ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹನುಮಂತ ನಾಮಪತ್ರ ಸಲ್ಲಿಕೆ
ಬಳ್ಳಾರಿ 09: ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯತ್ವ ಬಯಸಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೆ ಹನುಮಂತ ಇವರು 22ನೇ ವಾರ್ಡ್ನಿಂದ ನಾಮಪತ್ರವನ್ನು ಸಲ್ಲಿಸಿದರು.
ಕಪ್ಪಗಲ್ಲು ರಸ್ತೆಯ ಬ್ರಹ್ಮಯ್ಯ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿ ಮಾ. 9ರಂದು ನಗರದ ಅದಿದೇವತೆ ದುರ್ಗಮ್ಮ ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ನೂರಾರು ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿನ ಸಂಖ್ಯಾಶಾಸ್ತ್ರ ಕಛೇರಿಯಲ್ಲಿ ಚುನಾವಣಾಧಿಕಾರಿ ವಾಗೀಶ್ರವರಿಗೆ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ ಹನುಮಂತು ಪತ್ರಕರ್ತರ ಜೊತೆ ಮಾತನಾಡಿ, ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುತ್ತೇನೆ. ಎರಡು ಅವಧಿಗೆ ವಾರ್ಡ್ನ ಅಧ್ಯಕ್ಷರಾಗಿ ಕೆಲಸ ಮಾಡಿರುತ್ತೇನೆ. ನನ್ನ ಸೇವೆಯನ್ನು ಪರಿಗಣಿಸಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಸಚಿವ ಶ್ರೀರಾಮುಲು ಮತ್ತು ನಗರ ಶಾಸಕ ಜಿ ಸೋಮಶೇಖರ್ ರೆಡ್ಡಿ ಹಾಗೂ ಬಿಜೆಪಿ ಮುಖಂಡರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ವಾರ್ಡ್ನ ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುತ್ತೇನೆ. ಮತ್ತು ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಸಹಕಾರ ಮಾಡಿರುತ್ತೇನೆ. ಈ ಎಲ್ಲಾ ನನ್ನ ಸಾರ್ವಜನಿಕ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಸದರಿ ವಾರ್ಡ್ನ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿ.ಜೆ.ಪಿ ಮುಖಂಡರು ಮತ್ತು ವಾರ್ಡ್ ಮುಖಂಡ ಗುಜರಿ ಅಬ್ದುಲ್ ಅಜೀಜ್, ರಾಮಾಂಜಿನಿ, ಎರ್ರಿಸ್ವಾಮಿ, ರಘು ರಾಘವೇಂದ್ರ, ರಮಣ, ರಾಮಕೃಷ್ಣ, ಕೆರೆ ವೆಂಕಟೇಶ್, ಎರ್ರಿಸ್ವಾಮಿ ಮತ್ತು ಹೊನ್ನೂರಸ್ವಾಮಿ ಸೇರಿದಂತೆ ಹಲವಾರು ಬೆಂಬಲಿಗರು ಮತ್ತು ಬಿ.ಜೆ.ಪಿ ಕಾರ್ಯಕರ್ತರು ಇದ್ದರು.