ಹರಗಿನಡೋಣಿ: ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ
ಬಳ್ಳಾರಿ:ಮಾ27: ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹರಗಿನಡೋಣಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಯ ಮುಂದುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆೆ ಮನವಿ ಅರ್ಿಸಿದರು.
ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸಾರ್ವಜನಿಕರಿಗೆ ಬೇಕಾಗಿರುವ ಮೂಲ ಭೂತ ಸೌಲಭ್ಯಗಳು ಇಲ್ಲದ ಕಾರಣ, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು ಕೂಡ, ಪತ್ರಗಳು ಮನವಿ ಪತ್ರಗಳಾಗಿ ಉಳಿದಿವೆ ಹೊರತು ಯಾವುದೇ ಕ್ರಮ ಕೈಗೊಳ್ಳದೇ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಎಂದು ಆರೋಪಿಸಿದರು.
ಮುಖ್ಯವಾಗಿ ನಮ್ಮ ಗ್ರಾಮವು ಗಣಿನಾಡು ಗ್ರಾಮವಾಗಿದ್ದು, ಹರಗಿನಡೋಣಿಯಿಂದ ಬಳ್ಳಾರಿಗೆ ಕೇವಲ 15 ಕೀಮೀ. ದೂರ ಇದ್ದರೂ ಈ ಗ್ರಾಮವು ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧವೇ ಇಲ್ಲದಂತೆ ಅಧಿಕಾರಿಗಳು ತಾತ್ಸಾರ ಮನೋಭಾವನೆಯನ್ನು ತೋರಿಸುತ್ತಿದ್ದಾರೆ. ಕಳೆದ ಬಾರಿ 2018ನೇ ಸಾಲಿನಲ್ಲಿ ಉಪಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಮಸ್ಯೆಗಳಿಗೆ ಸೂಕ್ತ ಮತ್ತು ಖಾಯಂ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.. ನಂತರ ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ನಾವು ಮುಂದಿನ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸೋಮಶೇಖರ್ ಗೌಡ, ಎರಿಸ್ವಾಮಿ, ಆರ್. ಶಿವರಾಮ ರೆಡ್ಡಿ, ದೊಡ್ಡಬಸಪ್ಪ, ಗುರೆಳ್ಳು ರಾಜ, ಗೋವಿಂದ ಹರಗಿನ ದೋಣಿ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಮನವಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಹರಗಿನ ಡೋಣಿ ಗ್ರಾಮದಿಂದ ಕುಡುತಿನಿ ಮಾರ್ಗವಾಗಿ ಸಂಚಾರ ಮಾಡಲು ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡುವದು. ಊರಿನ ಸುತ್ತಮುತ್ತಲಿನ ಕಾರ್ಖಾನೆಗಳ ವಾಯು ಮಾಲಿನ್ಯದ ನಿಯಮಗಳನ್ನು ಗಾಳಿಗೆ ತೂರಿ ವಿಷಪೂರಿತ ಹೊಗೆಯನ್ನು ಹೊರಗೆ ಬಿಡುವುದರಿಂದ ರೈತರ ಬೆಳೆಗೆ ಹಾನಿ ಉಂಟು ಮಾಡುವುದಲ್ಲದೆ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿರುವ ಕಾರಣ ಕಾರ್ಖಾನೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವದು.ಜಿಲ್ಲಾ ಆರೋಗ್ಯ ಕೇಂದ್ರದ (ಆಊಓ ) ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕೆಂಬ ಬೇಡಿಕೆಗಳನ್ನು ಮಂಡಿಸಲಾಗಿದೆ.