬರ್ ಮತ್ತು ಸರ್ಕಾರದ  ಆರೋಗ್ಯ ಸಾಹಾಯವಾಣಿ 104 ಮತ್ತು  ಆಂಬ್ಯುಲೆನ್ಸ್‌ಗಾಗಿ 108ಕ್ಕೆ ಸಂರಿ​‍್ಕಸಿ; 

- ಶರಣಪ್ಪ ಮಾಳಗಿಮನಿ 

ಧಾರವಾಡ. 

- * * * - 


ಸುದ್ದಿ ಓದಿ