ತಾಳಿಕೋಟಿ

ಹನುಮಾನ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ನಡಹಳ್ಳಿಗೆ ಮನವಿ

ಹನುಮಾನ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ನಡಹಳ್ಳಿಗೆ ಮನವಿ

ತಾಳಿಕೋಟಿ: ನಾಗೂರ ಗ್ರಾಮದಲ್ಲಿ ಹನುಮಾನ ದೇವರ ದೇವಸ್ಥಾನವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮದ ಮಹಿಳೆಯರು ಶಾಸಕ, ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಅವರಲ್ಲಿ ಮನವಿಯ ಮೂಲಕ ಕೇಳಿಕೊಂಡರು.

ಮಂಗಳವಾರ ತಾಲೂಕಿನ ನಾಗೂರ ಗ್ರಾಮದಲ್ಲಿ ರೂ. 253 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಶಾಸಕ ನಡಹಳ್ಳಿಯವರನ್ನು ಭೇಟಿ ಮಾಡಿದ ಗ್ರಾಮದ ಮಹಿಳೆಯರ ನಿಯೋಗ ಈ ಮನವಿಯನ್ನು ಸಲ್ಲಿಸಿದರು.

ಅವರ ಮನವಿಗೆ ಸ್ಪಂದಿಸಿದ ಶಾಸಕ ನಡಹಳ್ಳಿ ಅವರು ನಾನು ಕೂಡ ಹನುಮನ ಭಕ್ತ, ನಿಮ್ಮ ಈ ಬೇಡಿಕೆಯನ್ನು ಈ ಕೂಡಲೆ ಮನ್ನಿಸುತ್ತಿದ್ದೇನೆ ಎಂದು ಹೇಳಿ ಸ್ಥಳದಲ್ಲಿಯೇ ಜೊತೆಗಿದ್ದ ಗುತ್ತಿಗೆದಾರ ಬಸನಗೌಡ ಪಾಟೀಲ (ವಣಿಕ್ಯಾಳ) ಕರೆದು ಯೋಜನೆ ರೂಪಿಸಿ ಆದಷ್ಟು ಬೇಗ ನಿಮರ್ಿಸಿಕೊಡಿ ಎಂದು ಆದೇಶಿಸಿದರು.

ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಮುಖಂಡರಾದ ಈರಣ್ಣ ಹೊಕ್ರಾಣಿ, ರಾಜಕುಮಾರ ತಳವಾರ, ಜಟ್ಟೆಪ್ಪ ಭಂಟನೂರ, ಸಾಹೇಬಗೌಡ ಮಕಾಶಿ, ಬಸವರಾಜ ಕುಂಬಾರ, ನಿಂಗಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ಬಸವರಾಜ ಕುಂಬಾರ, ಸೋಮಲಿಂಗ ಛಲವಾದಿ, ಶಿವಪ್ಪ ಗೋನಾಳ ಇದ್ದರು 

ಸುದ್ದಿ ಓದಿ